ಕೊಯಿಲ ಉಪವಲಯಾರಣ್ಯಾಧಿಕಾರಿ ಸಂಜೀವರವರ ವರ್ಗಾವಣೆಗೆ ಕೆಎಟಿ ತಡೆ

0

ಕಾಣಿಯೂರು: ಪುತ್ತೂರು ವಲಯದ ಕೊಯಿಲ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಸಂಜೀವ ಅವರನ್ನು ಮಂಗಳೂರಿಗೆ ವರ್ಗಾವಣೆಗೊಳಿಸಿದ್ದ ಆದೇಶಕ್ಕೆ ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ (ಕೆಎಟಿ) ತಡೆ ನೀಡಿದೆ.

ಪುತ್ತೂರು ವಲಯದ ಕೊಯಿಲ ಶಾಖೆಯ ಉಪ ವಲಯದ ಅರಣ್ಯಧಿಕಾರಿಯಾಗಿದ್ದ ನನ್ನನ್ನು ವರ್ಗಾವಣೆ ಮಾಡಿರುವ ಆದೇಶಕ್ಕೆ ಕೆಎಟಿ ತಡೆ ನೀಡಿರುವುದರಿಂದ ತಕ್ಷಣದಿಂದ ಜಾರಿಗೆ ಬರುವಂತೆ ನನಗೆ ಕೊಯಿಲ ಶಾಖೆಯ ಪ್ರಭಾರವನ್ನು ವಹಿಸಿಕೊಳ್ಳಲು ಆದೇಶ ನೀಡಬೇಕಾಗಿ ಮತ್ತು ಬಾಕಿ ಇರುವ ವೇತನವನ್ನು ಪಾವತಿಸಬೇಕಾಗಿ ಸಂಜೀವ ಕೆ.ರವರು ಪುತ್ತೂರು ವಲಯ ಅರಣ್ಯಾಽಕಾರಿಯವರಿಗೆ ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here