ಪುತ್ತೂರು: ಡಾ ಕೆ ಶಿವರಾಮ ಕಾರಂತ ಸರಕಾರಿ ಪ್ರೌಢಶಾಲೆಯ ಮಂತ್ರಿಮಂಡಲದ ಪ್ರಮಾಣವಚನ,ವಿವಿಧ ಸಂಘಗಳ ಉದ್ಘಾಟನೆ

0

ಪುತ್ತೂರು:ಪುತ್ತೂರು ನಗರ ಡಾ ಕೆ ಶಿವರಾಮ ಕಾರಂತ ಸರಕಾರಿ ಪ್ರೌಢಶಾಲೆ ಇಲ್ಲಿನ 2024 25 ನೇ ಸಾಲಿನ ಶಾಲಾ ಮಂತ್ರಿಮಂಡಲದ ಪ್ರಮಾಣ ವಚನ ಮತ್ತು ವಿವಿಧ ಸಂಘಗಳ ಉದ್ಘಾಟನೆಯು ಜೂ.15ರಂದು ಎಸ್ ಡಿ ಎಂ ಸಿ ಯ ಕಾರ್ಯಧ್ಯಕ್ಷ ದಿನೇಶ್ ಕಾಮತ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ವಿಜ್ಞಾನ ಸಂಘ,ಚುನಾವಣಾ ಸಾಕ್ಷರತಾ ಕ್ಲಬ್,ಚಿಗುರು ಸಾಹಿತ್ಯ ಸಂಘ,ಗಣಿತ ಸಂಘ, ಧ್ಯಾನ್ ಚಂದ್ ಕ್ರೀಡಾ ಸಂಘಗಳ ಉದ್ಘಾಟನೆಯನ್ನು ಎಸ್ ಡಿ ಎಂ ಸಿ ಕಾರ್ಯಾಧ್ಯಕ್ಷರು ದೀಪ ಬೆಳಗಿಸುವ ಮೂಲಕ ನೆರವೇರಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಜಲಜಾಕ್ಷಿ ಕೆ ಎಂ ರವರು ಪ್ರಮಾಣವಚನ ಬೋಧಿಸಿದರು.ವಿದ್ಯಾರ್ಥಿ ನಾಯಕನಾಗಿ 10ನೇ ತರಗತಿಯ ಅಭಿಷೇಕ್ ಹಾಗೂ ಉಪನಾಯಕನಾಗಿ 9ನೇ ತರಗತಿಯ ರಂಜಿತ್ ಕುಮಾರ್ ಪ್ರಮಾಣ ವಚನ ಸ್ವೀಕರಿಸಿದರು.ಕನ್ನಡ ಶಿಕ್ಷಕ ನಾರಾಯಣ ನಾಯ್ಕ್ ಎ ಶಾಲಾ ಸಂಸತ್ತು ಮತ್ತು ವಿವಿಧ ಸಂಘಗಳ ಕಾರ್ಯ ಚಟುವಟಿಕೆಗಳ ಬಗ್ಗೆ ತಿಳಿಸಿದರು. ಕಲಾ ಶಿಕ್ಷಕರಾದ ನಳಿನಿ ಎ ಸ್ವಾಗತಿಸಿ, ವಿಜ್ಞಾನ ಶಿಕ್ಷಕ ವೀಣಾ ಎ ವಿ ವಂದಿಸಿದರು. ಹಿಂದಿ ಶಿಕ್ಷಕ ಅಬ್ರಹಾಂ ಎಸ್ ಎ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ಪ್ರಮೀಳಾ ಬಿ.ಕೆ, ಡಾ.ಚಾಂದಿನಿ,ಪುಷ್ಪಾವತಿ,ಕಚೇರಿ ಸಿಬ್ಬಂದಿ ಮಲ್ಲರಾಜು ಸಹಕರಿಸಿದರು.

LEAVE A REPLY

Please enter your comment!
Please enter your name here