ಮಾರ್ ಇವಾನಿಯೋಸ್ ಬಿ ಎಡ್ ಕಾಲೇಜಿನಲ್ಲಿ ನಾಟಕ ಮತ್ತು ರಂಗಕಲೆಯ ಕುರಿತು ಕಾರ್ಯಗಾರ

0

ಕುಂತೂರು: ಇಲ್ಲಿನ ಮಾರ್ ಇವಾನಿಯೋಸ್ ಶಿಕ್ಷಕ-ಶಿಕ್ಷಣ ಮಹಾವಿದ್ಯಾಲಯದಲ್ಲಿ ದ್ವಿತೀಯ ವರ್ಷದ ತೃತೀಯ ಸೆಮಿಸ್ಟರ್ನ ಪ್ರತಿಕ್ಷಣಾರ್ಥಿಗಳಿಗೆ ಪಠ್ಯಕ್ರಮದ ಭಾಗವಾಗಿ “ಶಿಕ್ಷಣದಲ್ಲಿ ನಾಟಕ ಮತ್ತು ರಂಗಕಲೆ” ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಗಾರವನ್ನು ಕಾಲೇಜಿನಲ್ಲಿ ಏರ್ಪಡಿಸಲಾಯಿತು.

ಈ ಕಾರ್ಯಗಾರವನ್ನು ನಡೆಸಿಕೊಡಲು ಸಂಪನ್ಮೂಲ ವ್ಯಕ್ತಿಯಾಗಿ, ಅನುದಾನಿತ ಪ್ರೌಢಶಾಲೆ ಮುಂಡಾಜೆ ಇಲ್ಲಿನ ದೈಹಿಕ ಶಿಕ್ಷಣ-ಶಿಕ್ಷಕ ಗುಣಪಾಲ್‌ ಎಂ ಎಸ್ ಭಾಗವಹಿಸಿ, ಕಾರ್ಯಕ್ರಮವನ್ನು ವಹಿಸಿಕೊಟ್ಟರು.

ಕಾರ್ಯಗಾರ ಕಾರ್ಯಕ್ರಮವನ್ನು ಕಾಲೇಜಿನ ವ್ಯವಸ್ಥಾಪಕ ಎಲ್ದೋ ಪುತ್ತನ್ ಕಂಡತ್ತಿಲ್ ಅವರು ಉಪಸ್ಥಿತರಿದ್ದು‌,  ದೀಪ ಬೆಳಗಿಸಿ ಚಾಲನೆ ನೀಡಿ, ಕಾರ್ಯಕ್ರಮದ ಯಶಸ್ವಿಗೆ ಶುಭ ಹಾರೈಸಿದರು. ಕಾರ್ಯಕ್ರಮದ ಸಂಯೋಜಕರಾದ ಉಪನ್ಯಾಸಕಿ ಉಮಾಶ್ರೀ ಪಿ ಬಿ ಅತಿಥಿಗಳ ಕಿರು ಪರಿಚಯ ನೀಡಿದರು.

ಕಾಲೇಜಿನ ಪ್ರಾಂಶುಪಾಲೆ ಉಷಾ ಎಂ ಎಲ್‌ ಸ್ವಾಗತಿಸಿ,  ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ದೀಕ್ಷಾ ಮ್ಯಾಥ್ಯು ವಂದಿಸಿದ್ದರು. ಪ್ರತಿಕ್ಷಣಾರ್ಥಿಗಳಾದ ಕೈರುಣಿಸಬಾನು ಮತ್ತು ಕುಮಾರಿ ದೀಕ್ಷಿತಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here