ಕಾಂಗ್ರೆಸ್ ನಿಂದ ರಾಜ್ಯದಲ್ಲಿ ಜನವಿರೋಧಿ ಗ್ಯಾರಂಟಿ ಸರಕಾರ- ಭಾಗೀರಥಿ ಮುರುಳ್ಯ

0

ಕಾಣಿಯೂರು: ಉಚಿತ ಉಚಿತ ಎಂದ ಸರಕಾರದ ನಿಲುವು ಈಗ ಬೆಲೆ ಏರಿಕೆ ಖಚಿತ ಖಚಿತ ಖಚಿತ.ಕಳೆದ ವರುಷ ಬಡವರ ಸರಕಾರ ಎಂದು ಪ್ರಚಾರ ಪಡೆದು ಅಧಿಕಾರಕ್ಕೆ ಬಂದ ಈ ಸರಕಾರ ಈಗ ಏಕಾಏಕಿ ಪೆಟ್ರೋಲ್, ಡಿಸೇಲ್ ಬೆಲೆಯನ್ನು ಹೆಚ್ಚಿಸಿ ಜನಸಾಮಾನ್ಯರ ಬದುಕಿಗೆ ಬರೆ ಎಳೆದಿದೆ. ಹಿಂದಿನ ಬಾಗಿಲಿನಿಂದ ಕದ್ದು ಎದುರು ಬಾಗಿಲಿನಿಂದ ಉಚಿತವಾಗಿ ಕೊಡುವ ನಾಟಕವನ್ನು ಮಾಡುತ್ತ ಬಂದಿದೆ ಈ ಮೊದಲು ಠಸೆ ಪೇಪರ್ ಬೆಲೆಯನ್ನು ಹೆಚ್ಚಿಸಿತ್ತು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲಿನಿಂದ ಕಂಗೆಟ್ಟಿರುವ ಹತಾಶೆಯಲ್ಲಿದೆ ದೇಶದಲ್ಲಿ ನೂರ ಗಡಿ ದಾಟದ ಕಾಂಗ್ರೆಸ್ ರಾಜ್ಯದಲ್ಲಿ ಪೆಟ್ರೋಲ್ ದರದಲ್ಲಿ ನೂರ ದಾಟಿಸಿ ಜನತಗೆ ಶಾಕ್ ನೀಡಿದೆ.ಮುಂದಿನ ದಿನಗಳಲ್ಲಿ ಈ ಸರಕಾರದ ವಿರುದ್ಧ ಜನಬೀದಿಗೆ ಇಳಿದು ಹೋರಾಟವನ್ನು ಮಾಡಿ ಸರಿಯಾದ ರೀತಿಯಲ್ಲಿ ಉತ್ತರವನ್ನು ನೀಡಲಿದ್ದಾರೆ. ಸರಕಾರ ಏರಿಸಿ ಬೆಲೆಯನ್ನು ಕಡಿಮೆ ಮಾಡಬೇಕು ಎಂದು ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರು ಅಗ್ರಹಿಸಿದ್ದಾರೆ

LEAVE A REPLY

Please enter your comment!
Please enter your name here