ಆಲಂಕಾರು ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ

0

ಒಟ್ಟು ವ್ಯವಹಾರ 12,76,30,433 ರೂ, ನಿವ್ವಳ ಲಾಭ 8,69,991
ಹಾಲಿನ ದರ ಹೆಚ್ಚಿಸಲು ಸದಸ್ಯರಿಂದ ಆಗ್ರಹ


ಆಲಂಕಾರು: ಆಲಂಕಾರು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆಯು ಸಂಘದ ಸಭಾಭವನದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಮಾಧವ ಪೂಜಾರಿ ಕಯ್ಯಪೆ ಅಧ್ಯಕ್ಷತೆ ವಹಿಸಿ ಮಾತನಾಡಿ 2023_24 ನೇ ಸಾಲಿನ ಲೆಕ್ಕ ಪರಿಶೋದನೆಯಲ್ಲಿ ಸಂಘವು ಎ. ತರಗತಿಯಲ್ಲಿದ್ದು ಸಂಘವು 12,76,30,433 ರೂ ಒಟ್ಟು ವ್ಯವಹಾರ ನಡೆಸಿ ನಿವ್ವಳ ಲಾಭ 8,69,991 ರೂಪಾಯಿ ಗಳಿಸಿ 65% ಡಿವಿಡೆಂಡ್ ನೀಡುವುದಾಗಿ ತಿಳಿಸಿದರು.

ಹಾಲಿನ ದರ ಏರಿಕೆಗೆ ಸದಸ್ಯರಿಂದ ಆಗ್ರಹ
ಸಾಮಾನ್ಯ ಸಭೆಯಲ್ಲಿ ಸಂಘದ ಸದಸ್ಯರಾದ ಉಮೇಶ್ ರೈ ಬಲೆಂಪೋಡಿಯವರು ರಾಸುಗಳ ಸಾಕಾಣಿಗೆ ಅಧಿಕ ಖರ್ಚುವೆಚ್ಚಗಳು ತಗಲುತ್ತಿದ್ದು ಹಾಲಿನ ದರ ಏರಿಸಿಬೇಕೆಂದು ಅಗ್ರಹಿಸಿದರು. ಇದಕ್ಕೆ ಉಳಿದ ಸದಸ್ಯರು ಬೆಂಬಲ ವ್ಯಕ್ತಪಡಿಸಿದರು ಅಂತಿಮವಾಗಿ ಹಾಲಿನ ದರ ಏರಿಕೆಗೆ ಸಂಬಂಧಪಟ್ಟ ಇಲಾಖೆಗೆ ಬರೆಯುವುದಾಗಿ ತೀರ್ಮಾನಿಸಿದರು.ದ.ಕ ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಡಾ.ಸತೀಶ್ ರಾವ್ ಅತಿಥಿಯಾಗಿ ಮಾತನಾಡಿ ಕೃಷಿ ಉಳಿಯಬೇಕಾದರೇ ಹೈನುಗಾರಿಕೆ ಅತೀ ಅಗತ್ಯ ಯವಕರು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಕೃಷಿಯಲ್ಲಿ ಹೆಚ್ಚಿನ ಲಾಭವನ್ನು ಪಡೆಯಬೇಕು, ರೈತರು ಹಾಲಿನ ಉತ್ಪನ್ನಗಳಿಗೆ ಆದ್ಯತೆ ನೀಡಬೇಕು.ಸರಕಾರ ಕೂಡ ಹೈನುಗಾರಿಕೆಗೆ ಆಧ್ಯತೆ ನೀಡುತ್ತಿದೆ.ಚರ್ಮಗಂಟು ರೋಗದಿಂದ ಕಳೆದ ವರ್ಷದಿಂದ ಹಾಲಿನ ಇಳುವರಿ ಸ್ವಲ್ಪ ಕಡಿಮೆಯಾಗಿದೆ. ಸಂಘದ ಸದಸ್ಯರು ರಾಸುಗಳಿಗೆ ಹೆಣ್ಣು ಕರುಗಳ ಲಿಂಗ ಆಧಾರಿತ ಕೃತಕ ಗರ್ಭಧಾರಣೆ ಮಾಡಿಸಿ ಹೆಚ್ಚು ಇಳುವರಿ ಪಡೆಯುವಂತೆ ತಿಳಿಸಿ ಹಸಿಹುಲ್ಲು,ಜೋಳದ ಬಿತ್ತನೆಯ ಬಗ್ಗೆ ಮಾಹಿತಿ ನೀಡಿ ರೈತರು ಧೃತಿಗೆಡದೆ ಹೈನುಗಾರಿಕೆಯಲ್ಲಿ ಮುಂದುವರಿಯುವಂತೆ ತಿಳಿಸಿದರು.


ದ.ಕ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಆದಿತ್ಯರವರು ಸಂಘದ ಸದಸ್ಯರು ಸಮಯಕ್ಕೆ ಸರಿಯಾಗಿ ಸಂಘಕ್ಕೆ ಹಾಲು ಪೂರೈಕೆ ಮಾಡಿ ಹಾಲಿನ ತಾಜತನವನ್ನು ಕಾಪಡಿಕೊಳ್ಳಬೇಕೆಂದು ತಿಳಿಸಿ ಸರಕಾರದಿಂದ ಹಾಗೂ ಒಕ್ಕೂಟದಿಂದ ಸವಲತ್ತುಗಳನ್ನು ತಿಳಿಸಿ ಹಸಿರು ಮೇವು, ರಬ್ಬರ್ ಮ್ಯಾಟ್, ಹಾಲು ಕರೆಯುವ ಯಂತ್ರ,ಮಿನಿಡೈರಿಗೆ ಸಿಗುವ ಸಬ್ಸಿಡಿಯ ಬಗ್ಗೆ ಮಾಹಿತಿ ನೀಡಿದರು.


ಸಭೆಯ ಅಧ್ಯಕ್ಷತೆ ವಹಿಸಿದ್ದ ಮಾಧವ ಪೂಜಾರಿ ಕಯ್ಯಾಪೆ ಸಂಘದ ಸದಸ್ಯರ ಸಹಕಾರ ಹಾಗು ಹಿರಿಯರ ಮಾರ್ಗದರ್ಶನದಿಂದ ಸಂಘವು ದೊಡ್ಡ ಇಷ್ಟು ಮಟ್ಟಕ್ಕೆ ಬೆಳೆದಿದೆ ಇದರ ಏಳಿಗೆಗೆ ಸಂಘದ ಕಾರ್ಯದರ್ಶಿ ಗಣೇಶ್ ರೈಯವರ ಪಾತ್ರ ಬಹಳ ಹಿರಿದಾಗಿದ್ದು ಅವರು 38 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ವಯೋಸಹಜವಾಗಿ ಸೇವಾ ನಿವೃತ್ತರಾಗಲಿದ್ದಾರೆ.ಅವರ ಬೀಳ್ಕೋಡುಗೆ ಕಾರ್ಯಕ್ರಮ ಜುಲೈ 1 ರಂದು ಸಂಜೆ ಆಲಂಕಾರಿನಲ್ಲಿ ನಡೆಯಲಿದ್ದು ಸಂಘದ ಸದಸ್ಯರು ಎಲ್ಲರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಿ ವಾರ್ಷಿಕ ಸಾಮಾನ್ಯ ಸಭೆಗೆ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿ ಮುಂದೆಯೂ ಸಂಘದ ಅಭಿವೃದ್ದಿಗೆ ಎಲ್ಲಾರು ಸಹಕರಿಸುವಂತೆ ವಿನಂತಿಸಿದರು. ಇದೇ ಸಂಧರ್ಭದಲ್ಲಿ ಒಕ್ಕೂಟ ದಿಂದ ಜಾನುವಾರುಗಳಲ್ಲಿ ಕಾಣಿಸುವ ಪ್ರಮುಖ ರೋಗಗಳಿಗೆ ಪಾರಂಪರಿಕ ಪಶುವೈದ್ಯಕೀಯ ಔಷಧಿಯ ಕಿರು ಕೈಪಿಡಿಯನ್ನು ಉಚಿತವಾಗಿ ವಿತರಿಸಲಾಯಿತು.

ಒಂದು ಲಕ್ಷಗಿಂತ ಅಧಿಕ ಮೊತ್ತದ ಹಾಲನ್ನು ಸಂಘಕ್ಕೆ ಪೂರೈಸಿದ ಸಂಘದ ಎಲ್ಲಾ ಸದಸ್ಯರಿಗೆ ಸಭೆಯಲ್ಲಿ ಬಹುಮಾನ ವಿತರಿಸಲಾಯಿತು. ಸಂಘದ ಕಾರ್ಯದರ್ಶಿ ಗಣೇಶ್ ರೈ ಕೆ. ಆಯವ್ಯಯ, ವರದಿ, ಮಂಜೂರಾತಿಯ ಹಾಗು ಇನ್ನಿತರ ವಿಷಯದ ಬಗ್ಗೆ ತಿಳಿಸಿದರು. ಸಂಘದ ನಿರ್ದೇಶಕ ರಾಧಾಕೃಷ್ಣ ರೈ ಮನವಳಿಕೆ ಪ್ರಾರ್ಥಿಸಿ, ಸಂಘದ ಅಧ್ಯಕ್ಷ ಮಾಧವ ಪೂಜಾರಿ ಸ್ವಾಗತಿಸಿ ನಿರ್ದೇಶಕರಾದ ಹರೀಶ್ ಗೌಡ ಏಂತಡ್ಕ ಬಹುಮಾನದ ಪಟ್ಟಿ ವಾಚಿಸಿ,ರಾಮಣ್ಣ ಗೌಡ ಸುರುಳಿ ಧನ್ಯವಾದ ಸಮರ್ಪಿಸಿದರು.


ಸಂಘದ ಉಪಾಧ್ಯಕ್ಷ ಮುರಳೀದರ ರೈ, ನಿರ್ದೇಶಕರಾದ ಜನಾರ್ಧನ ಭಂಡಾರಿ ಕುಪ್ಲಾಜೆ,ಲಿಂಗಪ್ಪ ಮಡಿವಾಳ, ಭಾಸ್ಕರ ಎನ್,ಮನೋಜ್ ಆಲಡ್ಕ,ಕರಿಯ ಮುಗೇರ,ಗೋಪಾಲ ಶಾಂತಿಗುರಿ,ಪ್ರೇಮಲತಾ ಆಲಡ್ಕ,ರಾಜೇಶ್ವರಿ ಪಿ.ರೈ ವೇದಿಕೆಯಲ್ಲಿ ಉಪಸ್ಥಿತರಿದ್ದು ಬಹುಮಾನ ವಿತರಿಸಿದರು.ಸಂಘದ ಸದಸ್ಯರಾದ ಪ್ರಶಾಂತ ರೈ ಮನವಳಿಕೆ,ಪ್ರದೀಪ್ ರೈ ಮನವಳಿಕೆ,ಮೇದಪ್ಪ ಗೌಡ, ಸುಧಾಕರ ರೈ ಮನವಳಿಕೆ, ಸೇರಿದಂತೆ ಹಲವು ಮಂದಿ ವಿವಿಧ ಸಲಹೆ ಸೂಚನೆ ನೀಡಿದರು. ಸಂಘದ ಸಿಬ್ಬಂದಿಗಳಾದ ಶೀನಪ್ಪ ಗೌಡ ಕೆ. ಬಾಲಚಂದ್ರ, ಅನಿತಾ, ವಿಖ್ಯಾತ್ ರೈ ಸಹಕರಿಸಿದರು.

LEAVE A REPLY

Please enter your comment!
Please enter your name here