ಅರಿಯಡ್ಕ: ಉಚಿತ ಆರೋಗ್ಯ ತಪಾಸಣೆ ಮತ್ತು ದಂತ ತಪಾಸಣಾ ಶಿಬಿರ

0

ಅರಿಯಡ್ಕ; ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರ ಸಂತ ಫಿಲೋಮಿನಾ ಕಾಲೇಜು ದರ್ಬೆ ಪುತ್ತೂರು, ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗ ಗ್ರಾಮ ಪಂಚಾಯತ್ ಅರಿಯಡ್ಕ ಇದರ ವತಿಯಿಂದ ಎ.ಜೆ.ವೈದ್ಯಕೀಯ ಮಹಾ ವಿದ್ಯಾಲಯ ಆಸ್ಪತ್ರೆ ಮಂಗಳೂರು ಇದರ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ದಂತ ತಪಾಸಣಾ ಶಿಬಿರ ದ.ಕ.ಹಿ.ಪ್ರಾ.ಶಾಲೆ ಪಾಪೆಮಜಲು ಜೂ. 16 ರಂದು ನಡೆಯಿತು.‌

ಶಿಬಿರವನ್ನು ವಿದ್ಯಾರಶ್ಮಿ ವಿದ್ಯಾಲಯ ಸವಣೂರು ಇದರ ಆಡಳಿತಾಧಿಕಾರಿ ಹಾಗೂ ಇಂಜಿನಿಯರ್ ಅಶ್ವಿನ್ ಎಲ್ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಎ.ಜೆ ವೈದ್ಯಕೀಯ ಮಹಾ ವಿದ್ಯಾಲಯ ಆಸ್ಪತ್ರೆ ಮಂಗಳೂರು ಇದರ ಎಂ.ಡಿ.ಎಸ್ ಸ್ಟಾಪ್ ಡಾ.ಸತ್ಯಪ್ರೀಯಾ ಮಾಹಿತಿ ನೀಡಿದರು. ವೇದಿಕೆಯಲ್ಲಿ ಸಂತ ಫಿಲೋಮಿನಾ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ.ವಿಜಯ ಕುಮಾರ್ ಮೊಳೆಯಾರು, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಂತೋಷ್ ಮಣಿಯಾಣಿ ಕುತ್ಯಾಡಿ, ಕೋಟಿ ಚೆನ್ನಯ ಗೆಳೆಯರ ಬಳಗ ಪಾಪೆ ಮಜಲು ಇದರ ಅಧ್ಯಕ್ಷರಾದ ಜಗದೀಶ್ ಬಿ, ಸಚಿನ್ ಪಾಪೆ ಮಜಲು, ಉದ್ಯಮಿ ಅಕ್ಷಯ್ ರಜಪೂತ್ ಕಲ್ಲಡ್ಕ, ಮಾಜಿ ಸೈನಿಕರಾದ ಅಮ್ಮಣ್ಣ ರೈ ಡಿ ಪಾಪೆಮಜಲು, ಗ್ರಾಮ ಪಂಚಾಯತ್ ಸದಸ್ಯರಾದ ಪುಷ್ಪಲತಾ, ಶಾಲಾ ಮುಖ್ಯೋಪಾಧ್ಯಾಯಿನಿ ಜಯಲತಾ ಮತ್ತಿತರರು ಉಪಸ್ಥಿತರಿದ್ದರು. ಸಭಾಧ್ಯಕ್ಷತೆಯನ್ನು ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ದಿನೇಶ್ ಕುಮಾರ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂತ ಫಿಲೋಮಿನಾ ಕಾಲೇಜಿನ ಉಪನ್ಯಾಸಕ ಶೀತಲ್ ಕುಮಾರ್, ಉಪನ್ಯಾಸಕಿ ಪ್ರತಿಭಾ, ಸಮಾಜ ಕಾರ್ಯ ವಿಭಾಗದ ಸಂಯೋಜಕರಾದ ಶ್ರೀಮಣಿ ,ಪ್ರಥಮ ಮತ್ತು ದ್ವಿತೀಯ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು, ಅರಿಯಡ್ಕ ಸಮುದಾಯ ಆರೋಗ್ಯಾಧಿಕಾರಿ ಚೇತನ, ಮುಂತಾದವರು ಸಹಕರಿಸಿದರು.

ಶಿಬಿರದ ವೈಶಿಷ್ಟ್ಯಗಳು……
ದಂತ ತಪಾಸಣಾ, ಸಾಮಾನ್ಯ ರೋಗ ತಪಾಸಣೆ, ಗಂಟಲು, ಕಿವಿ, ಮೂಗು, ತಪಾಸಣೆ, ಇ.ಸಿ.ಜಿ ಪರೀಕ್ಷೆ, ಮಧುಮೇಹ ತಪಾಸಣೆ, ಸ್ತ್ರೀ ರೋಗ ತಪಾಸಣೆ, ಕಣ್ಣಿನ ತಪಾಸಣೆ, ಚರ್ಮರೋಗ ತಪಾಸಣೆ, ಮಕ್ಕಳ ತಪಾಸಣೆ ನಡೆಯಿತು. ಶಿಬಿರದಲ್ಲಿ ನೂರಾರು ಮಂದಿ ಭಾಗವಹಿಸಿದ್ದರು. ಶಿವ ಕಾರ್ತಿಕ್ ಸ್ವಾಗತಿ ರೇಚಲ್ ಸಿಲ್ವ್ ಸಿಸ್ಟರ್ ವಂದಿಸಿದರು. ಶಿಬಿರಾರ್ಥಿ ಅಶ್ವಿನಿ ರೈ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here