ಪುತ್ತೂರು ತಾಲೂಕು ಸಖಾಫಿ ಕೌನ್ಸಿಲ್ ಮಹಾಸಭೆ – ನೂತನ ಪದಾಧಿಕಾರಿಗಳ ಆಯ್ಕೆ

0

ಪುತ್ತೂರು: ಪುತ್ತೂರು ತಾಲೂಕು ಸಖಾಫಿ ಕೌನ್ಸಿಲ್ ಇದರ ವಾರ್ಷಿಕ ಮಹಾಸಭೆ ಬನ್ನೂರು ಸುನ್ನೀ ಸೆಂಟರ್‌ನಲ್ಲಿ ತಾಲೂಕು ಸಖಾಫಿ ಕೌನ್ಸಿಲ್ ಅಧ್ಯಕ್ಷ ಬೀಟಿಗೆ ಅಬ್ದುಲ್ ರಹ್ಮಾನ್ ಸಖಾಫಿರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಿರಾಜುದ್ದೀನ್ ಸಖಾಫಿ ಕನ್ಯಾನ ಕಾರ್ಯಕ್ರಮ ಉದ್ಘಾಟಿಸಿದರು. ಸುಲ್ತಾನುಲ್ ಉಲಮಾರವರ ನೇತೃತ್ವದಲ್ಲಿ ಜು.8ರಂದು ಬಿ.ಸಿ ರೋಡ್ ಸಾಗರ್ ಆಡಿಟೋರಿಯಂನಲ್ಲಿ ನಡೆಯಲಿರುವ ರಾಜ್ಯ ಸಖಾಫಿ ಸಂಗಮದ ಪ್ರಚಾರಾರ್ಥ ರಾಜ್ಯ ನಾಯಕರಾದ ಮೆಹ್ಬೂಬ್ ಸಖಾಫಿ ಕಿನ್ಯ ವಿಷಯ ಮಂಡನೆ ನಡೆಸಿದರು. ನಾಯಕರಾದ ಸತ್ತಾರ್ ಸಖಾಫಿ ಕೂರ್ನಡ್ಕ, ಶಾಫಿ ಸಖಾಫಿ ಕೊಕ್ಕಡ, ಅಬ್ದುಲ್ ಅಝೀಝ್ ಸಖಾಫಿ ಪರಪ್ಪು, ಅಬ್ದುಲ್ ಹಮೀದ್ ಸಖಾಫಿ ಪಾಡಿ ಮತ್ತು ಅಬ್ದುಲ್ ಜಲೀಲ್ ಸಖಾಫಿ ಜಾಲ್ಸೂರು ಶುಭ ಹಾರೈಸಿದರು.
ನಂತರ ನೂತನ ಸಮಿತಿಯನ್ನು ರಚಿಸಲಾಯಿತು.

ಅಧ್ಯಕ್ಷರಾಗಿ ಅಶ್ರಫ್ ಸಖಾಫಿ ಮಾಡಾವು, ಪ್ರಧಾನ ಕಾರ್ಯದರ್ಶಿಯಾಗಿ ಹಾಫಿಝ್ ರಂಶೀದ್ ಸಖಾಫಿ ಕುಂಬ್ರ ಮತ್ತು ಕೋಶಾಧಿಕಾರಿಯಾಗಿ ಶಾಹುಲ್ ಹಮೀದ್ ಸಖಾಫಿ ಪಾಣಾಜೆ ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರುಗಳಾಗಿ ಸಯ್ಯಿದ್ ಸಾಬಿತ್ ಸಖಾಫಿ ಪಾಟ್ರಕೋಡಿ, ಅಶ್ರಫ್ ಸಖಾಫಿ ಸವಣೂರು, ಇಬ್ರಾಹಿಂ ಸಖಾಫಿ ಕಬಕ, ಜೊತೆ ಕಾರ್ಯದರ್ಶಿಗಳಾಗಿ ನಾಸಿರ್ ಸಖಾಫಿ ಕಟ್ಟತ್ತಾರು, ಸಿನಾನ್ ಸಖಾಫಿ ಕೊಡಿಪ್ಪಾಡಿ, ಹಾಫಿಝ್ ಫಾರೂಖ್ ಸಖಾಫಿ ಕಡಬ ಆಯ್ಕೆಯಾದರು. 30 ಮಂದಿಯ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಕಾರ್ಯದರ್ಶಿ ರಹೀಂ ಸಖಾಫಿ ಸಾಜ ಸ್ವಾಗತಿಸಿದರು. ನೂತನ ಪ್ರ.ಕಾರ್ಯದರ್ಶಿ ಹಾಫಿಝ್ ರಂಶೀದ್ ಸಖಾಫಿ ಕುಂಬ್ರ ವಂದಿಸಿದರು.

LEAVE A REPLY

Please enter your comment!
Please enter your name here