ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯಲ್ಲಿ ನೂತನ ಮಂತ್ರಿಮಂಡಲದ ಉದ್ಘಾಟನೆ

0

ಪುತ್ತೂರು: ಇಲ್ಲಿನ ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯಲ್ಲಿ 2024-25ನೇ ಶೈಕ್ಷಣಿಕ ಸಾಲಿನ ನೂತನ ಮಂತ್ರಿಮಂಡಲದ ಉದ್ಘಾಟನೆಯು ಜೂ.14ರಂದು ಶಾಲಾ ಸಭಾಭವನದಲ್ಲಿ ನಡೆಯಿತು.
ಪ್ರಾರಂಭದಲ್ಲಿ ಕಾರ್ಯಕ್ರಮದ ಅಧ್ಯಕ್ಷರು ಮತ್ತು ಮಂತ್ರಿಮಂಡಲದ ರಾಜ್ಯಪಾಲರಾಗಿರುವ ಶಾಲಾ ಮುಖ್ಯೋಪಾಧ್ಯಾಯಿನಿ ರೋಸಲಿನ್ ಲೋಬೋ ಹಾಗೂ ನೂತನ ಮಂತ್ರಿಮಂಡಲದ ಮಂತ್ರಿಗಳನ್ನು ವಾದ್ಯಾಗೋಷ್ಠಿಯಲ್ಲಿ ವೇದಿಕೆಗೆ ಬರಮಾಡಿಕೊಳ್ಳಲಾಯಿತು. ಪ್ರಜಾಪ್ರಭುತ್ವದ ಮಾದರಿಯಲ್ಲಿ ನೂತನ ಮಂತ್ರಿಮಂಡಲದ ರಚನೆ ಮಾಡಲಾಯಿತು. ಎಲ್ಲಾ ಮಂತ್ರಿಗಳನ್ನು ಸಭೆಗೆ ಪರಿಚಯಿಸಿದ ಬಳಿಕ ರಾಜ್ಯಪಾಲರಾಗಿರುವ ಮುಖ್ಯೋಪಾಧ್ಯಾಯಿನಿ ರೋಸ್‌ಲಿನ್ ಲೋಬೋ ಮಂತ್ರಿಗಳಿಗೆ ಪ್ರಮಾಣವಚನ ಬೋಧಿಸಿ, ಮಂತ್ರಿಗಳಿಗೆ ತಮ್ಮ ಜವಾಬ್ದಾರಿಯ ನಾಮಫಲಕವನ್ನು ನೀಡಿ ಆಭಿನಂದಿಸಿದರು. ಶಾಲಾ ನಾಯಕಿ ಸಮೀಕ್ಷ ಕೆ. ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಮಾತನಾಡಿದರು.



ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂತ್ರಿಮಂಡಲದ ರಾಜ್ಯಪಾಲರಾದ ಶಾಲಾ ಮುಖ್ಯೋಪಾಧ್ಯಾಯಿನಿ ರೋಸಲಿನ್ ಲೋಬೋ ಮಾತನಾಡಿ, ಶಾಲೆಯು ಸುಸೂತ್ರವಾಗಿ ಮುನ್ನಡೆಯುವಲ್ಲಿ ಮಂತ್ರಿಮಂಡಲದ ಮಂತ್ರಿಗಳ ಜೊತೆ ಶಾಲಾ ಎಲ್ಲಾ ವಿದ್ಯಾರ್ಥಿನಿಯರು ಸಮನಾದ ಜವಬ್ದಾರಿಯನ್ನು ಹೊಂದಿದ್ದಾರೆ. ಮಂತ್ರಿಮಂಡಲದ ಸರ್ವಸದಸ್ಯರು ಇತರರಿಗೆ ಆದರ್ಶರಾಗಬೇಕು. ಕಲಿಕೆಯಲ್ಲಿ ಮಾದರಿಯಾಗಿ ಇತರರಿಗೆ ಪ್ರೇರಣೆಯಾಗಬೇಕು. ಇಂದಿನ ಈ ನಾಯಕತ್ವದ ಅವಕಾಶವು ಮುಂದೆ ನಿಮ್ಮ ಜೀವನಕ್ಕೆ ಪ್ರೇರಣೆಯಾಗಲಿ ಎಂದು ಶುಭಹಾರೈಸಿದರು.
ವಿದ್ಯಾರ್ಥಿಗಳಾದ ಅಂಜಲಿ ನಾಯಕ್ ಮಂತ್ರಿಮಂಡಲದ ಮಂತ್ರಿಗಳನ್ನು ಪರಿಚಯಿಸಿದರು. ಜಝೀಲ ಸ್ವಾಗತಿಸಿ, ಧೃತಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here