ತ್ಯಾಗರಾಜೆ ಮಸೀದಿಯಲ್ಲಿ ಈದುಲ್ ಅಝ್ ಹಾ ಆಚರಣೆ

0

ನೂರುಲ್ ಹುದಾ ಜುಮಾ ಮಸೀದಿ ಹಿದಾಯತ್- ನಗರ ತ್ಯಾಗರಾಜೆಯಲ್ಲಿ ಈದುಲ್ ಅಝ್ಹಾ ಆಚರಿಸಲಾಯಿತು.

ಪೆರುನಾಳ್ ವಿಶೇಷ ನಮಾಜಿಗೆ ಜಮಾಅತ್ ಖತೀಬರಾದ ಸಿ.ಕೆ ಮುಹಮ್ಮದ್ ದಾರಿಮಿ ಉಸ್ತಾದ್ ನೇತೃತ್ವ ನೀಡಿದರು. ಬಳಿಕ ಮಾತನಾಡಿದ ಅವರು ಬಕ್ರೀದ್ ಹಬ್ಬದ ಮಹತ್ವವನ್ನು ವಿವರಿಸಿ ಹಬ್ಬವು ತ್ಯಾಗ ಬಲಿದಾನದ ಸಂದೇಶವಾಗಿದ್ದು ಕೇವಳ ಒಂದು ದಿನದ ಆಚರಣೆಗೆ ಸೀಮಿತವಾಗಿದೆ ಅದರ ಸಂದೇಶ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ತಿಳಿಸಿದರು. ಖಲೀಲುಲ್ಲಾಹಿ ಇಬ್ರಾಹಿಂ ನೆಬಿಯವರ ತ್ಯಾಗ,ಸಹನೆ ಹಾಗೂ ಧರ್ಮನಿಷ್ಠೆಯನ್ನು ಕೊಂಡಾಡುವ ಹಬ್ಬವಾಗಿದೆ ಎಂದು ಸಂದೇಶ ನೀಡಿದರು.

ಈ ಸಂದರ್ಭದಲ್ಲಿ ಸದರ್ ಉಸ್ತಾದ್ ಮುನೀರ್ ದಾರಿಮಿ, ಜಮಾಅತ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ನೂರುಲ್ ಹುದಾ ಯಂಗ್ ಮೇನ್ಸ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು SKSSF ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, SKSBV ಅಧ್ಯಕ್ಷರು, ಪದಾಧಿಕಾರಿಗಳು, ಜಮಾಅತ್ ಬಾಂಧವರು ಹಾಗೂ ಪರವು ರಮಹನಿಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here