ಪೆರಾಬೆ ಶಾಲಾ ಮಂತ್ರಿಮಂಡಲ ರಚನೆ

0

ಪೆರಾಬೆ: ಪೆರಾಬೆ ಸರಕಾರಿ ಹಿ.ಪ್ರಾ.ಶಾಲೆಯ 2024-25ನೇ ಸಾಲಿನ ಮಂತ್ರಿಮಂಡಲ ರಚನೆಯು ಚುನಾವಣೆ ಮೂಲಕ ನಡೆಯಿತು.


ಶಾಲಾ ಮುಖ್ಯಮಂತ್ರಿಯಾಗಿ 7ನೇ ತರಗತಿಯ ವಿವೇಕ್, ಉಪಮುಖ್ಯಮಂತ್ರಿಯಾಗಿ 6ನೇ ತರಗತಿಯ ಲಿಖಿತಾ ಹಾಗೂ ವಿರೋಧ ಪಕ್ಷದ ನಾಯಕಿಯಾಗಿ 7ನೇ ತರಗತಿಯ ಫಾತಿಮತ್ತುಲ್ ಫಝೀನಾ ಆಯ್ಕೆಯಾದರು. ಚುನಾವಣಾ ಪ್ರಕ್ರಿಯೆಗೆ ಶಾಲಾ ಮುಖ್ಯಶಿಕ್ಷಕಿ ಸುಚೇತಾ ಕುಮಾರಿ ಬಿ., ಸಹಶಿಕ್ಷಕರಾದ ಜಯಪ್ರಕಾಶ್, ಹೇಮಲತಾ, ರಾಘವೇಂದ್ರ ಪ್ರಸಾದ್, ಸುಶ್ಮಿತಾ ಹಾಗೂ ಗೌರವ ಶಿಕ್ಷಕಿ ಸವಿತಾ ಸಹಕರಿಸಿದರು.

LEAVE A REPLY

Please enter your comment!
Please enter your name here