ಜು.9-7: ಪರ್ಪುಂಜ ರಾಮಜಾಲುವಿನಲ್ಲಿ ಸರ್ಪ ಸಂಸ್ಕಾರ, ಆಶ್ಲೇಷಾ ಪೂಜೆ,ಅಘೋರ ಹೋಮ – ಆಮಂತ್ರಣ ಪತ್ರಿಕೆ ಬಿಡುಗಡೆ 

0

ಪುತ್ತೂರು : ಒಳಮೊಗ್ರು ಗ್ರಾಮದ ಪರ್ಪುಂಜ ರಾಮಜಾಲು ರಕೇಶ್ವರಿ ಹಾಗೂ ಪರಿವಾರ ದೈವಗಳ ಸಾನಿಧ್ಯ ದಲ್ಲಿ ಹಿರಿಯರ ಅನುಭವದ ಮೇರೆಗೆ ಕೋಟಿ ಚೆನ್ನಯ ಗರಡಿಯ ಹಿಂಭಾಗದಲ್ಲಿ ದೈವಗಳ ಸಾನಿಧ್ಯ ಹಾಗೂ ನಾಗಬನವಿದೆಯೆಂದು ತಿಳಿದು ಬಂದಿರುತ್ತದೆ. ಆ ಪ್ರಕಾರ ಜ್ಯೋತಿಷ್ಯರಾದ ಪಂಜ ಸತ್ಯನಾರಾಯಣ ಭಟ್ ಅವರ ನೇತೃತ್ವದಲ್ಲಿ ಜೂ. 07 ರಂದು ತಾಂಬೂಲ ಪ್ರಶ್ನಾ ಚಿಂತನೆ ನಡೆಸಿದಾಗ ಸ್ಥಳದ ವನ ಸಾನಿಧ್ಯ ಸಂಕಲ್ಪದ ಹುತ್ತವಿರುವಲ್ಲಿ ಅತೀ ಪುರಾತನ ನಾಗ ಸಾನಿಧ್ಯವಿದ್ದು ಅದರ ಒಂದಂತವನ್ನು ಈಗಾಗಲೇ ರಾಮಜಾಲು ಕೋಟಿ ಚೆನ್ನಯ ಗರಡಿಯ ಭಾಗದಲ್ಲಿ ಪ್ರತಿಷ್ಠೆ ನಡೆಸಿಕೊಂಡಿದ್ದರೂ ಪೂರ್ಣತೆ ಇಲ್ಲದಿರುವುದರಿಂದ ಮೂರು ಹೆಡೆಯ ಒಂದು ಕೃಷ್ಣಶಿಲಾ ನಾಗಬಿಂಬವನ್ನು ತಂದು ಜಲಾಧಿವಾಸ ಕ್ರಿಯಾ ಪೂರ್ವಕ ಹುತ್ತದ ಭಾಗದಿಂದ ನಾಗಾರಾಜ ಸಂಕಲ್ಪ ಚೈತನ್ಯವನ್ನು ಉದ್ವಾಸನೆ ಮಾಡಿ ನೂತನ ಮೂರು ಹಡೆಯ ಬಿಂಬಕ್ಕೆ ಸೇರಿಸಿ ರಾಮಚಾಲು ಕೋಟಿ ಚೆನ್ನಯ ಗರಡಿಯ ಪಕ್ಕವಿರುವ ನಾಗನ ಕಟ್ಟೆಯಲ್ಲಿರುವ ಒಂದು ಹೆಡೆಯ ಬಿಂಬದೊಂದಿಗೆ ಪ್ರತಿಷ್ಠಾಪಿಸಿಕೊಳ್ಳಬೇಕು. ಈ ನಾಗ ಸಾನಿಧ್ಯ ನಾಗರಾಜ ನಾಗಕನ್ನಿಕಾ ಸಂಕಲ್ಪದಲ್ಲಿ ಆರಾಧನೆ ಮಾಡಬೇಕಾಗಿ ತಿಳಿದುಬಂದಿರುತ್ತದೆ.

ವನ ಸಂಕಲ್ಪದ ಸ್ಥಳದಲ್ಲಿ ಅತೀ ಪುರಾತನದಲ್ಲಿ ವೃಕ್ಷದಡಿ ಕಲ್ಲು ಹಾಕಿ ಆರಾಧಿಸಿ ಬಂದಿರುವ ರಕ್ತಶ್ವರಿ, ಕುಪ್ಪೆಪಂಜುರ್ಲಿ, ಗುಳಿಗೆ ಹಾಗೂ ಭೈರವ ಶಕ್ತಿಗಳು ಆರಾಧನೆಯಿಲ್ಲದೆ ಅದೃಶ್ಯವಾಗಿ ಊರಿಗೇ ಭಾದಕ ಸ್ವರೂಪದಲ್ಲಿರುವುದರಿಂ ದ ನಿವೃತ್ಯರ್ಥ ಅನುಜ್ಞಾಕಲಶ ನಡೆಸಿ ಬಾಲಾಲಯ ಮಾಡಿಕೊಳ್ಳಬೇಕು. ಆದ್ದರಿಂದ ನಿಶ್ಚಿತ ಶಿಲ್ಪಿಯನ್ನು ಸ್ಥಳಕ್ಕೆ ಕರೆಸಿಕೊಂಡು ರಕೇಶ್ವರಿ, ಕುಪ್ಪೆಪಂಜುರ್ಲಿ, ಗುಳಿಗ ಹಾಗೂ ಭೈರವ ದೈವಗಳಿಗೆ ಶಿಲ್ಪಶಾಸ್ತ್ರ ರೀತ್ಯಾ ಕಟ್ಟೆ ನಿರ್ಮಿಸಿ ಸುತ್ತು ಪರಿಧಿ ಹಾಕಬೇಕಾಗಿದೆ. ಈ ಎಲ್ಲಾ ಕೆಲಸ ಪೂರ್ತಿಕರಿಸಿಕೊಂಡ ನಂತರ ಶುಭಮುಹೂರ್ತದಲ್ಲಿ ಪ್ರತಿಷ್ಠಾ ಕಾರ್ಯ ನಡೆಸಿಕೊಳ್ಳಬೇಕಾಗಿದೆ ಎಂದು ತಿಳಿದು ಬಂದಿದೆ. ಈ ಎಲ್ಲಾ ಕಾರ್ಯಗಳು ಒಂದು ವರ್ಷದೊಳಗೆ ಮುಗಿಯಬೇಕಾಗಿದೆ. ಎಲ್ಲಾ ಕಾರ್ಯಗಳಿಗೆ ಸುಮಾರು 6 ಲಕ್ಷ ರೂಪಾಯಿ ಖರ್ಚು ಆಗಲಿದೆ ಎಂದು ಅಂದಾಜಿಸಲಾಗಿದೆ. ಅದರಂತೆ ಪ್ರಥಮ ಅಂಗವಾಗಿ ಜು.9ರಂದು ಬೆಳಿಗ್ಗೆ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ಸರ್ಪ ಸಂಸ್ಕಾರ ಆರಂಭಗೊಳ್ಳಲಿದೆ. ಜು.12 ರಂದು ಸರ್ಪ ಸಂಸ್ಕಾರ ಮಂಗಳ ಆಗಲಿದ್ದು ಬಳಿಕ ಆಶ್ಲೇಷಾ ಪೂಜೆ ನಡೆದು ರಾಮಜಾಲು ಗರಡಿಯಲ್ಲಿ ನಾಗ ಪ್ರತಿಷ್ಠೆ ನಡೆಯಲಿದೆ. ರಾತ್ರಿ ಅಘೋರ ಹೋಮ, ದುರ್ಗಾ ಪೂಜೆ ನಡೆಯಲಿದೆ. ಕಾರ್ಯಕ್ರಮದ ವಿಜ್ಞಾಪನಾ ಪತ್ರವನ್ನು ರಾಮಜಾಲು ಗರಡಿಯ ಆಡಳಿತ ಮೊಕ್ತೇಸರ ಕೆ ಸಂಜೀವ ಪೂಜಾರಿ ಕೂರೇಲು ಹಾಗೂ ಆಮಂತ್ರಣ ಪತ್ರಿಕೆಯನ್ನು ಪ್ರಗತಿಪರ ಕೃಷಿಕ ಬಾರಿಕೆ ನಾರಾಯಣ ರೈಯವರು ಜೂ.23 ರಂದು ರಾಮಜಾಲು ಕ್ಷೇತ್ರದಲ್ಲಿ ಬಿಡುಗಡೆಗೊಳಿಸಿದರು. 

ಈ ಸಂದರ್ಭದಲ್ಲಿ  ಪ್ರೇಮ್ ರಾಜ್ ರೈ ಪರ್ಪುಂಜ , ಮಿತ್ರದಾಸ ರೈ ಡೆಕ್ಕಲ ರಾಜೇಶ್ ರೈ ಪರ್ಪುಂಜ ,ರಾಧಾಕೃಷ್ಣ ಗೌಡ ಪರ್ಪುಂಜ ,ಕಾಂತಪ್ಪ ಪೂಜಾರಿ ಪರ್ಪುಂಜ , ಸೀನಪ್ಪ ನಾಯ್ಕ್ ಗುರಿಗುಮೇರ್ , ದಿನೇಶ್ ಗೌಡ ಪರ್ಪುಂಜ, ಜೀವನ್ ಅಮೀನ್ , ಜಗದೀಶ್ ಗೌಡ ಶೇಡಿಗುಂಡಿ, ನಿತಿನ್ ಗೌಡ , ಸುರೇಶ್ ಪೂಜಾರಿ, ಹರೀಶ್ ಆಚಾರ್ಯ, ನಾಗೇಶ್ ಗೌಡ , ರಾಕೇಶ್ ರೈ , ಪ್ರಜ್ವಲ್ ಶಿಬರಿಗುರಿ, ವಿಪಿನ್ ಶೆಟ್ಟಿ,  ಧನುಷ್ ರೈ ಪರ್ಪುಂಜ, ಸುಂದರಿ , ಪ್ರಮೀಳಾ , ಶ್ರೀಮತಿ, ಸಾವಿತ್ರಿ, ರೇಖಾ ರೈ , ಗಿರೀಶ್ ಗೌಡ , ಕಿಶನ್ ಗೌಡ, ಶರತ್ ಪೂಜಾರಿ, ವಸಂತ ಆಚಾರ್ಯ , ವಿಜೇತ್ , ಉಮೇಶ್ ಗೌಡ , ತಿರುಮಲೇಶ್ ಗೌಡ, ಅರುಣ್ ಕೂರೆಲು ಸಹಿತ ಹಲವು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here