ಬಿಜೆಪಿ ಕಛೇರಿಗೆ ಭೇಟಿ ನೀಡಿದ ಕ್ಯಾ.ಬ್ರಿಜೇಶ್ ಚೌಟ

0

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ನೂತನ ಸಂಸದರಾದ ಕ್ಯಾ.ಬ್ರಿಜೇಶ್ ಚೌಟರವರು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಸಂಘ ಕಾರ್ಯಾಲಯ ಪಂಚವಟಿಗೆ ಭೇಟಿ ನೀಡಿ ಭಾರತ ಮಾತೆಗೆ ಪುಷ್ಪಾರ್ಚನೆಗೈದು ಬಿಜೆಪಿ ಕಛೇರಿಗೆ ಭೇಟಿ ನೀಡಿದರು. ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ಸಾಜ ರಾಧಾಕೃಷ್ಣ ಆಳ್ವಾರವರು ಶಾಲು ಹೊದಿಸಿ, ಹಾರ ಹಾಕಿ ಗೌರವಿಸಿದರು. ಬಳಿಕ ಮಾತಾನಾಡಿದ ಕ್ಯಾ.ಬ್ರಿಜೇಶ್ ಚೌಟರವರು ಕಾರ್ಯಕರ್ತರ ಅವಿರತ ಶ್ರಮ ಮತ್ತು ಮತದಾರರ ಬೆಂಬಲದಿಂದ ಪಾರ್ಟಿಗೆ ಗೆಲುವಾಗಿದೆ. ಜಿಲ್ಲೆಯ ಸಮಗ್ರ ದೃಷ್ಟಿಕೋನವನ್ನು ಇಟ್ಟುಕೊಂಡು ಅಭಿವೃದ್ದಿ ಕೆಲಸ ಮಾಡುತ್ತೇನೆ ಎಂದು ಈ ಸಂದರ್ಭದಲ್ಲಿ ಹೇಳಿದರು. ನಗರಮಂಡಲ ಅಧ್ಯಕ್ಷ ಪಿ.ಜಿ ಜಗನ್ನೀವಾಸ್ ರಾವ್ ಸ್ವಾಗತಿಸಿ, ಪ್ರ.ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ ಧನ್ಯವಾದಗೈದರು.

ಈ ಸಂದರ್ಭದಲ್ಲಿ ಚನಿಲ ತಿಮ್ಮಪ್ಪ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ವಿದ್ಯಾಗೌರಿ, ರಾಜ್ಯ ಒ.ಬಿ.ಸಿ ಕಾರ್ಯದರ್ಶಿ ಆರ್.ಸಿ ನಾರಾಯಣ್, ಹಿರಿಯರಾದ ಅಪ್ಪಯ ಮಣಿಯಾಣಿ, ಪ್ರಮುಖರಾದ ಅರುಣ್ ಕುಮಾರ್ ಪುತ್ತಿಲ, ಚಂದ್ರಶೇಖರ ರಾವ್, ಹರೀಶ್ ಬಿಜತ್ರೆ, ಹರಿಪ್ರಸಾದ್ ಯಾದವ್, ಪ್ರಸನ್ನ ಮಾರ್ತ, ಸಹಜ್ ರೈ ಬಳಜ್ಜ, ಸುನೀಲ್ ದಡ್ಡು, ರಾಜೇಶ್ ಕುಂಬ್ರ, ಜಯಶ್ರೀ ಶೆಟ್ಟಿ, ಧೀಕ್ಷಾ ಪೈ, ದಯಾನಂದ ಶೆಟ್ಟಿ, ನಾಗೇಶ್, ಮನೀಷ್, ಪ್ರವೀಣ್ ತಿಂಗಳಾಡಿ, ಅನಿಲ್ ತೆಂಕಿಲ, ವಿರೂಪಾಕ್ಷ ಭಟ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here