ನೆಲ್ಯಾಡಿ: ಕೊಕ್ಕಡ ಗ್ರಾಮದ ಕುಡಾಲ ಮತ್ತು ಉಪ್ಪಾರು ಬೈಲಿನಲ್ಲಿ ಆನೆ ಸಂಚರಿಸಿರುವ ಕುರುಹುಗಳು ಜೂ.23ರಂದು ಬೆಳಿಗ್ಗೆ ಪತ್ತೆಯಾಗಿವೆ.
ಕುಡಾಲ, ಉಪ್ಪಾರು, ಪುದ್ಯಂಗ, ಪುಂಚೆತ್ತಿಮಾರು, ಉಪ್ಪಾರುಗುತ್ತು, ಜಾರಿಗೆತ್ತಡಿ ನಿವಾಸಿಗಳ ತೋಟಗಳಲ್ಲಿ ಆನೆ ಸಂಚರಿಸಿದ ಹೆಜ್ಜೆಗಳು ಪತ್ತೆಯಾಗಿದ್ದು ಯಾವುದೇ ರೀತಿ ಕೃಷಿ ನಾಶವಾಗಿಲ್ಲ. ಜೂ.22ರಂದು ರಾತ್ರಿ ಜಾರಿಗೆತ್ತಡಿ ಭಾಗದಿಂದ ಆನೆಯು ತಿಪ್ಪಮಜಲು ಕಡೆಗೆ ಸಾಗಿರುವ ಹೆಜ್ಜೆ ಗುರುತು ಕಂಡುಬಂದಿದ್ದು ನೆಲ್ಯಾಡಿ ಕಡೆಗೆ ಸಾಗಿರಬಹುದು ಎಂದು ಹೇಳಲಾಗಿದೆ. ಆನೆಯೂ ತೋಟಗಳ ಮಧ್ಯೆ ಸಂಚರಿಸಿದರೂ ಯಾವುದೇ ರೀತಿಯ ಕೃಷಿಯನ್ನು ನಾಶ ಮಾಡಿಲ್ಲ. ಇದೊಂದು ಬೃಹತ್ ಆನೆಯಾಗಿರಬಹುದು ಎಂದು ಹೆಜ್ಜೆಯಿಂದ ತಿಳಿದುಬಂದಿದೆ. ಆನೆ ಈ ಭಾಗದಲ್ಲಿ ಇದೇ ಮೊದಲ ಬಾರಿ ಕಾಣಿಸಿಕೊಂಡಿದ್ದು ಪರಿಸರದ ಜನತೆ ಆತಂಕದಲ್ಲಿದ್ದಾರೆ. ಜನರು ಭಾನುವಾರ ಬೆಳಗ್ಗಿನಿಂದಲೂ ಒಬ್ಬರಿಗೊಬ್ಬರು ದೂರವಾಣಿ ಕರೆ ಮಾಡಿ ನಿಕ್ಲೆನ ಅಂಚಿ ದೇವೆರ್ (ಆನೆ ) ಬತ್ತೆರ ಎಂದು ಕೇಳುತ್ತಿದ್ದದ್ದು ಸಾಮಾನ್ಯವಾಗಿತ್ತು.