ಅಂಗತ್ತಡ್ಕ ಬಳಿ ಕಾಡಾನೆ ಪ್ರತ್ಯಕ್ಷ – ಕಣಿಯಾರು ಮಲೆ ರಬ್ಬರ್‌ ಪ್ಲಾಂಟೇಷನ್‌ ಕಡೆಗೆ ತೆರಳಿದ ಆನೆಗಳು

0

ಪುತ್ತೂರು: ಪುತ್ತೂರು ತಾಲೂಕಿನಾದ್ಯಂತ ದಿನಕ್ಕೊಂದು ಕಡೆ ಪ್ರತ್ಯಕ್ಷವಾಗಿ ಸ್ಥಳೀಯ ಜನರಲ್ಲಿ ಆತಂಕ ಸೃಷ್ಟಿಸುತ್ತಿದ್ದ ಎರಡು ಕಾಡಾನೆಗಳು ಇಂದು ಮತ್ತೆ ಪ್ರತ್ಯಕ್ಷವಾಗಿದೆ. ಅಂಗತ್ತಡ್ಕ ಅಂಗನವಾಡಿ ಬಳಿ ರಸ್ತೆಯಲ್ಲಿ ಎರಡು ಕಾಡಾನೆಗಳು ಒಂದಾಗಿ ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ತಿಂಗಳಾಡಿಯಿಂದ ತೆಗ್ಗು, ಓಲೆಮುಂಡೋವು ಕಡೆ ಪ್ರಯಾಣಿಸುವವರು ಎಚ್ಚರಿಕೆಯಿಂದಿರುವಂತೆ ಸ್ಥಳೀಯರೊಬ್ಬರು ವಿಡಿಯೋ ಸಹಿತ ಸಾಮಾಜಿಕ ಜಾಲತಾಣದಲ್ಲಿ ಜಾಗೃತಿ ಸಂದೇಶ ನೀಡಿದ್ದಾರೆ.ಇಂದು ಬೆಳಿಗ್ಗೆ ಕಣಿಯಾರು ಮಲೆ ರಬ್ಬರ್‌ ಪ್ಲಾಂಟೇಷನ್‌ ಕಡೆಗೆ ಆನೆ ತೆರಳಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಜನರ ನೆಮ್ಮದಿ ಕೆಡಿಸುತ್ತಿರುವ ಈ ಕಾಡಾನೆಗಳನ್ನು ಮತ್ತೆ ಕಾಡಿಗಟ್ಟುವಲ್ಲಿ ಅರಣ್ಯ ಇಲಾಖೆ ಮುತುವರ್ಜಿ ವಹಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here