ನೂಜಿಬಾಳ್ತಿಲ ಬೆಥನಿ ಪಿಯು ಕಾಲೇಜಿನಲ್ಲಿ ಶಾಲಾ ಸಂಸತ್ತು ಚುನಾವಣೆ

0

ಕಡಬ: ನೂಜಿಬಾಳ್ತಿಲ ಬೆಥನಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಶಾಲಾ ಸಂಸತ್ತು ಚುನಾವಣೆಯು ಜೂ.22ರಂದು ನಡೆಯಿತು.
ಪ್ರಜಾಪ್ರಭುತ್ವದಲ್ಲಿ ಚುನಾವಣೆ ಅತ್ಯುನ್ನತ ಸ್ಥಾನವನ್ನು ಪಡೆದುಕೊಂಡಿದೆ ಎಂಬುದನ್ನು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ವಿದ್ಯಾಸಂಸ್ಥೆಯಲ್ಲಿ ಮತ ಪತ್ರವನ್ನು ಉಪಯೋಗಿಸಿಕೊಂಡು ಚುನಾವಣೆ ನಡೆಸಲಾಯಿತು. ಈ ಚುನಾವಣೆಯಲ್ಲಿ ಶಾಲಾ ನಾಯಕ, ಶಾಲಾ ಉಪನಾಯಕ, ವಿದ್ಯಾರ್ಥಿನಿ ಪ್ರತಿನಿಧಿ, ಸಹ ಪ್ರತಿನಿಧಿ ಎಂಬ ಹುದ್ದೆಗಳಿಗೆ ಗುಪ್ತ ಮತದಾನವನ್ನು ನಡೆಸಲಾಯಿತು. ಶಾಲಾ ವಿದ್ಯಾರ್ಥಿ ನಾಯಕನಾಗಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ನಿತೇಶ್ ಕುಮಾರ್, ಉಪನಾಯಕನಾಗಿ ಹತ್ತನೆ ತರಗತಿಯ ಉಜ್ವಲ್ ಪಿ, ವಿದ್ಯಾರ್ಥಿನಿ ಪ್ರತಿನಿಧಿಯಾಗಿ ದ್ವಿತೀಯ ಪಿಯುಸಿ ಕಲಾ ವಿಭಾಗದ ಸ್ವಾತಿ, ಸಹ ಪ್ರತಿನಿಧಿಯಾಗಿ ಹತ್ತನೆ ತರಗತಿಯ ಚೈತ್ರರವರುಗಳು ಆಯ್ಕೆಯಾಗಿದ್ದಾರೆ.

ಸಂಸ್ಥೆಯ ನಿರ್ದೇಶಕರಾದ ಫಾದರ್ ವಿಜೋಯ್ ವರ್ಗೀಸ್ ಇವರ ನಿರ್ದೇಶನದಂತೆ ಸಂಸ್ಥೆಯ ಪ್ರಾಂಶುಪಾಲರಾದ ಜಾರ್ಜ್ ಟಿ ಎಸ್ ಹಾಗು ಮುಖ್ಯ ಗುರುಗಳಾದ ಥಾಮಸ್ ಎ.ಕೆ. ಇವರ ಉಸ್ತುವಾರಿಯಲ್ಲಿ ಮುಖ್ಯ ಚುನಾವಣಾ ಅಧಿಕಾರಿಗಳಾಗಿ ಶ್ರೀಮತಿ ಜಿನ್ಸಿ ಜೋಸೆಫ್, ಬಿಜು ಕೆ.ಜೆ.ಹಾಗು ಶ್ರೀಮತಿ ಶಿಲ್ಪಾ ಎ ಇವರು ಚುನಾವಣೆಯನ್ನು ವ್ಯವಸ್ಥಿತವಾಗಿ ಹಾಗು ನಡೆಸಿಕೊಟ್ಟರು. ವಿದ್ಯಾರ್ಥಿಗಳಾದ ವೀಕ್ಷಾ, ಆತ್ಮಿಕ, ಬಾಲಕೃಷ್ಣ, ಪ್ರಜ್ವಲ್‌ರವರು ಹಾಗೂ ಉಪನ್ಯಾಸಕ ವೃಂದ, ಶಿಕ್ಷಕ ವೃಂದ, ಶಿಕ್ಷಕೇತರರು, ಚುನಾವಣೆಯಲ್ಲಿ ಸಹಕರಿಸಿದರು

LEAVE A REPLY

Please enter your comment!
Please enter your name here