ಕಡಬ ಸರಸ್ವತಿ ಆ.ಮಾಶಾಲೆಯ ಮಂತ್ರಿಮಂಡಲ

0

ಶಾಲಾ ನಾಯಕಿಯಾಗಿ ನಿಧಿ ಕೆ. ಹಾಗೂ ಉಪನಾಯಕಿಯಾಗಿ ಭವಿಷ್ಯ ಕೆ. ಶೆಟ್ಟಿ ಆಯ್ಕೆ

ಕಡಬ: ವಿದ್ಯಾರ್ಥಿಗಳಿಗೆ ಸಾರ್ವತ್ರಿಕ ಚುನಾವಣೆಯ ವಿಧಾನವನ್ನು ಪರಿಚಯಿಸುವ ಉದ್ದೇಶದಿಂದ ಸರಸ್ವತಿ ಆಂಗ್ಲ ಮಾಧ್ಯಮ ಶಾಲೆ ಹನುಮಾನ್ ನಗರ ಕೇವಳ ಕಡಬ ಇಲ್ಲಿ ಜೂನ್ 15ರಂದು ಚುನಾವಣೆ ನಡೆಸಲಾಯಿತು. ಚುನಾವಣಾ ಪ್ರಕ್ರಿಯೆ ಮುಂಚಿತವಾಗಿ ವಿದ್ಯಾರ್ಥಿಗಳಿಗೆ ಚುನಾವಣಾ ಅಧಿಸೂಚನೆಗಳನ್ನು ನೀಡಲಾಯಿತು. ವಿದ್ಯಾರ್ಥಿಗಳು ಎಲೆಕ್ಟ್ರಾನಿಕ್ ಮತಯಂತ್ರದ ಮೂಲಕ ಮತ ಚಲಾವಣೆ ಮಾಡಿದರು.

ಶಾಲಾ ಸಂಸತ್ತಿನ ನಾಯಕಿಯಾಗಿ ನಿಧಿ ಕೆ. ಹಾಗೂ ಉಪನಾಯಕಿಯಾಗಿ ಭವಿಷ್ಯ ಕೆ. ಶೆಟ್ಟಿ ಇವರು ಆಯ್ಕೆಗೊಂಡಿರುತ್ತಾರೆ. ಶಾಲಾ ಮುಖ್ಯ ಶಿಕ್ಷಕಿ ಶ್ವೇತ ಕೊಡಿಂಬಾಳ ಇವರು ಚುನಾವಣಾ ಫಲಿತಾಂಶವನ್ನು ಘೋಷಿಸಿ, ವಿಜೇತರಾದ ಅಭ್ಯರ್ಥಿಗಳನ್ನು ಅಭಿನಂದಿಸಿದರು. ಶಿಕ್ಷಕರಾದ ಚಂದನ್ ಎಸ್.ಸಿ. ಮತ್ತು ಶಶಿರೇಖಾ ಇವರು ಚುನಾವಣಾ ಆಯುಕ್ತರಾಗಿ ಕಾರ್ಯ ನಿರ್ವಹಿಸಿದರು. ಈ ಸಂದರ್ಭದಲ್ಲಿ ಶಾಲಾ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here