ಮತ್ತೆ ಬಂದಾರಿಗೆ ಲಗ್ಗೆಯಿಟ್ಟ ಕಾಡಾನೆ: ಕೃಷಿ ಹಾನಿ

0

ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಓಟೆಚ್ಚಾರು ಬಳಿಯ ನಾಗಳಿಕೆ ಎಂಬಲ್ಲಿ ಮಹೇಶ್ ಎಂಬವರ ತೋಟಕ್ಕೆ ಕಳೆದ ರಾತ್ರಿ ಆನೆ ಲಗ್ಗೆಯಿಟ್ಟಿದ್ದು, ಕೃಷಿ ನಾಶ ಮಾಡಿದೆ.


ನಿನ್ನೆ ರಾತ್ರಿ ಅವರ ತೋಟಕ್ಕೆ ನುಗ್ಗಿದ ಕಾಡಾನೆಯೊಂದು ಬಾಳೆ ಗಿಡ, ಅಡಿಕೆ ಗಿಡಗಳನ್ನು ನಾಶ ಮಾಡಿದೆ. ಕಳೆದ ಸುಮಾರು ಒಂದು ತಿಂಗಳ ಹಿಂದೆ ಈ ಭಾಗದಲ್ಲಿ ಆಗಾಗ ಎರಡು ಕಾಡಾನೆಗಳು ಪ್ರತ್ಯಕ್ಷಗೊಂಡು ಅಲ್ಲಲ್ಲಿ ಕೃಷಿ ಹಾನಿ ಮಾಡುತ್ತಿದ್ದವು. ಅದನ್ನು ಕಾಡಿಗೆ ಬೆನ್ನಟ್ಟುವ ಕೆಲಸ ಅರಣ್ಯಾಧಿಕಾರಿಗಳಿಂದ ನಡೆದಿತ್ತು. ಕಾಡಾನೆಯ ಉಪಟಳ ನಿಂತಿತ್ತು ಎಂದು ಇಲ್ಲಿನ ಜನರು ನೆಮ್ಮದಿಯ ನಿಟ್ಟುಸಿರು ಬಿಡುತ್ತಿರುವಾಗಲೇ ಮತ್ತೆ ಕಾಡಾನೆಯ ಹೆಜ್ಜೆ ಗುರುತು ಕಾಣಿಸಿಕೊಂಡಿದೆ.ಇದರಿಂದಾಗಿ ಈ ಭಾಗದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ನದಿಯ ಇನ್ನೊಂದು ಭಾಗದಲ್ಲಿರುವ ಕಾಡಿನಿಂದ ನದಿ ದಾಟಿ ಬಂದಿರುವ ಶಂಕೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here