ಮಂಗಳೂರಿನ ಶಕ್ತಿನಗರ ಶಕ್ತಿ ವಸತಿ ಶಾಲೆಯಲ್ಲಿ ವಿಶ್ವಯೋಗ ದಿನ

0

ವಿಟ್ಲ: ಮಂಗಳೂರಿನ ಶಕ್ತಿನಗರ ಶಕ್ತಿ ವಸತಿ ಶಾಲೆಯ ಮೆಮೋರಿಯಲ್ ಸಭಾಂಗಣದಲ್ಲಿ ಶಕ್ತಿ ವಿದ್ಯಾ ಸಂಸ್ಥೆ ಮತ್ತು ಕ್ರೀಡಾ ಭಾರತಿ ಮಂಗಳೂರು ಇವರ ಸಹಯೋಗದಲ್ಲಿ ವಿಶ್ವಯೋಗ ದಿನಾಚರಣೆಯನ್ನು ಆಚರಿಸಲಾಯಿತು.

ಮಂಗಳೂರಿನ ಇಂದಿರಾ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸ್ ನ ಸಹಾಯಕ ಪ್ರಾದ್ಯಾಪಕಿ ಡಾ| ಐಶ್ವರ್ಯ ಶೆಟ್ಟಿ ರವರು ಮಾತನಾಡಿ ಮಾನವನಲ್ಲಿ ಯೋಗವು ಸ್ಮರಣ ಶಕ್ತಿಯನ್ನು ವೃದ್ಧಿಸುತ್ತದೆ ಮತ್ತು ನಮ್ಮ ಆಲೋಚನೆಗಳನ್ನು ಹಿಡಿತದಲ್ಲಿಟ್ಟುಕೊಳ್ಳಲು ಈ ಯೋಗ ಬಹಳ ಪ್ರಯೋಜನಕಾರಿಯಾಗಿದೆ. ಇಂದು ಇಡೀ ವಿಶ್ವವೇ ಯೋಗವನ್ನು ತನ್ನದಾಗಿಸಿಕೊಂಡು ಅಭ್ಯಾಸ ಮಾಡುತ್ತಿದೆ. ನಾವು ನಮ್ಮ ದಿನನಿತ್ಯದ ಬದುಕಿನಲ್ಲಿ ಈ ಯೋಗಾಸನಗಳನ್ನು ಮಾಡುತ್ತಾ ನಾವೆಲ್ಲರೂ ಆರೋಗ್ಯವನ್ನು ಕಾಪಾಡಿಕೊಳ್ಳೋಣ ಎಂದು ಹೇಳುತ್ತಾ ವಿದ್ಯಾರ್ಥಿಗಳಿಂದ ವಿವಿಧ ಪ್ರಾಣಯಾಮಗಳನ್ನು ಅಭ್ಯಾಸ ಮಾಡಿಸುವ ಮೂಲಕ ಯೋಗಾಸನಗಳನ್ನು ಮಾಡುವ ಉದ್ದೇಶವನ್ನು ತಿಳಿಸಿದರು.


ಶಕ್ತಿ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲರಾದ ವೆಂಕಟೇಶ್ ಮೂರ್ತಿ ಹೆಚ್‌ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಮನುಷ್ಯನು ನಾಗರೀಕತೆಯನ್ನು ಕಲಿಯುತ್ತಾ ಹೋದ ಹಾಗೆ ಈ ಯೋಗಾಸನವನ್ನು ರೂಢಿಸಿಕೊಳ್ಳುತ್ತಾ ಬಂದಿದ್ದಾನೆ. ಪತಂಜಲಿ ಯೋಗವು ಮಾನಸಿಕ ಆರೋಗ್ಯದ ಸ್ಥಿರತೆಯನ್ನು ವೃದ್ಧಿಸುತ್ತದೆ. ಮಕ್ಕಳ ಮನಸ್ಸು ಪಠ್ಯಗಳಲ್ಲಿರಬೇಕಾದರೆ ಯೋಗಾಸನ ಬಹಳ ಮುಖ್ಯ. ಉತ್ತಮಆರೋಗ್ಯಕ್ಕಾಗಿ ನಾವೆಲ್ಲರೂಯೋಗಾಸನವನ್ನುಅಭ್ಯಾಸ ಮಾಡಬೇಕು. ಇಂದುಇಡೀ ವಿಶ್ವವೇ ಈ ಯೋಗ ದಿನವನ್ನುಆಚರಿಸುತ್ತಿದೆ. ಮಕ್ಕಳಿಗೆ ಇದು ಕಲಿಯುವ ಸಮಯ ಆದ್ದರಿಂದ ಪತಂಜಲಿ ಯೋಗವು ತಿಳಿಸಿದ ವಿವಿಧ ಯೋಗಾಸನಗಳನ್ನು ದಿನ ನಿತ್ಯಕಲಿಯುತ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ತಿಳಿಸಿದರು.


ನಂತರ ಕ್ರೀಡಾಭಾರತಿ ಮಂಗಳೂರು ಇದರ ಪದಾಧಿಕಾರಿಗಳಾದ ಸುಭದ್ರಾ ಮತ್ತು ವೀಣಾಅವರಿಂದ ಮಕ್ಕಳಿಗೆ ಸಾಮೂಹಿಕವಾಗಿ ಯೋಗತರಬೇತಿ ನಡೆಯಿತು.
ವೇದಿಕೆಯಲ್ಲಿ ಕ್ರೀಡಾಭಾರತಿ ಮಂಗಳೂರು ಇದರ ಕಾರ್ಯದರ್ಶಿಗಳಾದ ಕೃಷ್ಣ ಶೆಟ್ಟಿ ತಾರೆಮಾರ್, ಯೋಗ ತರಬೇತುದಾರರಾದ ಸುಭದ್ರಾ ಮೊದಲಾದವರು ಉಪಸ್ಥಿತರಿದ್ದರು.
ಕ್ರೀಡಾ ಭಾರತಿ ಮಂಗಳೂರು ಇದರ ಅಧ್ಯಕ್ಷರಾದ ಕರಿಯಪ್ಪ ರೈರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಕ್ತಿ ವಿದ್ಯಾ ಸಂಸ್ಥೆಯ ಪ್ರಧಾನ ಸಲಹೆಗಾರರಾದ ರಮೇಶ್ ಕೆ.
ಸ್ವಾಗತಿಸಿದರು. ಶಕ್ತಿ ವಸತಿ ಶಾಲಾ ಪ್ರಾಂಶುಪಾಲೆ ಬಬಿತಾ ಸೂರಜ್ ವಂದಿಸಿದರು. ಕನ್ನಡ ಅಧ್ಯಾಪಕರಾದ ಶರಣಪ್ಪರವರು ಕಾರ್ಯಕ್ರಮದ ನಿರೂಪಿಸಿದರು.

LEAVE A REPLY

Please enter your comment!
Please enter your name here