ಕಾಮಜಲು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ

0

ಪುತ್ತೂರು: ಬಂಟ್ವಾಳ ತಾಲೂಕಿನ ಮಾಣಿಲ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಮಜಲು ಇಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಕುಮಾರಿ ದೀಕ್ಷ ಇವರು ಸರಳ ವ್ಯಾಯಾಮದ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಉದ್ಘಾಟನಾ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಾಣಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಧರ್ ಬಾಳೆಕಲ್ಲು ಇವರು ಮಾತನಾಡುತ್ತಾ “ಯೋಗ ಎಂಬುದು ಒಂದು ದಿನಕ್ಕೆ ಮಾತ್ರ ಸೀಮಿತವಾಗಿರದೆ ಪ್ರತಿನಿತ್ಯ ನಾವು ನಮ್ಮ ಜೀವನದಲ್ಲಿ ರೂಡಿಸಿಕೊಂಡಾಗ ನಾವು ಉತ್ತಮ ಆರೋಗ್ಯದಲ್ಲಿರಲು ಸಾಧ್ಯ ಎಂದು ಹೇಳಿದರು .

ಸಂಪನ್ಮೂಲ ವ್ಯಕ್ತಿಯೋಗಪಟು ಗಣೇಶ್ ಬೊಂಡಾಲ ಇವರು ಸರಳ ಪ್ರಾಣಾಯಾಮಗಳನ್ನು ಹೇಳಿಕೊಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಶಾಲಾ ಕೊಡುಗೆ ದಾನಿಯಾಗಿರುವ ರಘುನಾಥ ನಾಯಕ ಕಕ್ವೆ , ಎಂಕೆ ಕುಕ್ಕಾಜೆ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾದ ಸುಂದರ ಕುಲಾಲ್ ಪಿ ಹಾಗೂ ಎಸ್ ಡಿ ಎಂ ಸಿ ಎಸ್ ಸದಸ್ಯರು ಹಾಗೂ ಪೋಷಕರು ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿ ದೀಕ್ಷಾ ಇವರು ವಿವಿಧ ರೀತಿಯ ಯೋಗಾಸನಗಳನ್ನು ಹಾಗೂ ಪ್ರಾಣಾಯಾಮಗಳನ್ನು ಮಾಡಿಸಿದರು. ತದನಂತರ ಶಾಲಾ ವಿದ್ಯಾರ್ಥಿಗಳಿಂದ ಯೋಗ ನೃತ್ಯ ನಡೆಯಿತು. ಶಾಲಾ ಶಿಕ್ಷಕಿ ಕುಮಾರಿ ಸುಶ್ಮಿತಾ ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಕಿ ಸರಿತಾ ನಾಯ್ಕ ಇವರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ಶಾಲಾ ಪ್ರಭಾರ ಮುಖ್ಯಗುರು ಸುಧಾ ಕೆ ಸರ್ವರನ್ನು ಸ್ವಾಗತಿಸಿದರು. ಅತಿಥಿ ಶಿಕ್ಷಕಿ ಮಾಲತಿ ವಂದಿಸಿದರು. ಶಿಕ್ಷಕರುಗಳಾದ ಚೈತ್ರ ಕೆ ಹಾಗೂ ಮಾಲತಿ ಕೆ ಸಹಕರಿಸಿದರು.

LEAVE A REPLY

Please enter your comment!
Please enter your name here