ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ (ಎಂ.ಎಸ್ಸಿ) ದ್ವಿತೀಯ ರ‍್ಯಾಂಕ್ ಗಳಿಸಿದ ಶಿಲ್ಪಾ ಬಿ ಜೈನರಗುರಿ ಇವರಿಗೆ ರಾಜ್ಯಪಾಲರಿಂದ ಪ್ರಶಸ್ತಿ ಪ್ರದಾನ

0

ಪುತ್ತೂರು : ಕಳೆದ ಆಗಸ್ಟ್ ತಿಂಗಳಲ್ಲಿ ನಡೆದ ಎಂ.ಎಸ್ಸಿ ಕೈಗಾರಿಕಾ ರಸಾಯನ ಶಾಸ್ತ್ರ (M.Sc. Industrial Chemistry) ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಇಲ್ಲಿನ ಬನ್ನೂರು, ಜೈನರಗುರಿ ನಿವಾಸಿ ಶಿಲ್ಪಾ ಬಿ ದ್ವಿತೀಯ ರ‍್ಯಾಂಕ್ ಪಡೆದುಕೊಂಡಿದ್ದಾರೆ.


ಜೊತೆಗೆ ICRAIEST ನಗದು ಪ್ರಶಸ್ತಿಯೂ ಸಿಕ್ಕಿದೆ.ಬನ್ನೂರು ಜೈನರಗುರಿ ನಿವಾಸಿ, ಬಿ ಎಸ್ ಎನ್ ಎಲ್ ನಲ್ಲಿ ಸೀನಿಯರ್ ಟೆಲಿಕಾಂ ಟೆಕ್ನಿಷಿಯನ್ ಆಗಿ ಸೇವೆ ಸಲ್ಲಿಸಿ , ನಿವೃತ್ತರಾಗಿರುವ ಬಿ ಕಾಂತಪ್ಪ ಗೌಡ , ರೀತಾಕ್ಷಿ ದಂಪತಿ ಪುತ್ರಿ ಶಿಲ್ಪಾ ಅವರು ಪ್ರಸ್ತುತ ಮಂಗಳೂರಿನ ಸುರತ್ಕಲ್ ನಲ್ಲಿರುವ B A S F ಕೆಮಿಕಲ್ ಇಂಡಸ್ಟ್ರಿಯಲ್ಲಿ ಪ್ರಾಡಕ್ಟ್ ಡೆವಲಪ್ಮೆಂಟ್ ಫಾರ್ಮುಲೇಶನ್ ಡಿಪಾರ್ಟ್ಮೆಂಟ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.


ಇವರು ಜೂ. 15ರಂದು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಡೆದ 42ನೇ ವಾರ್ಷಿಕ ಘಟಿಕೋತ್ಸವದಲ್ಲಿ ಮಾನ್ಯ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮತ್ತು ಕರ್ನಾಟಕ ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್ ಇವರಿಂದ ಪ್ರಮಾಣ ಪತ್ರ ಮತ್ತು ICRAIEST ನಗದು ಪ್ರಶಸ್ತಿ ಸ್ವೀಕರಿಸಿರುವ ಶಿಲ್ಪಾರವರು 2023ರ ಆಗಸ್ಟ್ ತಿಂಗಳಲ್ಲಿ ದಕ್ಷಿಣ ಕೊರಿಯಾ ದೇಶದಲ್ಲಿ ನಡೆದ 25ನೇ ವಿಶ್ವ ಸ್ಕೌಟ್ ಜಾಂಬೋರಿಯಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿದ್ದರು.

LEAVE A REPLY

Please enter your comment!
Please enter your name here