ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಕುಂಬ್ರ ಶಾಖೆಯು ಹತ್ತನೇ ವರ್ಷಕ್ಕೆ ಪಾದಾರ್ಪಣೆ- ಕಚೇರಿಯಲ್ಲಿ ಗಣಪತಿ ಹವನ ಮತ್ತು ಲಕ್ಷ್ಮೀ ಪೂಜೆ

0

ಕುಂಬ್ರ:ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಪ್ರಾಯೋಜಿತ,ಪುತ್ತೂರು ಎಪಿಯಂಸಿ ರಸ್ತೆಯಲ್ಲಿನ ಮಣಾಯಿ ಆರ್ಚ್ ಕಟ್ಟಡದಲ್ಲಿ ಪ್ರಧಾನ ಕಚೇರಿ ಹೊಂದಿರುವ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಪುತ್ತೂರು ಇದರ ಕುಂಬ್ರ ಶಾಖೆಯು ಯಶಸ್ವಿ 9 ವರ್ಷಗಳನ್ನು ಪೂರೈಸಿ 10 ನೇ ವರ್ಷಕ್ಕೆ ಪಾದಾರ್ಪಣೆಗೊಳ್ಳುತ್ತಿರುವ ಹಿನ್ನಲೆಯಲ್ಲಿ ಕಿರಣ್ ಸಂಕೀರ್ಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಕುಂಬ್ರ ಶಾಖ ಕಚೇರಿಯಲ್ಲಿ ಜೂನ್ 21 ರಂದು ಬೆಳಿಗ್ಗೆ ಗಣಪತಿ ಹವನ ಲಕ್ಷ್ಮೀ ಪೂಜೆ ನಡೆಯಿತು. ಪುರೋಹಿತ ಕೃಷ್ಣ ಕುಮಾರ್ ಉಪಾಧ್ಯಾಯ ಹೊಸಮೂಲೆ ಅವರು ಧಾರ್ಮಿಕ ವಿದಿವಿಧಾನ ನೆರವೇರಿಸಿದರು.


ಸರಳ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಚಿದಾನಂದ ಬೈಲಾಡಿ ಮಾತನಾಡಿ ಒಕ್ಕಲಿಗ ಗೌಡ ಸೇವಾ ಸಂಘದ ಅಂದಿನ ಅಧ್ಯಕ್ಷರಾಗಿದ್ದ ಮೋಹನ ಗೌಡ ಇಡ್ಯಡ್ಕ ಅವರ ನೇತೃತ್ವದಲ್ಲಿ 20 ಮಂದಿ ಸಮಾನ ಮನಸ್ಕರ ತಂಡ ರಚಿಸಿ ಸಂಘ ಸ್ಥಾಪನೆ ಪ್ರಕ್ರಿಯೆ ಆರಂಭಗೊಂಡು,ಇದರ ಫಲವಾಗಿ ಸೆ. 2. 2002 ರಲ್ಲಿ ಪುತ್ತೂರಿನಲ್ಲಿ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಉದ್ಘಾಟನೆಗೊಂಡಿತು.ಜಗನ್ನಾಥ ಬೊಮ್ಮೆಟ್ಟಿ ಅವರ ಸ್ಥಾಪಕಾಧ್ಯಕ್ಷರಾಗಿ ನೇತೃತ್ವ ವಹಿಸಿಕೊಂಡಿದ್ದರು.ಆ ನಂತರ 2009ರಲ್ಲಿ ಕಡಬ ಶಾಖೆ,2011ರಲ್ಲಿ ಉಪ್ಪಿನಂಗಡಿ,2014 ರಲ್ಲಿ ನೆಲ್ಯಾಡಿ,2015 ರಲ್ಲಿ ಕುಂಬ್ರ,2020 ರಲ್ಲಿ ಅಲಂಕಾರು,2021 ರಲ್ಲಿ ಪುತ್ತೂರು,2022ರಲ್ಲಿ ಕಾಣಿಯೂರು,2023ರಲ್ಲಿ ಬೆಳ್ಳಾರೆಯಲ್ಲಿ ಶಾಖೆ ಆರಂಭಿಸಲಾಗಿದ್ದು, 2020 ರಿಂದ 2023 ವರ್ಷಕ್ಕೆ ನಾಲ್ಕು ಶಾಖೆ ಆರಂಭಗೊಂಡಿರುವುದು ಸಂಘದ ಅಭಿವೃದ್ಧಿಯ ಸಂಕೇತವಾಗಿದೆ ಎಂದರು.ಸಂಘವು 2023 -2024 ನೇ ಸಾಲಿನಲ್ಲಿ ಸಂಘವು 9 ಶಾಖೆ ಗಳಲ್ಲೂ ದಾಖಲೆಯ ಮಟ್ಟದ ವ್ಯವಹಾರ ನಡೆದಿದ್ದು, ಸಂಘದಲ್ಲಿ ಒಟ್ಟು 542 ಕೋಟಿ ರೂ ವ್ಯವಹಾರ ನಡೆದಿದ್ದು 99.12 ಶೇ ಸಾಲ ವಸೂಲಾತಿಯಾಗಿದೆ.1.52 ಕೋಟಿ ಲಾಭ ಬಂದಿದ್ದು,104 ಕೋಟಿ ರೂ ಠೇವಣಿ ಸಂಗ್ರಹವಾಗಿದ್ದು,97 ಕೋಟಿ ರೂ ಸಾಲ ವಿತರಣೆಯಾಗಿದೆ ಎಂದರು. ಕುಂಬ್ರ ಶಾಖೆಯು ಕೂಡ ಸಲಹಾ ಸಮಿತಿ ಹಾಗು ಸಿಬ್ಬಂದಿ ವರ್ಗ ಮತ್ತು ಗ್ರಾಹಕರ ಸಹಕಾರದಿಂದ ಅತ್ಯುತ್ತಮ ವ್ಯವಹಾರ ನಡೆಸಿ ಉನ್ನತ ಮಟ್ಟದ ಸಾಧನೆ ಮಾಡಿದೆ ಎಂದು ಶ್ಲಾಘಿಸಿ ಅಭಿನಂದನೆ ತಿಳಿಸಿದರು.


ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ನಿರ್ದೇಶಕರು ಮತ್ತು ಕುಂಬ್ರ ಶಾಖ ಸಲಹಾ ಸಮಿತಿ ಅಧ್ಯಕ್ಷರಾದ ಲೋಕೇಶ್ ಚಾಕೋಟೆ ಮಾತನಾಡಿ ಕುಂಬ್ರ ಶಾಖೆಯು 9 ವರ್ಷಗಳನ್ನು ಪೂರೈಸಿ 10 ನೇ ವರ್ಷಕ್ಕೇ ಪಾದಾರ್ಪಣೆ ಗೊಳ್ಳುತ್ತಿದ್ದು ಗ್ರಾಹಕ ಬಂಧುಗಳ ಸಹಕಾರ ,ಸಿಬ್ಬಂದಿ ವರ್ಗದವರ ನಗುಮೊಗದ ಸೇವೆ ಮತ್ತು ಆಡಳಿತ ಮಂಡಳಿ ಮತ್ತು ಸಲಹಾ ಸಮಿತಿಯ ಸಂಪೂರ್ಣ ಸಹಕಾರದಿಂದ ಕುಂಬ್ರ ಶಾಖೆಯು ಅತ್ಯುತ್ತಮ ವ್ಯವಹಾರ ನಡೆಸುತ್ತಿದ್ದು 2023-2024 ನೇ ವರ್ಷದಲ್ಲಿ 46.83 ಕೋಟಿ ವ್ಯವಹಾರ ನಡೆಸಿದ್ದು,13 ಕೋಟಿ ಠೇವಣಿ ಸಂಗ್ರಹ ಮಾಡಿ 10.13 ಕೋಟಿ ರೂ ಸಾಲ ವಿತರಣೆ ಮಾಡಲಾಗಿದ್ದು,99.27 ಶೇ ಸಾಲ ವಸೂಲಾತಿಯೊಂದಿಗೆ ಉತ್ತಮ ವ್ಯವಹಾರ ನಡೆದಿದೆ. ಮುಂದೆಯೂ ಸಂಘದ ಪ್ರಗತಿಗೆ ನಿಮ್ಮೆಲ್ಲರ ಸಹಕಾರ ಅಗತ್ಯ ಎಂದರು.


ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷರಾದ ರವಿ ಮುಂಗ್ಲಿಮನೆ ಸಂಘದ ಬೆಳವಣಿಗೆಗೆ ಪ್ರಸಂಶೆ ವ್ಯಕ್ತಪಡಿಸಿ ,ಮುಂದೆಯೂ ಸಂಘ ಯಶಸ್ವೀಯಾಗಿ ಮುನ್ನಡೆಯೆಲಿ ಎಂದು ಶುಭಹಾರೈಸಿದರು.


ಜು 13 ರಂದು ನೂತನ ವಿಟ್ಲ ಶಾಖೆ ಉದ್ಘಾಟನೆ, ಆಮಂತ್ರಣ ಪತ್ರಿಕೆ ವಿತರಣೆ
ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಪುತ್ತೂರು ಇದರ 10ನೇ ನೂತನ ಶಾಖೆ ಜು 13 ರಂದು ಗಣ್ಯರ ಉಪಸ್ಥಿತಿಯಲ್ಲಿ ವಿಟ್ಲ ಎಂಪೈರ್ ಮಹಲ್ ನಲ್ಲಿ ಉದ್ಘಾಟನೆಗೊಳ್ಳಲಿದ್ದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲರಿಗೂ ಆಮಂತ್ರಣ ಪತ್ರಿಕೆಯನ್ನು ಸಂಘದ ಅಧ್ಯಕ್ಷರಾದ ಚಿದಾನಂದ ಬೈಲಾಡಿ ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.


ಕಾರ್ಯಕ್ರಮದಲ್ಲಿ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ದಯಾನಂದ ಕೆ ಎಸ್,ಸಾರ್ವಜನಿಕ ಸಂಪರ್ಕಧಿಕಾರಿ ಶ್ರೀಧರ ಗೌಡ ಕಣಾಜಲು , ತಾಲೂಕು ಗೌಡ ಸೇವಾ ಸಂಘದ ಮಾಜಿ ಅಧ್ಯಕ್ಷರಾದ ವಿಶ್ವನಾಥ ಗೌಡ ಕೆಯ್ಯುರು,ತಾಲೂಕು ಯುವ ಘಟಕದ ಅಧ್ಯಕ್ಷರಾದ ಅಮರನಾಥ ಗೌಡ ಬಪ್ಪಳಿಗೆ,ಕಾರ್ಯದರ್ಶಿ ಆನಂದ ಗೌಡ, ಸಂಘದ ಆಡಳಿತ ಸಮಿತಿ ನಿರ್ದೇಶಕರಾದ ಜಿನ್ನಪ್ಪ ಗೌಡ ಮಲುವೇಲು,ಪ್ರವೀಣ್ ಕುಂಟ್ಯಾನ,ತೇಜಸ್ವಿನಿ ಕಟ್ಟಪುಣಿ, ಮಾಜಿ ನಿರ್ದೇಶಕರಾದ ಲಿಂಗಪ್ಪ ಗೌಡ,ವಿಜಯ ಬಿ ಕೆ, ಕುಂಬ್ರ ಶಾಖ ಸಲಹಾ ಸಮಿತಿಯ ಗೌರವ ಸಲಹೆಗಾರರಾದ ಶಿವರಾಮ ಗೌಡ ಇದ್ಯಾಪೇ,ಉಪಾಧ್ಯಕ್ಷ ಸತೀಶ್ ಪಾಂಬರು, ಸದಸ್ಯರಾದ ನಾಗಪ್ಪ ಗೌಡ ಬೊಮ್ಮೆಟ್ಟಿ, ರೇಖಾ ಆರ್ ಗೌಡ,ಶ್ರೀಧರ ಗೌಡ ಅಂಗಡಿಹಿತ್ಲು,ವಿಶ್ವನಾಥ ಗೌಡ ಬೋಳ್ಳಡಿ,ಶ್ರೀಧರ ಗೌಡ ಎರಕ್ಕಲ, ಉಮೇಶ್ ಗೌಡ ಕನ್ನಯ,ರಾಮಣ್ಣ ಗೌಡ ಬಸವನಹಿತ್ಲು,ವಿಜಯಭಾರತಿ,ಚಂದ್ರ ಶೇಖರ ಗೌಡ ಸಾರೆಪ್ಪಡಿ,ತಿರುಮಲೇಶ್ವರ ಗೌಡ ದೊಡ್ಡಮನೆ, ಸುಬ್ರಾಯ ಗೌಡ ಪಾಲ್ತಾಡಿ,ಮುಖ್ಯಕಾರ್ಯನಿರ್ವಹಣಾಧಿಕಾರಿ ಸುಧಾಕರ್ ಕೆ,ಒಕ್ಕಲಿಗ ಗೌಡ ಸೇವಾ ಸಂಘದ ಪದಾಧಿಕಾರಿ ವಸಂತ ವಿರಮಂಗಳ, ಸುರೇಶ್ ಕಲ್ಲಾರೆ, ನಾಗೇಶ್ ಕೇಡೆಂಜಿ,ಸದಸ್ಯರಾದ ಶಿವರಾಮ ಗೌಡ ಬೊಳ್ಳಡಿ,ರಾಮಯ್ಯ ಗೌಡ ಬೊಳ್ಳಡಿ,ರಂಗನಾಥ, ಉಮಾಕಾಂತ ಬೈಲಾಡಿ, ರಾಧಾಕೃಷ್ಣ ಗೌಡ ಕುಂಬ್ರ,ಪುಂಡರಿಕ ಗೌಡ, ವಿಜಯಾ ಕುಮಾರ್ ಸನಂಗಳ, ಹೂವಪ್ಪ ಗೌಡ ,ಸೀತಾರಾಮ ಗೌಡ ಇದ್ಯಾಪೇ, ಸಣ್ಣಣ್ಣ ಗೌಡ,ಮಾಯಿಲಪ್ಪ ಗೌಡ ಕಂಟ್ರಮಜಲು,ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ಕಾರ್ಯದರ್ಶಿ ದಿವ್ಯಪ್ರಸಾದ್ ಎ ಎಂ ಈಶ್ವರಮಂಗಲ ವಲಯ ಯುವ ಘಟಕದ ಅದ್ಯಕ್ಷರಾದ ಜಗ್ಗನಾಥ ಪಟ್ಟೆ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಕಾವು,ಕುಂಬ್ರ ವಲಯ ಯುವ ಘಟಕ ಅಧ್ಯಕ್ಷರಾದ ಸತೀಶ್ ನೂಜಿ, ಶ್ರೀನಿವಾಸ ಗೌಡ ಕನ್ನಯ,ಶುಭ ಪ್ರಕಾಶ್ ಎರಬೈಲು,ತಿಮ್ಮಪ್ಪ ಗೌಡ,ದೇವಪ್ಪ ಗೌಡ ತೇಗ್ಗು, ಕುಂಬ್ರ ಡಿಸಿಸಿ ಬ್ಯಾಂಕ್ ಮೆನೇಜರ್ ಮತ್ತು ಸಿಬ್ಬಂದಿ ವರ್ಗ, ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿ ಬಿ ಆರ್,ಆದರ್ಶ ಸಹಕಾರಿ ಸಂಘದ ,ಮೂರ್ತೆದಾರರ ವಿವಿದ್ದೋದ್ದೇಶ ಸಹಕಾರಿ ಸಂಘದ ಸಿಬ್ಬಂದಿ ವರ್ಗ,ರಾಮಕೃಷ್ಣ ಭಟ್ ಮಾಡಾವು,ಸೇತು ಮಾಧವನ್ ದೇರ್ಲ,ದೇವಿಕಾ ಶ್ರೀಧರ ಗೌಡ ಅಂಗಡಿಹಿತ್ಲು, ಗುರುರಾಜ್ ಅಂಗಡಿಹಿತ್ಲು,ಭರತ್ ಗೌಡ ಕೆಯ್ಯುರು, ಕುಂಬ್ರ ವರ್ತಕರ ಸಂಘದ ಅಧ್ಯಕರಾದ ರಫೀಕ್ ಅಲ್ ರಾಯ,ಇಲ್ಯಸ್,ಸುಂದರ್ ರೈ ಮಂದಾರ,ದುರ್ಗಪ್ರಸಾದ್ ರೈ,ಬ್ಯಾಂಕ್ ಆಫ್ ಬರೋಡಾ ದ ರಾಮದಾಸ್ ರೈ,ಕುಶಾಲಪ್ಪ ಗೌಡ,ದಿವಾಕರ ರೈ, ರಮೇಶ್ ಆಳ್ವ, ಕುಶಾಲಪ್ಪ ಗೌಡ ಚಾಕೋಟೆ,ಜಯರಾಮ ಗೌಡ ಇರಿಂಜ , ಜಗದೀಶ್ ರೈ,ಪ್ರಸಾದ್,ಚರಿತ್ ಕುಮಾರ್,ಜಯರಾಮ ಆಚಾರ್ಯ, ಕಟ್ಟಡ ಮಾಲಕರಾದ ಪರಮೇಶ್ವರ್,ಶರತ್ ರೈ,ಮಾಧವ ಗೌಡ,ಚಿದಾನಂದ ಗೌಡ,ಮುಂತಾದವರು ಆಗಮಿಸಿ ಶುಭಹಾರೈಸಿದರು. ಸಲಹಾ ಸಮಿತಿ ಅಧ್ಯಕ್ಷರಾದ ಲೋಕೇಶ್ ಚಾಕೋಟೆ ಸ್ವಾಗತಿಸಿ, ಶಾಖ ಮೆನೇಜರ್ ಹರೀಶ್ ವಂದಿಸಿದರು, ಸಲಹಾ ಸಮಿತಿ ಸದಸ್ಯರಾದ ವಿಶ್ವನಾಥ ಗೌಡ ಬೋಳ್ಳಡಿ ಕಾರ್ಯಕ್ರಮ ನಿರ್ವಹಿಸಿದರು. ಸಿಬ್ಬಂದಿಗಳಾದ ಕಾವ್ಯ ಎ ಎಸ್,ದಿನೇಶ್ ಕುಮಾರ್ ಬಿ, ಪಿಗ್ಮಿ ಸಂಗ್ರಾಹಾಕರಾದ ಅನುರಾಜ್ ಪಿ,ಅಶ್ವಥ್ ಪಿ ಸಹಕರಿಸಿದರು.

LEAVE A REPLY

Please enter your comment!
Please enter your name here