ಸಂತ ವಿಕ್ಟರ್ ಆಂಗ್ಲ ಮಾಧ್ಯಮ ಶಾಲಾ ಮಂತ್ರಿ ಮಂಡಲ ಪದಗ್ರಹಣ ಸಮಾರಂಭ

0

ಪುತ್ತೂರು:ಪುತ್ತೂರು ಸಂತ ವಿಕ್ಟರನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ 2024- 25 ನೇ ಶೈಕ್ಷಣಿಕ ವರ್ಷದ ಶಾಲಾ ಮಂತ್ರಿ ಮಂಡಲದ ಪದಗ್ರಹಣ ಸಮಾರಂಭವು ಜೂ.19ರಂದು ಮಾಯಿದೆ ದೇವುಸ್ ಚರ್ಚ್ ಸಭಾಂಗಣದಲ್ಲಿ ನಡೆಯಿತು.


ಶೈಕ್ಷಣಿಕ ವರ್ಷದ ಚುನಾವಣೆಯಲ್ಲಿ ನಾಯಕನಾಗಿ ಸಾಕ್ಷಾತ್ ಶೆಟ್ಟಿ ಬಿ ಹಾಗೂ ಉಪನಯಕಿಯಾಗಿ ದೀಯಾ ಜಿ ಇವರು ಆಯ್ಕೆಯಾಗಿದ್ದರು.
ಮಂತ್ರಿಮಂಡಲದ ಸದಸ್ಯರುಗಳಾಗಿ ಮೆವಿಸ್ಸಾ ಏಂಜೆಲ್ ಡಿ’ಸೋಜ, ಮುಹಮ್ಮದ್ ರಿಯಾನ್,ಆಯಿಷತ್ ಶಹೀಮಾ ಮತ್ತು ಮೊಹಮ್ಮದ್ ರಯೀಝ್ ರನ್ನು ನಿಯೋಜಿಸಲಾಯಿತು.


ಶಾಲಾ ಸಹಾಯಕ ಧರ್ಮಗುರು ಲೋಹಿತ್ ಅಜಯ್ ಮಸ್ಕರೇನಸ್ ಅವರ ಅಧ್ಯಕ್ಷತೆಯಲ್ಲಿ, ಶಾಲಾ ಮುಖ್ಯೋಪಾಧ್ಯಾಯ ಹ್ಯಾರಿ ಡಿ’ಸೋಜಾ ಇವರ ನೇತೃತ್ವದಲ್ಲಿ . ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


ಮುಖ್ಯ ಅತಿಥಿಯಾಗಿ ಶಾಲಾ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ಮಹೇಶ್ಚಂದ್ರ ಸಾಲಿಯಾನ್ ಉಪಸ್ಥಿತರಿದ್ದರು. ವೇದಿಕೆಯಲ್ಲಿ ವಿದ್ಯಾರ್ಥಿಗಳಿಂದ ಶಿಕ್ಷಣದ ಮಹತ್ವವನ್ನು ತಿಳಿಸುವ ಒಂದು ಶೈಕ್ಷಣಿಕ ‘ಕಿರು ನಾಟಕ’ವನ್ನು ಪ್ರದರ್ಶಿಸಲಾಯಿತು.ಫೆಲ್ಸಿಟಾ ಡಿ’ಕುನ್ಹಾ ಸ್ವಾಗತಿಸಿ,ಸಾನ್ವಿ ವಂದಿಸಿದರು.

LEAVE A REPLY

Please enter your comment!
Please enter your name here