ಆಲಂಕಾರು ಶ್ರೀ ಭಾರತಿ ವಿದ್ಯಾಸಂಸ್ಥೆಯಲ್ಲಿ ಯೋಗ ದಿನಾಚರಣೆ

0

ಆಲಂಕಾರು: ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಶ್ರೀಭಾರತಿ ವಿದ್ಯಾಸಂಸ್ಥೆಯ ಮಾಧವ ಸಭಾಭವನದಲ್ಲಿ ಸುಮಾರು 300ಕ್ಕೂ ಅಧಿಕ ಶಾಲಾ ವಿದ್ಯಾರ್ಥಿಗಳಿಂದ ಸೂರ್ಯನಮಸ್ಕಾರ, ವಿವಿಧ ಯೋಗಾಸನಗಳು, ಯೋಗ ರಿಧಮಿಕ್ ಪ್ರದರ್ಶನ ನಡೆಯಿತು.

ಬಳಿಕ ನಡೆದ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ಗಂಗಾಧರ ಗೌಡ ಕುಂಡಡ್ಕ ವಹಿಸಿದ್ದರು.ಮುಖ್ಯ ಅತಿಥಿ ಯಾಗಿ ಬೃಂದಾ ಪ್ರಮೋದ್ ಕುಮಾರ್ ಮಾತನಾಡಿ ಸುಮಾರು 84 ಲಕ್ಷ ಯೋಗಾಸನಗಳು ಇವೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಈ ಆಸನಗಳ ಯೋಗಸಾಧಕರಾಗಿ ಎಂದು ಶುಭಹಾರೈಸಿದರು.

ಯೋಗಾಸನ ಮಾಡುವಾಗ ಯೋಗಪಟುಗಳು ವಹಿಸಬೇಕಾದ ಎಚ್ಚರಿಕೆಗಳನ್ನು ಮಕ್ಕಳ ಗಮನಕ್ಕೆ ತಲುಪಿಸಿದರು. ಪತ್ರಕರ್ತ ಮತ್ತು ಎಸ್.ಪಿ.ವೈ.ಎಸ್.ಎಸ್ ನ ಯೋಗ ಶಿಕ್ಷಕರಾದ ಸದಾಶಿವ ಶೆಟ್ಟಿ ಮಾರಂಗ ಅತಿಥಿಯಾಗಿ ಮಾತನಾಡಿ ಯೋಗವು ಶಿವದೇವನಿಂದ ಪಾರ್ವತಿಗೆ ಅಲ್ಲಿಂದ ಮುನಿವೃಂದವರಿಂದ ಪತಂಜಲಿ ಮುನಿಯ ಮೂಲಕ ಯೋಗ ಪ್ರಾಪ್ತಿಯಾಯಿತು ಎನ್ನುವ ಪ್ರತೀತಿ ಇದೆ.ಇಂದು ಯೋಗವು ಭಾರತೀಯರಿಗೆ ದೊರೆತ ಅತ್ಯ ಅಮೂಲ್ಯ ರತ್ನವಾಗಿದೆ ಎಂದು ತಿಳಿಸಿ. ನಮ್ಮ ದೇಶದ ಹೆಮ್ಮೆಯ ಪ್ರಧಾನ ಮಂತ್ರಿಗಳ ಮೂಲಕ ಯೋಗವು ಜಗದ್ವಿಖ್ಯಾತ ವಾಗಿದೆ. ಯೋಗದಿಂದ ಮಾನಸಿಕ, ದೈಹಿಕ,ಸಾಮಾಜಿಕ ನೆಮ್ಮದಿಯೊಂದಿಗೆ ಸಮಾಜದಲ್ಲಿ ಶಾಂತಿ ನೆಲಸಲು ಪೂರಕವಾಗಿದೆ ಆ ಮೂಲಕ ನಾವೆಲ್ಲರೂ ಜಾತಿ ಮತ ಬೇಧಬಾವವಿಲ್ಲದೇ ಯೋಗಭ್ಯಾಸದಲ್ಲಿ ನಿತ್ಯ ನಿರಂತರ ಯೋಗದಲ್ಲಿ ಜೋಡಗಿಸಿಕೊಳ್ಳುವಂತೆ ವಿನಂತಿಸಿದರು.


ವೇದಿಕೆಯಲ್ಲಿಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಇಂದುಶೇಖರ ಶೆಟ್ಟಿ ಬರೆಪುದೇಲು ಮತ್ತು ಶ್ರೀಮಾನ್ ಸತೀಶ್ ಕುಮಾರ್ ಜಿ. ಆರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಸಂತೋಷ್ ಮತ್ತು ಅನಿತಾ ಮಾತಾಜಿ ವಿದ್ಯಾರ್ಥಿಗಳಿಗೆ ಯೋಗ ತರಬೇತಿ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಸಭಾಕಾರ್ಯಕ್ರಮದಲ್ಲಿ ಶಾಲಾ ಮಾತಾಜಿ ಕು. ಜಯಶ್ರೀ ಪ್ರಾರ್ಥಿಸಿದರು.ಮುಖ್ಯಮಾತಾಜಿ ಶ್ರೀಮತಿ ಆಶಾ. ಎಸ್. ರೈ ಸ್ವಾಗತಿಸಿ, ಶ್ರೀಮತಿ ಸುಪ್ರಿತಾ ಮಾತಾಜಿ ವಂದನಾರ್ಪಣೆ ಗೈದರು.ಮಾತಾಜಿ ಶ್ರೀಮತಿ ವೇದಾವತಿ ಕಾರ್ಯಕ್ರಮ ನಿರೂಪಿಸಿದರು.ಶಾಲಾ ಮಾತಾಜಿ ಶ್ರೀಮಾನ್ ಸಿಬ್ಬಂದಿ ವೃಂದ, ವಿದ್ಯಾರ್ಥಿವೃಂದ, ಪಾಲಕ ವೃಂದ ಕಾರ್ಯಕ್ರಮದ ಯಶಸ್ವಿಗೆ ವಿಶೇಷವಾಗಿ ಸಹಕರಿಸಿದ್ದರು.ಶಾಲಾ ಆಡಳಿತ ಮಂಡಳಿ ಹಿರಿಯರು ಕಾರ್ಯಕ್ರಮಕ್ಕೆ ಮಾರ್ಗದರ್ಶನಗೈದರು.

LEAVE A REPLY

Please enter your comment!
Please enter your name here