ಕರಾಟೆಯಲ್ಲಿ ಬುರೂಜ್ ಶಾಲಾ ವಿದ್ಯಾರ್ಥಿಗಳಿಗೆ “ನೊಬೆಲ್ ವರ್ಲ್ಡ್ ರೆಕಾರ್ಡ್ ” ಪ್ರಶಸ್ತಿ

0

ಪುಂಜಾಲಕಟ್ಟೆ : ಇಲ್ಲಿನ ಬುರೂಜ್ ಇಂಗ್ಲಿಷ್ ಮೀಡಿಯಂ ಪ್ರೌಡಶಾಲೆ ಇದರ 17 ವಿದ್ಯಾರ್ಥಿಗಳು ಸೋರಿನ್ ರಿಯೂ ಕರಾಟೆ ಅಸೋಸಿಯೇಷನ್ ಮೂಡಬಿದ್ರೆ ಆಯೋಜಿಸಿದ್ದ , ಒಂದು ನಿಮಿಷದಲ್ಲಿ 250 ಪಂಚ್ ಸ್ಪರ್ಧೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿ , ನೊಬೆಲ್ ವರ್ಲ್ಡ್ ರೆಕಾರ್ಡ್ ಪ್ರಮಾಣ ಪತ್ರ ಹಾಗೂ ಚಿನ್ನದ ಪದಕ ಮತ್ತು ಕಂಚಿನ ಪದಕ ಪಡೆದುಕೊಂಡಿದ್ದಾರೆ.

ಶೇಖ್ ಮೊಹಮ್ಮದ್ ದಾನಿಶ್, ಮೊಹಮ್ಮದ್ ಪವಾಝ್ ,ಮೊಹಮ್ಮದ್ ತಬ್ರೇಝ್,ಮೊಹಮ್ಮದ್ ಇನಾಫ್, ಮುಹಮ್ಮದ್ ರಿಯಾನ್ , ಅಫ್ರಾ ರಿಂಷಾ, ಮಶ್ಕೂರ ಹನಾ ,ಸ್ಪೂರ್ತಿ ಎಂ.ಜಾದರ್ , ರಿಯಾನ ಫಾತಿಮಾ, ಸಹನಾ ಶಂಶುನ್, ಪ್ರಣೀತ್ ಜೆ ಶೆಟ್ಟಿ , ಆಯಿಷಾ ಮಲೀಹಾ , ಸ್ಪೂರ್ತಿ, ಫಾತಿಮಾ ಅನೀಷ ಪಿ.ಭವಿಷ್ ಇವರುಗಳು ಭಾಗವಹಿಸಿದ್ದರು.
ಕರಾಟೆ ಚಾಂಪಿಯನ್ , ಶಿಕ್ಷಕರಾದ ನದೀಮ್ ಹಾಗೂ ಸರ್ಫಾಝ್ ಮಕ್ಕಳಿಗೆ ಮಾರ್ಗದರ್ಶನ ಮತ್ತು ತರಬೇತಿ ನೀಡಿದ್ದರು. ಈ ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಶಿಕ್ಷಕ ವೃಂದ ಅಭಿನಂದಿಸಿದೆ

LEAVE A REPLY

Please enter your comment!
Please enter your name here