ಹತ್ತೂರ ಒಡೆಯನ ಊರಿಗೆ ಕಾಲಿಟ್ಟ ’ಬೋಳಾಸ್’ – ದರ್ಬೆಯಲ್ಲಿ ಬೋಳಾಸ್ ಔಟ್ ಲೆಟ್ ಶುಭಾರಂಭ

0

ಶುಭಾರಂಭದ ಪ್ರಯುಕ್ತ ಒಂದು ದಿನದ ವಿಶೇಷ ಆಫರನ್ನು ಮಿಸ್ ಮಾಡ್ಕೋಬೇಡಿ!

ಪುತ್ತೂರು: ಡ್ರೈಫ್ರುಟ್ಸ್ ಮತ್ತು ನಟ್ಸ್ ಉತ್ಪಾದನೆ ಮತ್ತು ರಫ್ತಿನಲ್ಲಿ ಹೆಸರುವಾಸಿ ಬ್ರ್ಯಾಂಡ್ ಆಗಿರುವ ಮತ್ತು ಉಡುಪಿ ಜಿಲ್ಲೆಗಾಗಿನ ಪ್ರತಿಷ್ಠಿತ ’ರಾಜ್ಯ ಶ್ರೇಷ್ಠ ರಫ್ತು ಪ್ರಶಸ್ತಿ – 2021’ಗೆ ಭಾಜನವಾಗಿರುವ ಬೋಳಾಸ್ ಔಟ್‌ಲೆಟ್ ಇದೀಗ ಮುತ್ತು ಬೆಳೆದ ಊರು ಪುತ್ತೂರಿಗೆ ಕಾಲಿಟ್ಟಿದೆ. ದರ್ಬೆ ಮುಖ್ಯ ರಸ್ತೆಯಲ್ಲಿರುವ ರಿಲಯನ್ಸ್ ಡಿಜಿಟಲ್ ನ ಮುಂಭಾಗದಲ್ಲಿರುವ ಕಟ್ಟಡದಲ್ಲಿ ಬೋಳಾಸ್ ನ ಸುಸಜ್ಜಿತ ಮಳಿಗೆ ಇಂದು(ಜೂ.20) ಶುಭಾರಂಭಗೊಂಡಿತು.

ಪ್ರಾರಂಭದಲ್ಲಿ ವೇ.ಮೂ. ವೆಂಕಟೇಶ್ ಭಟ್ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು ಬಳಿಕ ಅತಿಥಿ ಗಣ್ಯರ ಉಪಸ್ಥಿತಿಯಲ್ಲಿ ನೂತನ ಮಳಿಗೆಯನ್ನು ಶುಭಾರಂಭಗೊಳಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್, ಪುಡಾದ ಮಾಜಿ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಧಾರ್ಮಿಕ ಮುಖಂಡ ಹುಸೈನ್ ದಾರಿಮಿ, ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಪಿ. ವಾಮನ್ ಪೈ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಬಿಜೆಪಿ ನಾಯಕ ಅರುಣ್ ಕುಮಾರ್ ಪುತ್ತಿಲ, ಅಶೋಕ್ ಪ್ರಭು, ಕಟ್ಟಡದ ಮಾಲಕ ಮಂಜುನಾಥ್ ನಾಯಕ್, ಉದ್ಯಮಿಗಳಾದ ಗಿರಿಧರ್, ಮನೋಹರ್, ವಿಶ್ವಾಸ್ ಶೆಣೈ, ಶ್ರೀನಿವಾಸ ಪೈ, ಆಶೀರ್ವಾದ್ ಫರ್ನಿಚರ್ ನ ಮಾಲಕ ಮಂಜುನಾಥ ಪ್ರಭು ಮೊದಲಾದವರು ಉಪಸ್ಥಿತರಿದ್ದು ನೂತನ ಮಳಿಗೆಯ ಯಶಸ್ಸಿಗೆ ಶುಭವನ್ನು ಹಾರೈಸಿದರು.


ಬೋಳಾಸ್ ಸಂಸ್ಥೆಯ ಮಾಲಕರಾಗಿರುವ ಬೋಳ ದಾಮೋದರ ಕಾಮತ್ ಮತ್ತು ಅವರ ಪತ್ನಿ ಮಲ್ಲಿಕಾ ಕಾಮತ್, ಪುತ್ತೂರು ಮಳಿಗೆಯ ಫ್ರಾಂಚೈಸಿದಾರರಾಗಿರುವ ದಿನಕರ ಶೆಣೈ ಹಾಗೂ ಶಶಾಂಕ್ ಶೆಣೈ, ಧನ್ಯಾ ಶೆಣೈ, ನಿರಂಜನ್ ಕಾಮತ್, ವೃಂದ ವೇದವ್ಯಾಸ್ ಕಾಮತ್ ಅತಿಥಿ ಗಣ್ಯರನ್ನು ಸ್ವಾಗತಿಸಿದರು.

ಈಗಾಗಲೇ ನಾಡಿನಾದ್ಯಂತ ಮನೆಮಾತಾಗಿರುವ ಬೋಳಾಸ್ ನಲ್ಲಿ ಉತ್ತಮ ಗುಣಮಟ್ಟದ ಡ್ರೈ ಫ್ರೂಟ್ಸ್, ನಟ್ಸ್, ಸ್ವೀಟ್ ಗಳು, ರಿಫೈನ್ಡ್ ಆಯಿಲ್ ಸಹಿತ ಮತ್ತು ಇನ್ನೂ ಹಲವಾರು ವೈವಿಧ್ಯಮಯ ಉತ್ಪನ್ನಗಳು ಫ್ಯಾಕ್ಟರಿ ದರದಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ. ಈ ಮಳಿಗೆಯು ವಾರದ ಏಳೂ ದಿನಗಳಲ್ಲಿ ಕಾರ್ಯಾಚರಿಸಲಿದ್ದು ಬೆಳಿಗ್ಗೆ 9.00 ಗಂಟೆಯಿಂದ ರಾತ್ರಿ 9.00 ಗಂಟೆಗಳವರೆಗೆ ಗ್ರಾಹಕರ ಸೇವೆಗೆ ಸಿದ್ಧವಾಗಿದೆ.
ಶುಭಾರಂಭದ ಆಫರ್ ಆಗಿ ಜೂ.20ರಂದು ಗ್ರಾಹಕರು ನಡೆಸುವ ರೂ.400ಕ್ಕಿಂತ ಹೆಚ್ಚಿನ ಖರೀದಿಯ ಮೇಲೆ ರೂ 375 ಮೌಲ್ಯದ 200 ಗ್ರಾಂ ಸಾಲ್ಟೆಡ್ ಪಿಸ್ತಾಚಿಯೋ ಉಚಿತವಾಗಿ ಲಭಿಸಲಿದೆ. ಮಳಿಗೆ ಶುಭಾರಂಭಗೊಂಡ ಮೊದಲ ದಿನವೇ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here