





ಪುತ್ತೂರು: ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನಮ್ ಶ್ರೀ ಸಂಸ್ಥಾನ ಗೋಕರ್ಣ ಶ್ರೀರಾಮಚಂದ್ರಪುರ ಮಠ ಸ್ವರ್ಣ ಪಾದುಕಾ ಸವಾರಿ ಹಿನ್ನಲೆ ಸ್ವರ್ಣ ಪಾದುಕೆ ಆಗಮನ ಪೂರ್ಣಕುಂಭ ಸ್ವಾಗತ ಹಾಗೂ ಧೂಳಿ ಪೂಜೆ ಕಾರ್ಯಕ್ರಮ ನ.1ರಂದು ಶಿವಶಂಕರ ಭಟ್ ಬೋನಂತಾಯ ಹಾಗೂ ಮನೆಯವರ ನೇತೃತ್ವದಲ್ಲಿ ಪರ್ಲಡ್ಕ ಪಾಂಗಳಾಯಿ ಶೃಂಗಾರದಲ್ಲಿ ನಡೆಯಲಿದೆ.


ಗೋ ಪೂಜೆ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮ ಭಗವದ್ಗೀತೆ ಪಠಣ ಕ್ಷಿಪ್ರಾ ಗಾಯತ್ರಿ ಬೋನಂತಾಯ ಹಾಗೂ ಕ್ಷಿತೀಶ ಶಂಕರ ಬೋನಂತಾಯ ಹಾಗೂ ಕ್ಷಿಪ್ರಾ ಗಾಯತ್ರಿ ಬೋನಂತಾಯ ಅವರಿಂದ ಕ್ರೇಡ್ ಆರ್ಟ್ ಪ್ರದರ್ಶನ ನಡೆಯಲಿದೆ.





ಶಾಸ್ತ್ರೀಯ ಸಂಗೀತ ಕಚೇರಿ ನಡೆಯಲಿದೆ. ಹಿಮ್ಮೇಳದಲ್ಲಿ ಬಾಲಕೃಷ್ಣ ಹೊಸಮನೆ, ಮೃದಂಗದಲ್ಲಿ ತನ್ಮಯಿ ಉಪ್ಪಂಗಳ, ವೈಯಲಿನ್, ಗರಿಮಾ ಬೋನಂತಾಯ ಹಾಗೂ ಅಣಿಮಾ ಬೋನಂತಾಯ ಹಾಡುಗಾರಿಕೆಯಲ್ಲಿ ಶಾಸ್ತ್ರೀಯ ಸಂಗೀತ ಕಚೇರಿ ಮೂಡಿಬರಲಿದೆ.


 
            
