ಭಕ್ತಕೋಡಿ: ತಾಳಿ ಮನೆಯಲ್ಲಿಟ್ಟು ವಿವಾಹಿತೆ ನಾಪತ್ತೆ-3 ತಿಂಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆ ಮತ್ತೆ ನಾಪತ್ತೆ

0

ಪುತ್ತೂರು : ತಾಳಿಯನ್ನು ತನ್ನ ಮನೆಯಲ್ಲಿಟ್ಟು ವಿವಾಹಿತೆಯೊಬ್ಬರು ನಾಪತ್ತೆಯಾಗಿರುವ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸರ್ವೆ ಗ್ರಾಮದ ಭಕ್ತಕೋಡಿಯ ಕಲ್ಲಗುಡ್ಡೆ, ಹರೀಶ ಎಂಬರ ಪತ್ನಿ ದೀಪಿಕಾ(23) ನಾಪತ್ತೆಯಾದವರು. ಘಟನೆಗೆ ಸಂಬಂಧಿಸಿದಂತೆ ನಾಪತ್ತೆಯಾದ ದೀಪಿಕಾರವರ ಪತಿ ಹರೀಶ್ ನೀಡಿದ ದೂರಿನಲ್ಲಿ, ತನ್ನ ಪತ್ನಿ ತಾನು ಕಟ್ಟಿದ ತಾಳಿಯನ್ನು ಮನೆಯಲ್ಲಿಯೇ ಬಿಟ್ಟು ಜೂ.13ರಂದು ಮನೆಯಿಂದ ಕಾಣೆಯಾಗಿದ್ದಾಳೆ. ಮನೆಯ ಸುತ್ತ ಮುತ್ತಲ ಪರಿಸರ ಮತ್ತು ಸಂಬಂಧಿಕರಲ್ಲಿ ವಿಚಾರಿಸಿ ಹುಡುಕಾಡಿದರೂ ಆಕೆ ಪತ್ತೆಯಾಗಿಲ್ಲ ಎಂದು ತಿಳಿಸಿದ್ದಾರೆ.


3 ತಿಂಗಳ ಹಿಂದೊಮ್ಮೆ ನಾಪತ್ತೆಯಾಗಿದ್ದ ದೀಪಿಕಾ….!
ಜೂ.13ರಂದು ಮನೆಯಲ್ಲಿ ತಾಳಿಯನ್ನು ಬಿಟ್ಟು ಕಾಣೆಯಾಗಿರುವ ದೀಪಿಕಾ ಕಳೆದ 3 ತಿಂಗಳ ಹಿಂದೆ ಕಡಬದ ಕರ್ಮಾಯಿ ನಿವಾಸಿ ಪ್ರಶಾಂತ್ ಜೊತೆಗೆ ಹೋಗಿದ್ದು, ಬಳಿಕ ಮಂಗಳೂರಿನಲ್ಲಿ ಪತ್ತೆ ಮಾಡಿ ಅಲ್ಲಿಂದ ಕರೆದುಕೊಂಡು ಬರಲಾಗಿತ್ತು. ಈಗಲೂ ಪ್ರಶಾಂತ ಜೊತೆ ಹೋಗಿರುವ ಬಗ್ಗೆ ಸಂಶಯವಿರುತ್ತದೆ ಎಂದು ಹರೀಶ್ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here