ಕುಂತೂರುಪದವು ಶಾಲಾ ಮಂತ್ರಿಮಂಡಲ ರಚನೆ

0

ನಾಯಕಿ-ಯಕ್ಷಿತಾ ಎನ್.ಟಿ., ಉಪನಾಯಕಿ-ವಚನ್ ಕೆ.ಎಸ್.

ಕಡಬ: ಕುಂತೂರುಪದವು ಸರಕಾರಿ ಹಿ.ಪ್ರಾ.ಶಾಲಾ ಮಂತ್ರಿ ಮಂಡಲವನ್ನು ಚುನಾವಣೆ ಮೂಲಕ ಆಯ್ಕೆ ಮಾಡಲಾಯಿತು.ಶಾಲಾ ನಾಯಕಿಯಾಗಿ 7ನೇ ತರಗತಿಯ ಯಕ್ಷಿತಾ ಎನ್.ಟಿ., ಉಪನಾಯಕಿಯಾಗಿ 6ನೇ ತರಗತಿಯ ವಚನ್ ಕೆ.ಎಸ್. ಆಯ್ಕೆಯಾಗಿದ್ದಾರೆ.

ಸಭಾಪತಿಯಾಗಿ ನಿಖಿಲ್ 7ನೇ, ವಿರೋಧ ಪಕ್ಷದ ನಾಯಕನಾಗಿ ಅಶ್ವಿತ್ 7ನೇ, ಗೃಹಮಂತ್ರಿಯಾಗಿ ಜೀವಿತ್ 7ನೇ, ಉಪಮಂತ್ರಿಯಾಗಿ ನಿಶಾಂತ್ ಎ. 6ನೇ, ರಕ್ಷಣಾ ಮಂತ್ರಿಯಾಗಿ ಪವನ್ 7ನೇ, ಉಪಮಂತ್ರಿಯಾಗಿ ಹಿತೇಶ್ 6ನೇ, ಶಿಕ್ಷಣ ಮಂತ್ರಿ ಮತ್ತು ಶಿಸ್ತು ಮಂತ್ರಿಯಾಗಿ ಖತೀಜತುಲ್ ಅಫ್ಸರ 7ನೇ ಹಾಗೂ ರಿತೇಶ್ 7ನೇ, ನೇಹಾ 6ನೇ, ಆರೋಗ್ಯ ಮಂತ್ರಿಯಾಗಿ ಪುಣ್ಯಶ್ರೀ 7ನೇ, ಕೃತಿಕಾ 7ನೇ, ಜನನಿ 6ನೇ, ಸಾಂಸ್ಕೃತಿಕ ಮಂತ್ರಿಯಾಗಿ ದಿಶಾ 7ನೇ, ಚಾರ್ವಿ 5ನೇ, ಅನುಶ್ರೀ 6ನೇ, ತೋಟಗಾರಿಕೆ ಮಂತ್ರಿಯಾಗಿ ಕಿಶನ್ 7ನೇ, ಮನ್ವಿತ್ 6ನೇ, ಪವನ್, ವಿದ್ಯಾಂತ್, ದೀಕ್ಷಿತ್, ಸ್ವಚ್ಛತಾ ಮಂತ್ರಿಯಾಗಿ ನಿಧಿ 7ನೇ, ರೇಷ್ಮಾ 6ನೇ, ನೀರಾವತಿ ಮಂತ್ರಿಯಾಗಿ ರಕ್ಷಿತ್ 7ನೇ, ಪ್ರೀತಂ 6ನೇ, ಯಶಸ್, ಆಹಾರ ಮಂತ್ರಿಯಾಗಿ ಹಂಸಿಕಾ 7ನೇ, ಸುಮಂತ್ 6ನೇ, ಪೂರ್ಣೇಶ್ 5ನೇ, ವಾರ್ತಾಮಂತ್ರಿಯಾಗಿ ಮೇಘಶ್ರೀ 7ನೇ, ಕಿಶ್ವಿತ್ 6ನೇ, ಚಿಂತನ್ 5ನೇ, ಕ್ರೀಡಾಮಂತ್ರಿಯಾಗಿ ದೀಕ್ಷಾ 7ನೇ, ಅಕ್ಷಯ್ 7ನೇ, ಅಫೀಝ 6ನೇ ಆಯ್ಕೆಯಾದರು.
ಶಿಕ್ಷಕರಾದ ಕೇಶವ ಕೆ., ಶಿವಣ್ಣ, ಕುಸುಮ ರವರು ಮತಗಟ್ಟೆ ಅಧಿಕಾರಿಗಳಾಗಿ ಸಹಕರಿಸಿದರು. ಶಾಲಾ ಮುಖ್ಯಶಿಕ್ಷಕಿ ಗಿರಿಜ ವಿ.,ಪ್ರಮಾಣ ವಚನ ಬೋಧಿಸಿದರು. ಗೌರವ ಶಿಕ್ಷಕಿ ಗಾಯತ್ರಿ ಚುನಾವಣಾ ಪ್ರಕ್ರಿಯೆಯಲ್ಲಿ ಸಹಕರಿಸಿದರು

LEAVE A REPLY

Please enter your comment!
Please enter your name here