ಇ ಫೌಂಡೇಶನ್ ಇಂಡಿಯಾ ವತಿಯಿಂದ ಸ್ಕೂಲ್ ಚಲೋ ಕಾರ್ಯಕ್ರಮ

0

ಪುತ್ತೂರು:- ಶೈಕ್ಷಣಿಕ ಅಭಿವೃದ್ಧಿಗಾಗಿ ಸದಾ ಪ್ರೋತ್ಸಾಹ ನೀಡುತ್ತಾ ಬಂದಿರುವ ಇ ಫೌಂಡೇಶನ್ ಇಂಡಿಯಾ ವತಿಯಿಂದ ಸ್ಕೂಲ್ ಚಲೋ ಕಾರ್ಯಕ್ರಮವು ಸಂಸ್ಥೆಯ ಕಾರುಣ್ಯ ಕಛೇರಿಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಯಮಿ ಯುನಿಟಿ ಶಮೀರ್ ಹಾಜಿ ಇವರು ಸಾಂಕೇತಿಕವಾಗಿ ಪುಸ್ತಕ ಹಾಗೂ ಬ್ಯಾಗ್ ಗಳನ್ನು ವಿತರಿಸುವುದರೊಂದಿಗೆ ಉದ್ಘಾಟಿಸಿದರು. ಪ್ರಾಸ್ತಾವಿಕ ಮಾತುಗಳನ್ನಾಡಿದ ಇಮ್ತಿಯಾಝ್ ಪಾರ್ಲೆ ಅವರು ಶಿಕ್ಷಣಕ್ಕೆ ಇ ಫೌಂಡೇಶನ್ ಪುತ್ತೂರು ನೀಡುತ್ತಿರುವ ಕೊಡುಗೆ ಮತ್ತು ಶೈಕ್ಷಣಿಕ ಪ್ರಗತಿ ಸಾಮುದಾಯಿಕ ಅನಿವಾರ್ಯ ಕೂಡ ಆಗಿದೆ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ಆರಿಫ್ ಪಿ ಕೆ ಅವರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನೀಡುತ್ತಿರುವ ಈ ಎಲ್ಲಾ ಕಲಿಕೆಯ ಸಲಕರಣೆಗಳು ಉತ್ತಮ ರೀತಿಯಲ್ಲಿ ಸದ್ಭಳಕೆ ಮಾಡಿ ಉನ್ನತ ಶಿಕ್ಷಣವನ್ನು ಪಡೆದು ಸಮಾಜದಲ್ಲಿ ಅತ್ಯುತ್ತಮ ವ್ಯಕ್ತಿಗಳಾಗಿ ಎಲ್ಲರಿಗೂ ಮಾದರಿಯಾಗಬೇಕೆಂದು ಹೇಳಿದರು.

ಉದ್ಯಮಿಗಳಾದ ಕಲಂದರ್ ಶಾಫಿ ಬೊಲ್ಲಾನ ಗೋಳಿಕಟ್ಟೆ ವಿದ್ಯಾರ್ಥಿಗಳಿಗೆ ಬ್ಯಾಗ್ ಗಳನ್ನು ನೀಡಿ ಪ್ರೋತ್ಸಾಹಿಸಿದರು. ವೇದಿಕೆಯಲ್ಲಿ ಪಿ ಬಿ ಅಬ್ದುಲ್ಲಾ ಹಾಜಿ,
ರಜಾಕ್ ಸಾಲ್ಮರ, ಪಡೀಲ್ ಜುಮಾ ಮಸೀದಿ ಅಧ್ಯಕ್ಷರಾದ ಆರ್ ಪಿ ಅಬ್ದುಲ್ ರಜಾಕ್, ಇ ಫ್ರೆಂಡ್ಸ್ ಕೋಶಾಧಿಕಾರಿ ಹೈದರ್ ಕೂರ್ನಡ್ಕ, ಕಾರ್ಯದರ್ಶಿ ನೌಶಾದ್ ಕೂರ್ನಡ್ಕ, ಪದಾಧಿಕಾರಿಗಳಾದ ಇಜಾಝ್ ಪುತ್ತೂರು, ರಿಯಾಝ್ ಝರಾ, ಆರಿಸ್, ಆಸೀಫ್ ಐಡಿಯಾ, ಆಸೀಫ್ ಅಜ್ಜಿಕಟ್ಟೆ,ಇಕ್ಬಾಲ್ ಚಮ್ಮಕ್ ,ಮುಝಮ್ಮಿಲ್ ಚಾಯ್ಸ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here