ಕುಂತೂರು ಮಾರ್ ಇವಾನಿಯೋಸ್ ಆ.ಮಾ.ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಸಾಧಕ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ

0

ಕಡಬ: ಕುಂತೂರು ಮಾರ್ ಇವಾನಿಯೋಸ್ ಆಂಗ್ಲಮಾಧ್ಯಮ ಶಾಲೆಯಲ್ಲಿ 2023-24ನೇ ಶೈಕ್ಷಣಿಕ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ತಂದುಕೊಟ್ಟ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.


ಮುಖ್ಯ ಅತಿಥಿಯಾಗಿದ್ದ ಮಾರ್ ಇವಾನಿಯೋಸ್ ಕಾಲೇಜ್ ಆಫ್ ಎಜುಕೇಶನ್ ಇದರ ಮೆನೇಜರ್, ಪುತ್ತೂರು ಧರ್ಮಪ್ರಾಂತ್ಯದ ವಿಕಾರ್ ಜನರಲ್ ರೆ.ಡಾ| ಎಲ್ದೋ ಪುತ್ತನ್ ಕಂಡತ್ತಿಲ್‌ರವರು ವಿದ್ಯಾರ್ಥಿಗಳನ್ನು ಗೌರವಿಸಿ ಶುಭಹಾರೈಸಿದರು. ಶಾಲಾ ಮುಖ್ಯಗುರು ರೆ.ಸಿ.ಅಲೆನ್ ಮೇರಿ, ಸಂಚಾಲಕಿ ರೆ.ಸಿ.ಕರೋಲಿನ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ತೀಕ್ಷ್ಣವಿ, ಅಪೇಕ್ಷ, ಅವನಿ, ಶಾನ್‌ರವರು ಅನುಭವ ಹಂಚಿಕೊಂಡರು. ಅನ್‌ಮರಿಯ ಸ್ವಾಗತಿಸಿ ಶೀಝ ವಂದಿಸಿದರು. ಪಾವನಿ ಕಾರ್ಯಕ್ರಮ ನಿರೂಪಿಸಿದರು. ಶಾಲೆಯಿಂದ ಪರೀಕ್ಷೆ ಬರೆದ 24 ವಿದ್ಯಾರ್ಥಿಗಳೂ ತೇರ್ಗಡೆಗೊಂಡಿದ್ದು ಈ ಪೈಕಿ 12 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ 12 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದರು. ಸಂಸ್ಥೆಗೆ ದ.ಕ.ಜಿಲ್ಲೆಯಲ್ಲಿ 14ನೇ ಸ್ಥಾನ ಲಭಿಸಿತ್ತು.

LEAVE A REPLY

Please enter your comment!
Please enter your name here