ಉಪ್ಪಿನಂಗಡಿ:ಪೃಥ್ವಿ ಮಹಲ್‌ನಲ್ಲಿ ಬೆಂಕಿ ಅವಘಡ-7 ಅಂಗಡಿಗಳು ಭಸ್ಮ-ಕೋಟಿ ರೂ.ಗಳಿಗೂ ಅಧಿಕ ನಷ್ಟ

0

ಉಪ್ಪಿನಂಗಡಿ: ಜೂ.21ರಂದು ರಾತ್ರಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಇಲ್ಲಿನ ಪೃಥ್ವಿ ಮಹಲ್ ವಾಣಿಜ್ಯ ಮಳಿಗೆಯ ಒಂದು ಪಾರ್ಶ್ವದಲ್ಲಿದ್ದ ಅಂಗಡಿಗಳಿಗೆ ಬೆಂಕಿ ಬಿದ್ದಿದ್ದು,ಸುಮಾರು ಏಳರಷ್ಟು ಅಂಗಡಿಗಳು ಸುಟ್ಟು ಭಸ್ಮವಾಗಿದ್ದು ಅಪಾರ ನಷ್ಟ ಸಂಭವಿಸಿದೆ.

ವಾಣಿಜ್ಯ ಸಂಕೀರ್ಣದಲ್ಲಿರುವ ಅಯ್ಯಂಗಾರ್ ಬೇಕರಿ, ಶೂ ಬಜಾರ್, ಬ್ರೀಡಲ್ ಫ್ಯಾನ್ಸಿ ಸೇರಿದಂತೆ ಸುಮಾರು ಏಳರಷ್ಟು ಚಪ್ಪಲಿ, ಫ್ಯಾನ್ಸಿ, ಬಟ್ಟೆ ಅಂಗಡಿಗಳು ಸುಟ್ಟು ಕರಕಲಾಗಿವೆ.ಬೆಂಕಿಹೊತ್ತಿಕೊಂಡ ಕಟ್ಟಡದಲ್ಲಿಯೇ ಸ್ವಲ್ಪ ಅಂತರ ಬಿಟ್ಟು ಬ್ಯಾಂಕ್ ಆಫ್ ಬರೋಡಾ ಇದ್ದು, ಇದರೊಳಗೂ ಹೊಗೆ ವ್ಯಾಪಿಸಿದೆ.ಈಗಾಗಲೇ ಬೆಂಕಿಯಿಂದಾಗಿ ಲಕ್ಷಾಂತರ ರೂ.ವಸ್ತುಗಳು ಸುಟ್ಟು ಕರಕಲಾಗಿವೆ.

ಅಗ್ನಿ ಶಾಮಕದಳಗಳು ಹಾಗೂ ಸ್ಥಳೀಯರು ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.ಘಟನಾ ಸ್ಥಳದಲ್ಲಿ ಸಾವಿರಾರು ಸಾರ್ವಜನಿಕರೂ ನೆರೆದಿದ್ದಾರೆ.ಈ ವಾಣಿಜ್ಯ ಮಳಿಗೆಯಲ್ಲಿ ಹಲವು ಅಂಗಡಿ ಮಳಿಗೆಗಳು, ಕಚೇರಿಗಳಿದ್ದು, ಬೆಂಕಿ ನಿಯಂತ್ರಣಕ್ಕೆ ಬರದೇ ಇದ್ದಲ್ಲಿ ಕೋಟ್ಯಾಂತರ ರೂ.ನಷ್ಟವಾಗುವ ಸಂಭವವಿದೆ.ರಾತ್ರಿಯೂ ಅಗ್ನಿ ಶಾಮಕ ದಳದವರು ಮತ್ತು ಸಾರ್ವಜನಿಕರು ಬೆಂಕಿ ನಂದಿಸುವ ಕಾರ್ಯದಲ್ಲಿ ಅಹರ್ನಿಶಿ ಶ್ರಮಿಸುತ್ತಿದ್ದಾರೆ.ಪೊಲೀಸರೂ ಆಗಮಿಸಿದ್ದಾರೆ.

ಅಂಗಡಿ, ಮಳಿಗೆಗಳನ್ನು ಬಂದ್ ಮಾಡಿ ಮಾಲಕರು,ಸಿಬ್ಬಂದಿಗಳು ಮನೆಗೆ ಹೋಗಿದ್ದ ವೇಳೆ ಈ ಅವಘಡ ಸಂಭವಿಸಿರುವುದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ಹತ್ತಿಕೊಂಡಿರಬಹುದೆಂದು ಹೇಳಲಾಗುತ್ತಿದೆಯಾದರೂ ಈ ಕುರಿತು ಸ್ಪಷ್ಟ ಮಾಹಿತಿ ಇನ್ನಷ್ಟೆ ಲಭಿಸಬೇಕಿದೆ.

ಕೋಟ್ಯಾಂತರ ರೂ.ನಷ್ಟ ಸಾಧ್ಯತೆ:
ಸುಮಾರು ಏಳು ಅಂಗಡಿಗಳು ಅದರೊಳಗಿದ್ದ ಸೊತ್ತುಗಳ ಸಮೇತ ಸಂಪೂರ್ಣ ಸುಟ್ಟು ಹೋಗಿರುವುದರಿಂದ ಕೋಟಿ ರೂ.ಗಳ ನಷ್ಟ ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ.

LEAVE A REPLY

Please enter your comment!
Please enter your name here