ಮಣಿಕ್ಕಾರ ಪ್ರೌಡಶಾಲೆಯಲ್ಲಿ ಶಾಲಾ ಮಂತ್ರಿಮಂಡಲ ಮತ್ತು ಸಂಘಗಳ ಉದ್ಘಾಟನೆ

0

ಪುತ್ತೂರು : ಸರಕಾರಿ ಪ್ರೌಢಶಾಲೆ ಮಣಿಕ್ಕರ ಇಲ್ಲಿ ಜೂ. 15 ರಂದು ಶಾಲಾ ಮಂತ್ರಿ ಮಂಡಲ ಮತ್ತು ವಿವಿಧ ಸಂಘಗಳ ಉದ್ಘಾಟನಾ ಸಮಾರಂಭವನ್ನು ನಡೆಸಲಾಯಿತು.


ಸಭೆಯ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಕಾರ್ಯಾಧ್ಯಕ್ಷ ಸಯ್ಯದ್ ಗಫೂರ್ ಸಾಹೇಬ್ ಇವರು ವಹಿಸಿದ್ದು ಎಲ್ಲಾ ಚುನಾಯಿತ ಪ್ರತಿನಿಧಿಗಳಿಗೂ ಶುಭಹಾರೈಸಿದರು. ಮುಖ್ಯ ಶಿಕ್ಷಕಿ ನಳಿನಿ ಕೆ. ಇವರು ಪ್ರಮಾಣ ವಚನ ಭೋದಿಸಿದರು. ಸಭೆಯಲ್ಲಿ ಎಲ್ಲಾ ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಚುನಾವಣೆಯ ಪ್ರಕ್ರಿಯೆಯನ್ನು ಸುಗುಣ ಇವರ ನೇತೃತ್ವದಲ್ಲಿ ನಡೆಸಲಾಗಿತ್ತು. ಅತಿಥಿ ಶಿಕ್ಷಕಿ ಪವಿತ್ರರವರು ಸಹಕರಿಸಿದರು. ಉಷಾ ನಾಯ್ಕ ಇವರು ಆಯ್ಕೆಯಾದ ಮಂತ್ರಿಗಳು ಹಾಗೂ ಸಂಘದ ಪ್ರತಿನಿಧಿಗಳನ್ನು ಸಭೆಗೆ ಪರಿಚಯಿಸಿದರು. ವಸಂತಿ ಇವರು ಚುನಾಯಿತರ ಕರ್ತವ್ಯ ಹಾಗೂ ಜವಾಬ್ದಾರಿಗಳನ್ನು ತಿಳಿಸಿದರು.
ಉಮಾವತಿ ಸ್ವಾಗತಿಸಿ, ಗೀತಾ ವಂದಿಸಿದರು. ಕರುಣಾಕರ ಮಣಿಯಾಣಿ ಇವರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here