ಜುಲೈ -5: “ಧರ್ಮ ದೈವ ” ತುಳು ಚಲನಚಿತ್ರ ಬೆಳ್ಳಿತೆರೆಯಲ್ಲಿ

0

✍️ ನಾರಾಯಣ ರೈ ಕುಕ್ಕುವಳ್ಳಿ.

ನಮ್ಮ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಕರಾವಳಿ ಸೇರಿದಂತೆ ಅನೇಕ ಸಾನಿಧ್ಯ ಸ್ಥಳಗಳು,ದೈವಾರಾಧನೆ ನಾಗಾರಾಧನೆಗೆ ಪ್ರಸಿದ್ಧಿ ಪಡೆದಿವೆ. ಇಂದು ತುಳುನಾಡು, ತುಳು ಭಾಷೆ, ದೇಶ-ವಿದೇಶ ತುಂಬಾ ಮಾನ್ಯತೆ ಪಡೆದಿದೆ.
ಸಿನಿಮಾ ಮಾಧ್ಯಮ ಇಂದು ಪರಿಣಾಮಕಾರಿ ಶ್ರೀಮಂತ ಮಾಧ್ಯಮವಾಗಿ ಬೆಳಗುತ್ತಿದೆ.ಈ ನಾಡಿನ ರೈತಾಪಿ ಜನರು ತಮ್ಮ ಬೇಸಾಯ- ಕೃಷಿ,ತೋಟಗಾರಿಕೆ ಮುಂತಾದ ಕ್ಷೇತ್ರಗಳಲ್ಲಿ ತುಳುನಾಡಿನ ದೈವ-ದೇವರು,ನೇಮ-ಕೋಲ-ತಂಬಿಲ, ನಾಗಾರಾಧನೆ -ದೈವಾರಾಧನೆ..ಮೂಲಕ ಈ ಮಣ್ಣಿನ,ಬದುಕಿನ ನಿಜ ಕಥೆಯನ್ನು ಕಟ್ಟಿಕೊಡುವ ತುಳು ಚಲನಚಿತ್ರ “ಧರ್ಮ ದೈವ” ಬೆಳ್ಳಿ ತೆರೆಯಲ್ಲಿ ಮೂಡಿಬರಲು ಸಿದ್ಧವಾಗಿದೆ. ಇಂದು ನಮ್ಮ ಯುವ ಜನಾಂಗ ತಮ್ಮ ಹಿರಿಯರು ಬಾಳಿಬೆಳಗಿದ ರೀತಿ-ನೀತಿ,ನಂಬಿಕೆ-ಸಂಸ್ಕೃತಿ,ನಡವಳಿಕೆಗಳಿಗೆ ಪ್ರಾಧಾನ್ಯತೆ ಕೊಟ್ಟು ಚಿತ್ರ-ಕಥೆಗಳನ್ನು ನಿರ್ಮಿಸುವ ಮೂಲಕ ಹಿರಿಯರ,ಸಂಘ-ಸಂಸ್ಥೆಗಳ ಅಭಿಮಾನಕ್ಕೂ ಪಾತ್ರರಾಗಿರುವರು.ಅವಿಭಜಿತ. ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ಭಾಗದ ವಿಶೇಷವಾಗಿ ಉಡುಪಿ, ಮಂಗಳೂರು ಮತ್ತು ಪುತ್ತೂರಿನ ಯುವಕರು ತಾವೇ ಸೇರಿಕೊಂಡು “ಧರ್ಮದೈವ ಪ್ರೊಡಕ್ಷನ್ಸ್ ಲಾಂಛನದಲ್ಲಿ” “ಧರ್ಮ ದೈವ”ಎಂಬ ಹೆಸರಿನಲ್ಲಿ ಒಂದು ಪೂರ್ಣ ಚಲನಚಿತ್ರವನ್ನು ನಿರ್ಮಾಣ ಮಾಡಿ ಸೆನ್ಸಾರ್ ಮಂಡಳಿಯಿಂದ ಮಾನ್ಯತೆ ಪಡೆದು ಇದೇ ಬರುವ 2024ರ ಜುಲೈ 5,ಶುಕ್ರವಾರ ಬೆಳ್ಳಿತೆರೆಯಲ್ಲಿ ಮೂಡಿಬರಲಿದೆ.


ಯುವ ನಿರ್ಮಾಪಕ ಬಿಳಿಯೂರು ರಾಕೇಶ್ ಭೋಜರಾಜ ಶೆಟ್ಟಿ, “ಧರ್ಮದೈವ” ತುಳು ಚಲನ ಚಿತ್ರವನ್ನು ಭಕ್ತಿ -ಶಕ್ತಿ ಶ್ರದ್ಧೆಯಿಂದ ನಿರ್ಮಾಣ ಮಾಡಿಕೊಟ್ಟಿರುವರು.ಅವರ ಮಿತ್ರ ಬೆಂಗಳೂರಿನ ಆದರ್ಶ ಫಿಲಂ ಇನ್ಸ್ಟಿಟ್ಯೂಟ್ ನ ಪದವೀಧರ, ನಿತಿನ್ ರೈ ಕುಕ್ಕುವಳ್ಳಿ,ನುಳಿಯಾಲು ಸತ್ಯ ಕಥೆಯನ್ನಾಧರಿಸಿದ ತನ್ನದೇ ಕಥೆ “ಧರ್ಮದೈವ”ಸಿನಿಮಾದ ಪೂರ್ಣ ನಿರ್ದೇಶಕರಾಗಿ ಚಿತ್ರಕ್ಕೆ ಜೀವ ತುಂಬಿಸಿದ್ದಾರೆ.ಈ ಮೊದಲು ಧರ್ಮದೈವ 1ಮತ್ತು2 ಕಿರುಚಿತ್ರಗಳನ್ನು ನೀಡಿ ಮನೆ ಮಾತಾಗಿರುವ “ಧರ್ಮದೈವ” ತುಳು ಸಿನಿಮಾ ಬೇರೆಯೇ ಕಥೆಯನ್ನು ಹೊಂದಿ ತಯಾರಾಗಿದೆ.


ಚಿತ್ರ ಕಥೆ- ಸಂಭಾಷಣೆಯನ್ನು ಹಮೀದ್ ಪುತ್ತೂರು,ಕೂರ್ನಡ್ಕ ಬರೆದಿರುವರು.ಅರುಣ್ ರೈ ಪುತ್ತೂರು ಇವರ ಛಾಯಾಗ್ರಹಣ,ಸಂಗೀತ: ಖ್ಯಾತ ಸಂಗೀತ ನಿರ್ದೇಶಕ: ಅರ್ಜುನ್ ಜನ್ಯ ಇವರ ಶಿಷ್ಯ ನಿಶಾನ್ ರೈ ಮಠಂತಬೆಟ್ಟು, ಸಾಹಿತ್ಯ :ಕೆ.ಕೆ ಪೇಜಾವರ್ ,ಸುಮಂತ್ ಬೈಲಾಡಿ,ಹಿನ್ನೆಲೆ ಗಾಯನ: ಖ್ಯಾತ ಯಕ್ಷಗಾನ ಭಾಗವತರು ಪಟ್ಲ ಸತೀಶ್ ಶೆಟ್ಟಿ, ಕು.ಸಮನ್ವಿ ಆರ್.ರೈ ನುಳಿಯಾಲು,ಚಿತ್ರ ಸಂಕಲನ: ರಾಧೇಶ್ ರೈ ಮೊಡಪ್ಪಾಡಿ ಮತ್ತು ಶ್ರೀನಾಥ್ ಪವಾರ್,ಸಹ ಸಂಕಲನ: ಚರಣ್ ಆಚಾರ್ಯ, ಶೀರ್ಷಿಕೆ ವಿನ್ಯಾಸ: ನಿತಿನ್ ಕಾನಾವು,ವಸ್ತ್ರ ವಿನ್ಯಾಸ:ಶ್ರೀಮತಿ ಸಾತ್ವಿಕಾ ನಿತಿನ್ ರೈ ಕುಂಜಾಡಿ,ಮನೋಜ್ ಕುಮಾರ್,ಸ್ಥಿರಚಿತ್ರ:ಅಭಿಪೂಜಾರ್,ಪ್ರಣವ್ ಭಟ್,ಧ್ವನಿ ಸಂಕಲನ:ಚಿದಾನಂದ ಕಡಬ.ಟಿ.ಟಿ.ಎಸ್ :ಲಾಯ್ ವೇಲೆಂಟೈನ್,ಪ್ರಸಾಧನ: ಕಿಶೋರ್ ಉಪ್ಪಿನಂಗಡಿ,ನಿರ್ಮಾಣದಲ್ಲಿ ಸುಧೀರ್ ಕುಮಾರ್ ಕಲ್ಲಡ್ಕ ಮತ್ತು ರಾಕೇಶ್ ಶೆಟ್ಟಿ ಜಿ ಅವರಸಹಕಾರವು ಈಚಿತ್ರಕ್ಕಿದೆ. ಈ ಚಿತ್ರದಲ್ಲಿ ದೈವದ ನಂಬಿಕೆ-ಇರುವಿಕೆಯನ್ನು ಮಾತ್ರ ಸಾದರ ಪಡಿಸಲಾಗಿದೆ.ನವರಸ ಭರಿತವಾಗಿರುವ “ಧರ್ಮದೈವ” ತುಳು ಚಲನ ಚಿತ್ರದ ತಾರಾಗಣದಲ್ಲಿ ರಮೇಶ್ ರೈ ಕುಕ್ಕುವಳ್ಳಿ,ದೀಪಕ್ ರೈ ಪಾಣಾಜೆ,ಚೇತನ್ ರೈ ಮಾಣಿ,ದಯಾನಂದ ರೈ ಬೆಟ್ಟಂಪಾಡಿ,ಭರತ್ ಶೆಟ್ಟಿ,ರವಿ ಸಾಲ್ಯಾನ್ (ಸ್ನೇಹಿತ್),ಸಂದೀಪ್ ಪೂಜಾರಿ, ಪುಷ್ಪರಾಜ್ ಬೊಳ್ಳರ್ ,ರಂಜನ್ ಬೋಳಾರ್,ಕೌಶಿಕ್ ರೈ ಕುಂಜಾಡಿ,ರೂಪಾ ವರ್ಕಾಡಿ,ದೀಕ್ಷಾ ಡಿ.ರೈ,ಹಾಗೂ ಗ್ರೇಷಿಯಲ್ ಕಲಿಯಂಡ ಕೊಡಗು ಮೊದಲಾದವರು ಅಭಿನಯಿಸಿದ್ದಾರೆ.


ಈಗಾಗಲೇ ತುಳು ಸಿನಿಮಾ ರಂಗದ ದಿಗ್ಗಜರಾಗಿರುವ ಡಾ.ದೇವದಾಸ್ ಕಾಪಿಕಾಡ್,ಶಿವದೂತ ಗುಳಿಗೆ ಖ್ಯಾತಿಯ ವಿಜಯ ಕುಮಾರ್ ಕೊಡಿಯಾಲ್ ಬೈಲ್,ಚಲನ ಚಿತ್ರ ನಿರ್ಮಾಪಕರಾಗಿರುವ ಪ್ರಕಾಶ್ ಪಾಂಡೇಶ್ವರ್ ,ಕಿಶೋರ್ ಡಿ ಶೆಟ್ಟಿ,ಸೇರಿದಂತೆ ಅನೇಕ ಗಣ್ಯರ ಮೆಚ್ಚುಗೆಗೆ ಪಾತ್ರವಾಗಿದೆ.ಇದರ ಟೀಸರ್ ಬಿಡುಗಡೆ,ಹಾಡಿನ ಬಿಡುಗಡೆಯ ಸಂದರ್ಭದಲ್ಲಿ ಹಾಗೂ ತಾಂತ್ರಿಕ ಪ್ರದರ್ಶನದ ಸಂದರ್ಭದಲ್ಲಿ ನೋಡಿ ಮುಕ್ತ ಕಂಠದಿಂದ ಕೊಂಡಾಡಿದ್ದಾರೆ.


ಇತ್ತೀಚೆಗೆ ಶಿಕ್ಷಣ ಕಲಾ ಕ್ಷೇತ್ರದ ಮಹಾ ಸಾಧಕ,ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಡಾ.ಎಂ.ಮೋಹನ ಆಳ್ವರು “ಧರ್ಮದೈವ”ತುಳು ಚಲನಚಿತ್ರದ ಆಫೀಸಿಯಲ್ ಪೋಸ್ಟರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿರುವರು.ಸಹೃದಯಿ ಕಲಾಭಿಮಾನಿಗಳು, ಚಲನ ಚಿತ್ರಮಂದಿರಗಳಲ್ಲಿ ಈ ಚಿತ್ರವನ್ನು ವೀಕ್ಷಿಸಿ ಯುವ ಕಲಾವಿದರನ್ನು,ಹಾಗೂ ನಮ್ಮ ನಾಡು-ನುಡಿ ಸಂಸ್ಕೃತಿಯನ್ನು ಬೆಳಗಿಸಬೇಕೆಂದು ಹಾರೈಸುತ್ತೇವೆ.

LEAVE A REPLY

Please enter your comment!
Please enter your name here