ಅನಧಿಕೃತ ಆಸ್ಪತ್ರೆಗಳು, ನಕಲಿ ವೈದ್ಯರುಗಳನ್ನು ತಡೆಯುವ ನೆಪದಲ್ಲಿ ಅಸಲಿ ಆಸ್ಪತ್ರೆ ವೈದ್ಯರಿಗೆ ಕೆಪಿಎಂಇ ನೋಂದಾವಣೆ ಬರೆ!- ಪುತ್ತೂರಿನ ವೈದ್ಯರಿಂದ ಸಚಿವರಿಗೊಂದು ಪತ್ರ

0

ಪುತ್ತೂರು: ಅನಧಿಕೃತ ಆಸ್ಪತ್ರೆಗಳು, ನಕಲಿ ವೈದ್ಯರುಗಳ ಹಾವಳಿಯನ್ನು ತಡೆಯಲು ಸಕಾರ ಸಮಾರೋಪಾದಿಯಲ್ಲಿ ಹೊರಟಿರುವುದು ಅಭಿನಂದನೀಯ. ಅದರೆ ನಕಲಿ ಹಾವಳಿ ತಡೆಯುವ ನೆಪದಲ್ಲಿ ಅಸಲಿ ಆಸ್ಪತ್ರೆಗಳು ಮತ್ತು ವೈದ್ಯರಿಂದ ಪ್ರತಿ ಐದು ವರ್ಷಗಳಿಗೊಮ್ಮೆ ಕೆಪಿಎಂಇ ನೋಂದಾವಣೆ ಅಸಲಿ ವೈದ್ಯರಿಗೆ ಬರೆಯಾಗಿದ್ದು, ಇದನ್ನು ಉಚಿತವಾಗಿ ಮಾಡುವಂತೆ ಪುತ್ತೂರಿನ ವೈದ್ಯರೊಬ್ಬರು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಪತ್ರ ಬರೆಯುವ ತೀರ್ಮಾಣಕ್ಕೆ ಬಂದಿದ್ದಾರೆ.

ಪುತ್ತೂರು ಆದರ್ಶ ಆಸ್ಪತ್ರೆಯ ಅರಿವಳಿಕೆ ತಜ್ಞ ಡಾ.ಎಸ್.ಎಸ್.ಜೋಶಿ ಅವರು ಅಸಲಿ ಆಸ್ಪತ್ರೆಗಳ ಮತ್ತು ವೈದ್ಯರುಗಳ ಪರವಾಗಿ ಸಾಮಾಜಿಕ ಹೋರಾಟ ಮಾಡುತ್ತಿದ್ದಾರೆ. ನಕಲಿ ವೈದ್ಯರುಗಳ ಹಾವಳಿ ತಡೆಯಲು ಕೆಲವು ವರ್ಷಗಳ ಹಿಂದೊಮ್ಮೆ ಕೆಪಿಎಂಇ (ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ಕಾಯ್ದೆ) ಕಾಯ್ದೆಯಡಿ ಅನಧಿಕೃತ ಆಸ್ಪತ್ರೆಗಳು, ಕ್ಲಿನಿಕ್ ಗಳು, ಪ್ರಯೋಗಾಲಯಗಳು ಹಾಗು ನಕಲಿ ವೈದ್ಯರ ಮೇಲೆ ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಕ್ರಮಕೈಗೊಂಡಿತ್ತು. ಈ ಸಂದರ್ಭ ಕೆಪಿಎಂಇ ಕಡ್ಡಾಯವಾಗಿ ನೊಂದಾವಣೆಯಾಗಬೇಕಾಗಿತ್ತು. ವೈದ್ಯಕೀಯ ವೃತ್ತಿ ನಡೆಸಲು ಅಗತ್ಯ ವಿದ್ಯಾರ್ಹತೆ ಇಲ್ಲದ ನಕಲಿ ವೈದ್ಯರು ಅನಧಿಕೃತವಾಗಿ ಕ್ಲಿನಿಕ್ ಮತ್ತು ಪ್ರಯೋಗಾಲಯವನ್ನು ನಡೆಸುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿತ್ತು. ಇನ್ನೇನು ನಕಲಿ ವೈದ್ಯರುಗಳ ಸಮಾಪ್ತಿಯಾದಂತೆಯೇ ಎಂದು ಎಲ್ಲಾ ಅಸಲಿ ವೈದ್ಯರು ಭಾವಿಸಿದ್ದರು. ಆದರೆ ಅದು ಆಗಿಲ್ಲ. ಸಾವಿರಾರು ರೂಪಾಯಿ ತೆತ್ತು ಅಸಲಿ ವೈದ್ಯರು, ಆಸ್ಪತ್ರೆಗಳನ್ನು ನೋಂದಾಯಿಸಿದ್ದೇ ಬಂತು. ನಕಲಿ ವೈದ್ಯರುಗಳ ಕಾಣೆ ಆಗಲಿಲ್ಲ. ಅಲ್ಲದೆ ಐದು ವರ್ಷಗಳಿಗೊಮ್ಮೆ ಪುನಃ ಸಾವಿರಾರು ರೂಪಾಯಿಗಳನ್ನು ಪಾವತಿಸಿ ಪುನಃ ನೋಂದಾಯಿಸಬೇಕಿದ್ದು, ಇದರಲ್ಲೂ ವೈದ್ಯರುಗಳಿಗೆ ಇಲಾಖಾ ಅಧಿಕಾರಿಗಳು ತೊಂದರೆ ಕೊಡುತ್ತಿದ್ದಾರೆಂದು ದೂರುಗಳಿವೆ. ಇದಕ್ಕೆ ಕಾರಣ ಬದ್ದತೆ ಇಲ್ಲದ ಅಧಿಕಾರಿಗಳು ಮತ್ತು ಭ್ರಷ್ಟ ಅಧಿಕಾರಗಳೇ ಕಾರಣರಾಗಿರಬಹುದೇ ಎಂಬ ಪ್ರಶ್ನೆಗಳು ಕಾಣತೊಡಗಿದೆ ಎಂದವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ಬೇಡಿಕೆಗಳು:
ನಕಲಿ ವೈದ್ಯರನ್ನು ತಡೆಯುವ ಕಾರ್ಯದಲ್ಲಿ ಅಸಲಿ ವೈದ್ಯರುಗಳಿಗೆ ತೊಂದರೆಯಾಗದಂತೆ ಕೆಪಿಎಂಇ ನೋಂದಾವಣೆಯನ್ನು ಉಚಿತವಾಗಿ ಸರಕಾರ ಮಾಡಬೇಕು. ಕಾಲಮಿತಿಯಲ್ಲಿ ನಕಲಿ ವೈದ್ಯರುಗಳನ್ನು ತೊಲಗಿಸಬೇಕು. ಎಲ್ಲಾದರೂ ನಕಲಿ ವೈದ್ಯರುಗಳು, ಕ್ಲಿನಿಕ್, ಅಸ್ಪತ್ರೆ ನಡೆಸುತ್ತಿದ್ದರೆ ಸಂಬಂಧಿಸಿದ ಇಲಾಖೆ, ಜಿಲ್ಲಾ ಆರೋಗ್ಯ ಅಧಿಕಾರಿಗಳು, ತಾಲೂಕು ಆರೋಗ್ಯ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕು.
ಡಾ. ಎಸ್‌.ಎಸ್ ಜೋಶಿ ಪುತ್ತೂರು

LEAVE A REPLY

Please enter your comment!
Please enter your name here