ಪುತ್ತೂರಿನಲ್ಲಿ ಬಿದ್ದು ಸಿಕ್ಕಿದ ಚಿನ್ನದ ಸರ- ವಾರಿಸುದಾರರಿಗೆ ನೀಡಿ ಮಾನವೀಯತೆ ಮೆರೆದ ದಿನೇಶ್ ಭವನ ಲಾಡ್ಜ್ ನೌಕರ

0

ಪುತ್ತೂರು: ಪುತ್ತೂರು ದಿನೇಶ್ ಭವನದ ನೌಕರರೊಬ್ಬರಿಗೆ ಗಾಂಧಿ‌ಕಟ್ಟೆ ಬಳಿ ಬಿದ್ದು ಸಿಕ್ಕಿದ ಸುಮಾರು 27 ಗ್ರಾಂ ತೂಕದ ಚಿನ್ನದ ಸರವನ್ನು ವಾರಿಸುದಾರರಿಗೆ ಹಿಂದುರಿಗಿಸಿ ಪ್ರಾಮಾಣಿಕತೆ ಮೆರೆದ ಘಟನೆ ಜೂ.14ರಂದು ನಡೆದಿದೆ.

ಕುಂಬ್ರ ನಿವಾಸಿ ವಿದ್ಯಾ ರೈ ಎಂಬವರ ಸುಮಾರು 27 ಗ್ರಾಂ ತೂಕದ ಚಿನ್ನದ ಸರ ಪುತ್ತೂರು ಗಾಂಧಿ ಕಟ್ಟೆ ಬಳಿ ಕಳೆದುಹೋಗಿತ್ತು. ಈ ಚಿನ್ನದ ಸರ ಕೊಡಿಪಾಡಿ ನಿವಾಸಿ ದಿನೇಶ್ ಭವನ ಲಾಡ್ಜ್ ನೌಕರ ನವೀನ್ ಅವರಿಗೆ ಸಿಕ್ಕಿದೆ. ಅದನ್ನು ಪ್ರಾಮಾಣಿಕತೆಯಿಂದ ಪೊಲೀಸ್ ಠಾಣೆಗೆ ತಂದು ಒಪ್ಪಿಸಿದ್ದು, ಬಳಿಕ ವಿದ್ಯಾ ರೈ ಅವರನ್ನು ಠಾಣೆಗೆ ಕರೆಯಿಸಿ ಅವರಿಗೆ ಹಸ್ತಾಂತರಿಸಲಾಗಿದೆ. ನವೀನ್ ಅವರ ಪ್ರಾಮಾಣಿಕತೆಗೆ ಸಾರ್ವಜನಿಕ ಪ್ರಶಂಸೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here