ಮರ್ದಾಳ: ಗುಡ್ ಶೆಫರ್ಡ್ ಪ್ರೌಢಶಾಲಾ ವಿದ್ಯಾರ್ಥಿ ಸಂಘ

0

ಶಾಲಾ ನಾಯಕ-ಕಮಲೇಶ್, ಉಪನಾಯಕಿ-ಅಲೀನಾ ಪಿ.ಎ.ಆಯ್ಕೆ

ಕಡಬ: ಮರ್ದಾಳ ಗುಡ್ ಶೆಫರ್ಡ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 2024-25ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಸಾರ್ವತ್ರಿಕ ಮತದಾನದ ಮಾದರಿ ಮೂಲಕ ಜೂ.15ರಂದು ನಡೆಸಲಾಯಿತು.
ವಿದ್ಯಾರ್ಥಿ ನಾಯಕನಾಗಿ ಕಮಲೇಶ್ ಹಾಗೂ ಉಪನಾಯಕಿಯಾಗಿ ಅಲೀನಾ ಪಿ.ಎ.ಆಯ್ಕೆಗೊಂಡರು. ಶಿಕ್ಷಣ ಮಂತ್ರಿಯಾಗಿ ಅನನ್ಯ ಡಿ.ಸೋಜಾ, ಶಿಸ್ತಿನ ಮಂತ್ರಿಯಾಗಿ ಅನುಷಾ, ಕ್ರೀಡಾ ಮಂತ್ರಿಯಾಗಿ ಸೌಜಿತ್, ಆರೋಗ್ಯಮಂತ್ರಿಯಾಗಿ ಧನುಶ್ರೀ ಹಾಗೂ ಸಾಂಸ್ಕೃತಿಕ ಮಂತ್ರಿಯಾಗಿ ಯಾಶಿಕಾ ಶೈಲ್ ಆಯ್ಕೆಯಾದರು.
ಶಾಲಾ ಸಂಚಾಲಕ ತೋಮಸ್ ಪಿ.ವಿ, ಮುಖ್ಯ ಶಿಕ್ಷಕಿ ಪ್ರಿಯಕುಮಾರಿ, ಶೈಕ್ಷಣಿಕ ಸಲಹೆಗಾರ್ತಿ ಮೇಫಿ, ಚುನಾವಣಾ ಉಸ್ತುವಾರಿ ಶಿಕ್ಷಕಿ ಹರಿಣಾಕ್ಷಿಯವರ ನೇತೃತ್ವದಲ್ಲಿ ಚುನಾವಣೆ ನಡೆಯಿತು. ವಿದ್ಯುನ್ಮಾನ ಮತಯಂತ್ರದ ಮೂಲಕ ಚುನಾವಣಾ ಪ್ರಕ್ರಿಯೆಯನ್ನು ನೆಲ್ಯಾಡಿ ಬೆಥನಿ ಐಟಿಐ ತರಬೇತಿ ಸಂಸ್ಥೆಯ ಬೋಧಕ ಸುನಿಲ್ ಜೋಸೆಫ್ ಮತ್ತು ತಂಡದವರು ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here