ಶ್ರೀ ರಾಮಕೃಷ್ಣ ಪ್ರೌಢಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಗೆ ಆಯ್ಕೆ

0

ಪುತ್ತೂರು: ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ವಿಜಯ ಕರ್ನಾಟಕ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಮಂಗಳೂರು ರವರು ದ.ಕ.ಜಿಲ್ಲಾ ವ್ಯಾಪ್ತಿಯ ಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ ಚಿತ್ರಕಲಾ ಸ್ಪರ್ಧೆಯಲ್ಲಿ ಶ್ರೀ ರಾಮಕೃಷ್ಣ ಪ್ರೌಢಶಾಲೆಯ 5 ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಹತ್ತನೇ ತರಗತಿಯ ನಿಶ್ಮಿತಾ ಎನ್ (ಕೊಡಿಪ್ಪಾಡಿ ನಾಮದೇವ ಆಚಾರ್ಯ ಹಾಗೂ ಜಯಲಕ್ಷ್ಮಿ ಎ ಯವರ ಪುತ್ರಿ), ಅಭೀಶ್ ಬಿ.ಎ (ಚಿಕ್ಕ ಮುಡ್ನೂರು ಆನಂದ ಬಿ.ಬಿ ಹಾಗೂ ಭಾರತಿ ಕೆಯವರ ಪುತ್ರ) ಮತ್ತು ನೇತ್ರಾ ಎಂ.ಪಿ (ಅರಿಯಡ್ಕ ಎಂ ಪ್ರಸನ್ನ ಕುಮಾರ್ ಮತ್ತು ಚಿತ್ರಾ ಎಸ್ ರವರ ಪುತ್ರಿ), ಒಂಭತ್ತನೇ ತರಗತಿಯ ಕಿಶನ್ (ಉರ್ಲಾಂಡಿ ಹರೀಶ್ ಗೌಡ ಮತ್ತು ಸವಿತ ರವರ ಪುತ್ರ) ಹಾಗೂ ಎಂಟನೇ ತರಗತಿಯ ಸೋಹನ್ ಜೆ.ಕೆ. (ಮಾಣಿ ಜಯರಾಮ ಮತ್ತು ಕವಿತಾ ರವರ ಪುತ್ರ) ಯವರು ಭಾಗವಹಿಸಲಿದ್ದಾರೆ. ಎಂದು ಶಾಲಾ ಸಂಚಾಲಕರಾದ ಹೇಮನಾಥ ಶೆಟ್ಟಿ ಕಾವು ಹಾಗೂ ಮುಖ್ಯೋಪಾಧ್ಯಾಯಿನಿಯಾದ ಜಯಲಕ್ಷ್ಮಿ ಎ ಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here