ಎನ್ ಆರ್ ಸಿ ಸಿ- ಅಮ್ಮುಂಜ ನೂತನ ಕಾಂಕ್ರೀಟ್ ರಸ್ತೆ ಉದ್ಘಾಟನೆ

0

ಅಭಿವೃದ್ದಿ ಮಾಡಿದರೆ ಮಾತ್ರ ನನಗೆ ಮುಂದಕ್ಕೆ ವೋಟು ಹಾಕಿ: ಶಾಸಕ ಅಶೋಕ್ ರೈ


ಪುತ್ತೂರು: ಕಳೆದ ಲೋಕಸಭಾ ಚುನಾವಣೆಯ ಮೊದಲು ಶಿಲಾನ್ಯಾಸಗೈದ ಕಾಮಗಾರಿಗಳು ಆರಂಭಗೊಂಡಿದೆ, ಶೀಘ್ರದಲ್ಲೇ ಎಲ್ಲಾ ಕಾಮಗಾರಿಗಳು ಪೂರ್ಣಗೊಳ್ಳಲಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು.ಅವರು ಕುರಿಯ ಗ್ರಾಮದ ಎನ್ ಆರ್ ಸಿ ಸಿ – ಅಮ್ಮುಂಜ ರಸ್ತೆಯು ರೂ 10 ಲಕ್ಷದಲ್ಲಿ ಕಾಂಕ್ರೀಟ್ ಆಗಿದ್ದು ಇದರ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.


ಆದ್ಯತೆ ಮೇರೆಗೆ ಎಲ್ಲಾ ರಸ್ತೆಗಳನ್ನು ಅಭಿವೃದ್ದಿ ಮಾಡಲಾಗುವುದು. ರಸ್ತೆ ಕಾಂಕ್ರೀಟ್ ಆಗಿಲ್ಲವೆಂದು ಬೇಜಾರು ಮಾಡಬೇಡಿ ಮುಂದಿನ ದಿನಗಳಲ್ಲಿ ಅಗತ್ಯ ಬೇಡಿಕೆ ಇರುವ ಎಲ್ಲಾ ರಸ್ತೆಗಳನ್ನು ಅಭಿವೃದ್ದಿ ಮಾಡಲಾಗುವುದು ಎಂದು ಹೇಳಿದರು. ಪಾಲಿಂಜೆ ಶ್ರೀ ಮಹಾವಿಷ್ಣು ದೇವಸ್ಥಾನದ ಅಭಿವೃದ್ದಿಗೆ 10 ಲಕ್ಷ ಅನುದಾನ ಒದಗಿಸಲಾಗುವುದು ಎಂದು ಹೇಳಿದರು.
ಅಭಿವೃದ್ದಿಯಲ್ಲಿ ಯಾವುದೇ ರಾಜಕೀಯ ಮಾಡುವುದಿಲ್ಲ ಅದರ ಅಗತ್ಯವೂ ನನಗಿಲ್ಲ. ಅಭಿವೃದ್ದಿ ಮಾಡಿದರೆ ಮಾತ್ರ ನನಗೆ ಮುಂದಕ್ಕೆ ವೋಟು ಹಾಕಿ ಎಂದು ಹೇಳಿದರು.


ಕುರಿಯ ಕಾಂಗ್ರೆಸ್ ಉಸ್ತುವಾರಿ ಶಿವರಾಮ ಆಳ್ವರು ಮಾತನಾಡಿ ಶಾಸಕರು ಕುರಿಯ ಗ್ರಾಮಕ್ಕೆ ಒಂದು ಕೋಟಿಗೂ ಮಿಕ್ಕಿ ಅನುದಾನ ನೀಡಿದ್ದಾರೆ. ಮುಂದಿನ ಬಾರಿಯೂ ಅವರೇ ಇಲ್ಲಿ ಶಾಸಕರಾಗಿ ಬರಬೇಕು ಇದಕ್ಕಾಗಿ ಪ್ರತೀಯೊಬ್ಬರೂ ಅವರಿಗೆ ವೋಟು ಹಾಕುವ ಮೂಲಕ ಕೃತಜ್ಞತೆ ಸಲ್ಲಿಸಬೇಕು. ಬಡವರ ಬಗ್ಗೆ ಅಪಾರ ಕಾಳಜಿ ಇರುವ ಇವರು ನಮ್ಮ ಕ್ಷೇತ್ರದ ಶಾಸಕರಾಗಿರುವುದು ನಮ್ಮ ಭಾಗ್ಯವಾಗಿದೆ ಎಂದು ಹೇಳಿದರು. ಹಲವು ಅಭಿವೃದ್ದಿ ಕಾರ್ಯಗಳನ್ನು ಮಾಡುವ ಮೂಲಕ ಶಾಸಕರು ರಾಜ್ಯದಲ್ಲೇ ಉತ್ತಮ ಶಾಸಕರು ಎಂದು ಹೇಳಿದರೂ ತಪ್ಪಾಗಲಾರದು. ಮುಂದಿನ ದಿನಗಳಲ್ಲಿ ಕುರಿಯ ಗ್ರಾಮದ ಅಬಿವೃದ್ದಿಗೆ ಶಾಸಕರು ಇನ್ನೂ ಅನುದಾನವನ್ನು ನೀಡಲಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪಾಲಿಂಜೆ ಶ್ರೀ ವಿಷ್ಣುಮೂರ್ತಿ ದೇವಸ್ತಾನದ ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಮಣ್ಣ ನಾಯ್ಕ, ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಪೂರ್ಣೆಶ್, ಬಾಲಕೃಷ್ಣ ,ರೇಖನಾಥ ರೈ,ಎನ್ ಹರೀಶ್,ರಾಮಣ್ಣ ರೈ,ಇಬ್ರಾಹಿಮ್,ಈಶ್ವರ ಗೌಡ ಕಟ್ಟಡಬೈಲು, ಜಗನ್ನಾಥ ಶೆಟ್ಟಿ,ಕಿಟ್ಟಣ್ಣ ರೈ, ಹಸೈನಾರ್, ಅವಿನಾಶ್ ರೈ,ಅಬೂಬಕ್ಕರ್ ,ಗೀತ,ಸುಜಾತ ರೈ,ಲಕ್ಷ್ಮಿ, ಮಾನ್ಯ ,ಸುಮಿತ್ರಾ,ಭವಾನಿ,ಸುನಂದಾ,ಹಿತೇಶ್ ,ಸುಜನ್ ರೈ,ಅವಿನಾಶ್,ವಿಖ್ಯಾತ,ರಿತೇಶ್,ಕೆ.ಗಣೇಶ್,ಪ್ರವೀಣ್ ಕುಮಾರ್,ಸುಕುಮಾರ್,ಅನುರಾಧ,ಸುಧಾಕರ್ ಮತ್ತಿತರರು ಉಪಸ್ತಿತರಿದ್ದರು.
ಗ್ರಾಪಂ ಸದಸ್ಯ ನೇಮಕ್ಷ ಸುವರ್ಣ ಸ್ವಾಗತಿಸಿದರು. ವಲಯ ಕಾಂಗ್ರೆಸ್ ಅಧ್ಯಕ್ಷ ಸನತ್ ರೈ ವಂದಿಸಿದರು. ಪುತ್ತೂರು ಸೇವಾದಳದ ಅಧ್ಯಕ್ಷ ವಿಶ್ವಜಿತ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಗ್ರಾಮಸ್ಥರ ಪರವಾಗಿ ಶಾಸಕರನ್ನು ಸನ್ಮಾನಿಸಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here