ಬೆಂಗಳೂರು: ನವೀನ್ ಭಂಡಾರಿ ಅವರಿಂದ ಶಿವಗುಡಿ ನಿರ್ಮಾಣಕ್ಕೆ 10 ಲಕ್ಷ ರೂ.ದೇಣಿಗೆ

0

ಪುತ್ತೂರು: ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಉತ್ತರ ವಲಯದ ಮಾಜಿ ನಿರ್ದೇಶಕ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿರುವ ಪುತ್ತೂರು ಮೂಲದ ಅಗರಿ ನವೀನ್ ಭಂಡಾರಿ, ಬೆಂಗಳೂರು ಬೊಮ್ಮನ ಹಳ್ಳಿಯಲ್ಲಿಯ ಮೂಲ್ಕಿ ಸುಂದರರಾಮ್ ಶೆಟ್ಟಿ ನಗರದ ವಿಜಯಾ ಬ್ಯಾಂಕ್ ಎಂಪ್ಲಾಯೀಸ್ ಲೇಜೌಟ್‌ನಲ್ಲಿ ಇರುವ ಶ್ರೀ ಆಯ್ಯಪ್ಪ ದೇವಾಲಯದಲ್ಲಿ ಶಿವನ ಗುಡಿ ಸ್ಥಾಪನೆಗೆ 10 ಲಕ್ಷ ರೂಪಾಯಿಯನ್ನು ದೇಣಿಗೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ನವೀನ್ ಭಂಡಾರಿಯವರ ಪುತ್ರಿ ಅನುಷ್ಕಾ ಶೆಟ್ಟಿ, ಸಹೋದರ ಕರ್ನಲ್ ಜಗಜೀವನ್ ಭಂಡಾರಿ ಉಪಸ್ಥಿತರಿದ್ದರು. ನವೀನ್ ಭಂಡಾರಿಯವರು ಈಗಾಗಲೇ ಬೆಂಗಳೂರು ನಗರದ ಬೊಮ್ಮನಹಳ್ಳಿಯಲ್ಲಿ ಸುಸಜ್ಜಿತವಾದ ಮೂಲ್ಕಿ ಸುಂದರರಾಮ್ ಶೆಟ್ಟಿ ಬಡಾವಣೆ ನಿರ್ಮಾಣಕ್ಕೆ ಕಾರಣರಾಗಿದ್ದಾರೆ. ಇದು ಬೆಂಗಳೂರಿನಲ್ಲೇ ಮಾದರಿ ಬಡಾವಣೆಯಾಗಿ ಬೆಳೆದಿದೆ. ಇದರ ಬೆಳವಣಿಗೆ, ಅಭಿವೃದ್ಧಿ ಹಿಂದೆ ಡಾ.ಅಗರಿ ನವೀನ್ ಭಂಡಾರಿ ಮತ್ತು ಅವರ ತಂಡದ ಸದಸ್ಯರ ಪರಿಶ್ರಮವಿದೆ. ಅಗರಿ ನವೀನ್ ಭಂಡಾರಿಯವರು ಮೂಲ್ಕಿ ಸುಂದರರಾಮ್ ಶೆಟ್ಟಿ ನಗರ ಸೌಹಾರ್ದ ಸಹಕಾರಿ ಸಂಘದಲ್ಲಿ ಕಳೆದ 19 ವರ್ಷಗಳಿಂದ ಅಧ್ಯಕ್ಷರಾಗಿರುತ್ತಾರೆ.

LEAVE A REPLY

Please enter your comment!
Please enter your name here