





ಕಾಣಿಯೂರು: ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿಯ ಸುವರ್ಣ ಮಹೋತ್ಸವದ ಸಮಾಲೋಚನೆ ಸಭೆ ಮತ್ತು ಸುವರ್ಣ ಮಹೋತ್ಸವದ ಪ್ರಯುಕ್ತ
ನಡೆದ ವೈಧಿಕ ಮತ್ತು ಧಾರ್ಮಿಕ ಕಾರ್ಯಕ್ರಮದ ಲೆಕ್ಕ ಪತ್ರ ಮಂಡನೆ ಜೂ 12ರಂದು ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂದಿರದಲ್ಲಿ ನಡೆಯಿತು.


ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿಯ ಮಾಜಿ ಅಧ್ಯಕ್ಷ ರು, ಸುವರ್ಣ ಮಹೋತ್ಸವದ ಸಮಿತಿ ಕಾರ್ಯಾಧ್ಯಕ್ಷ ಪದ್ಮಯ್ಯ ಗೌಡ ಅನಿಲರವರು ಮಾತನಾಡಿ, ಭಜನಾ ಮಂಡಳಿಯ ಸುವರ್ಣ ಮಹೋತ್ಸವದ ಪ್ರಯುಕ್ತ ನಡೆದ ವೈಧಿಕ ಧಾರ್ಮಿಕ ಕಾರ್ಯಕ್ರಮವು ಸಂಕಲ್ಪದಂತೆ ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ನಡೆದಿದೆ ಎಂದರು.
ಈ ಸಂದರ್ಭದಲ್ಲಿ ಭಜನಾ ಮಂಡಳಿಯ ಅಧ್ಯಕ್ಷರಾದ ಪುಟ್ಟಣ್ಣ ಗೌಡ ಮುಗರಂಜ ಅಧ್ಯಕ್ಷತೆ ವಹಿಸಿದರು. ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿಯ ಸುವರ್ಣ ಮಹೋತ್ಸವದ ಪ್ರಯುಕ್ತ ಮುಂದಿನ ದಿನಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ತೀರ್ಮಾನಿಸಲಾಯಿತು.





ಈ ಸಂದರ್ಭದಲ್ಲಿ ಭಜನಾ ಮಂಡಳಿಯ ಗೌರವಾಧ್ಯಕ್ಷ ಚಿದಾನಂದ ಉಪಾಧ್ಯಾಯ ಕಲ್ಪಡ, ಸುಂದರ ಬೆದ್ರಾಜೆ, ಲಕ್ಷ್ಮಣ ಗೌಡ ಮುಗರಂಜ, ಬಾಲಕೃಷ್ಣ ಬಸ್ತಿ ಬೆದ್ರಾಜೆ, ಶೇಷಪ್ಪ ಗೌಡ ಇಡ್ಯಡ್ಕ ಕಾಣಿಯೂರು, ಚಂದ್ರಶೇಖರ ಬರೆಪ್ಪಾಡಿ, ಶಿವರಾಮ ಉಪಾಧ್ಯಾಯ ಕಲ್ಪಡ, ರಾಜೇಶ್ ಮೀಜೆ , ಪದ್ಮನಾಭ ಗುಂಡಿಗದ್ದೆ, ಪರಮೇಶ್ವರ ಅನಿಲ, ಸುಂದರ ಕಂಡೂರು, ಚಂದಪ್ಪ ಗೌಡ ಅಬೀರ, ಪ್ರಮೀಳಾ ಅಜಿರಂಗಳ,ನಳಿನಿ ಕಟ್ಟತ್ತಾರು, ಸುನೀತಾ ಎ.ಸಿ, ಪಾರ್ವತಿ ಕಾಣಿಯೂರು, ದೀಕ್ಷಿತ್ ಕಂಪ, ಮೋಹಿತ್ ಅಬೀರ, ಬಾಲಚಂದ್ರ ಅಬೀರ, ನಾರಾಯಣ ಓಡಬಾಯಿ, ರಾಧಾಕೃಷ್ಣ ಪೆರ್ಲೋಡಿ, ಧರ್ಮಪಾಲ ಕಂಪ, ಸುರೇಶ್ ಓಡಬಾಯಿ, ಸುಧಾಕರ ಅಬೀರ, ವಿನಯ್ ಎಳುವೆ, ವಸಂತ ಪೆರ್ಲೋಡಿ, ಧರ್ಮಪಾಲ ಕಲ್ಪಡ, ಕೇಶವ ಕಾಣಿಯೂರು, ಪುನೀತ್ ಕಲ್ಪಡ, ಬಾಬು ಮಾದೋಡಿ, ರಾಧಾಕೃಷ್ಣ ಸಾರಿತ್ತಡಿ, ಕುಶಾಲಪ್ಪ ಗೌಡ ಮುಗರಂಜ, ಹರೀಶ್ ಮುಗರಂಜ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಭಜನಾ ಮಂಡಳಿಯ ಪದಾಧಿಕಾರಿಗಳು, ಸದಸ್ಯರು, ಮತ್ತಿತರರು ಉಪಸ್ಥಿತರಿದ್ದರು. ಕೋಶಾಧಿಕಾರಿ ಕೀರ್ತಿಕುಮಾರ್ ಏಳುವೆ ಲೆಕ್ಕ ಪತ್ರ ಮಂಡಿಸಿದರು. ಕಾರ್ಯದರ್ಶಿ ಜಯಂತ ಅಬೀರ ಸ್ವಾಗತಿಸಿ, ವಂದಿಸಿದರು.
ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿಯ ಸುವರ್ಣ ಮಹೋತ್ಸವದ ಪ್ರಯುಕ್ತ ನಡೆದ ವೈಧಿಕ ಮತ್ತು ಧಾರ್ಮಿಕ ಕಾರ್ಯಕ್ರಮ, ಮಹಾಗಣಪತಿ ಹೋಮ, ನರಸಿಂಹ ಹೋಮ, ಏಕಾಹ ಭಜನೆ, ಸತ್ಯನಾರಾಯಣ ಪೂಜೆ ಉದ್ಯಾಪನೆ ಕಾರ್ಯಕ್ರಮ ಹಾಗೂ ಭಜನಾ ಮಂಗಲೋತ್ಸವ ಕಾರ್ಯಕ್ರಮದ ಲೆಕ್ಕ ಪತ್ರ ಮಂಡಿಸಲಾಯಿತು.








