ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಮಾನಹಾನಿ ಸ್ಟೇಟಸ್ – ಅಭಿಮಾನಿಗಳಿಂದ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು

0

ಪುತ್ತೂರು: ನಿಕಟಪೂರ್ವ ಸಂಸದ ನಳಿನ್ ಕುಮಾರ್ ಕಟೀಲ್ ಅವರ ವಿರುದ್ಧ ಮಾನಹಾನಿ ಸ್ಟೇಟಸ್ ಮತ್ತು ತೇಜೋವಧೆ ಮಾಡುವಂತೆ ಹಲವಾರು ಸಂದೇಶಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿರುವವರನ್ನು ಬಂಧಿಸಿ, ಅದರ ಹಿಂದಿರುವ ಜಾಲದ ಕುರಿತು ತನಿಖೆ ನಡೆಸುವಂತೆ ನಳಿನ್ ಕುಮಾರ್ ಕಟೀಲ್ ಅವರ ಅಭಿಮಾನಿ ಸೀತಾರಾಮ ರೈ ಕೆದಂಬಾಡಿಗುತ್ತು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಜೂ. 14ರಂದು ಬೆಳಗ್ಗಿನಿಂದ ವಾಟ್ಸ್ ಅಪ್‌ನಲ್ಲಿ ನಿರಂತರವಾಗಿ ಮಾಜಿ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ವಿರುದ್ಧ ಮಾನಹಾನಿಯಾಗುವಂತೆ ಸ್ಟೇಟಸ್ ಹಾಕುತ್ತಿದ್ದಾರೆ. ಅಜೀಜ್ ಎಂಬವರು ಮೊಬೈಲ್‌ ಸಂಖ್ಯೆ 90081XXXXX ನಿಂದ ಪ್ರವೀಣ್ ನೆಟ್ಟಾರ್ ಹತ್ಯೆಗೆ ಬಿಗ್ ಟ್ವಿಸ್ಟ್, ಹಣ ನೀಡಿ ಕೊಲೆ ಮಾಡಿಸಿದ ನಳಿನ್ ಕುಮಾರ್ ಕಟೀಲ್ ಎಂಬಿತ್ಯಾದಿ ಸಂದೇಶಗಳು ಹರಿದಾಡುತ್ತಿದೆ. ಅಲ್ಲದೆ ಪ್ರಸಾದ್ ಕೆ. 78922XXXXX ನಿಂದಲೂ ಸದ್ರಿ ವಿಚಾರವು ಪ್ರಚಾರವಾಗುತ್ತಿದೆ. ಇದನ್ನು ಹೆಚ್ಚಾಗಿ ಮುಸ್ಲಿಂ ಯುವಕರು ಶೇರ್ ಮಾಡುತ್ತಿದ್ದು, ಮಾಜಿ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ತೇಜೋವಧೆ ಮಾಡಲು ಮುಂದಾಗಿರುವುದು ಕಂಡು ಬರುತ್ತಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ತೊಂದರೆಯಾಗುವ ಸಂಭವ ಇರುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಈ ರೀತಿ ವಿನಾ ಕಾರಣವಾಗಿ  ನಳಿನ್ ಕುಮಾರ್ ಕಟೀಲ್ ವಿರುದ್ಧ ಮಾನಹಾನಿಕರವಾದ ಸಂದೇಶಗಳನ್ನು ಹರಡುತ್ತಿರುವುದರಿಂದ ಅವರ ಅಭಿಮಾನಿ ಬಳಗಕ್ಕೆ ತುಂಬಾ ನೋವುಂಟಾಗಿರುತ್ತದೆ. ಈ ಬಗ್ಗೆ ತಕ್ಷಣ ಪರಿಶೀಲನೆ ಮಾಡಿ ಮಾನಹಾನಿಕರವಾದ ಸಂದೇಶಗಳನ್ನು ರವಾನಿಸಿರುವರ ಮತ್ತು ಈ ಸಂದೇಶವನ್ನು ರವಾನಿಸುವವರ ಮತ್ತು ಇದರ ಹಿಂದಿನ ಶಕ್ತಿಗಳ ವಿರುದ್ಧ ಕ್ರಮ ಕೈಗೊಂಡು ನ್ಯಾಯ ಒದಗಿಸಿ ಕೊಡುವಂತೆ  ದೂರಿನಲ್ಲಿ ಹೇಳಲಾಗಿದೆ.

LEAVE A REPLY

Please enter your comment!
Please enter your name here