ಟೀಸರ್‌ ಮೂಲಕ ಸದ್ದು ಮಾಡುತ್ತಿದೆ ‘ಸಾಂಕೇತ್’ ಸಿನಿಮಾ – ಜೂ.29 ರಂದು ಟ್ರೇಲರ್ ಬಿಡುಗಡೆ

0

ಮಂಗಳೂರು: ಸದ್ಯ ಪೋಸ್ಟರ್, ಟೀಸರ್ ಮೂಲಕ ಭಾರಿ ಹೈಪ್ ಕ್ರಿಯೆಟ್ ಮಾಡಿರುವ ಸಿನಿಮಾ ‘ಸಾಂಕೇತ್’. ಇದೊಂದು ಸಸ್ಪೆನ್ಸ್, ಥ್ರಿಲ್ಲರ್ ಕಥೆಯನ್ನೊಳಗೊಂಡ ವಿನೂತನ ಚಿತ್ರ ಅನ್ನೋದು ಟೀಸರ್ ಮೂಲಕ ಖಚಿತವಾಗಿದೆ. ಟೀಸರ್ ಚಿತ್ರದ ಭಾರಿ ನಿರೀಕ್ಷೆ ಹುಟ್ಟು ಹಾಕಿದೆ.

ಚಿತ್ರ ತಂಡ: ಚಿತ್ರದ ನಿರ್ದೇಶನವನ್ನು ಜ್ಯೋತ್ಸ್ನಾ ಕೆ. ರಾಜ್ ಮಾಡಿದ್ದು, ಜೊತೆಗೆ ಸೌಂಡ್ ಡಿಸೈನಿಂಗ್, ಎಡಿಟಿಂಗ್ ಹೊಣೆಯನ್ನೂ ಹೊತ್ತಿದ್ದಾರೆ. ಸ್ಕ್ರೀನ್ ಪ್ಲೇ, ಸಿನಿಮಾಟೋಗ್ರಾಫಿ, ಬಿಜಿಎಂ ಆ್ಯಂಡ್ ವಿಎಫ್ ಎಕ್ಸ್ ರಾಜ್ ಕಾರ್ತಿಕ್ ಮಾಡಿದ್ದಾರೆ. ಸಹಾಯಕ ನಿರ್ದೇಶಕನಾಗಿ, ಛಾಯಾಗ್ರಾಹಕನಾಗಿ ಸನತ್ ಕುಮಾರ್ ಕೆಲಸ ಮಾಡಿದ್ದಾರೆ. ಪ್ರಕಾಶ್ ರಾವ್ ಸಾಹಿತ್ಯ ಚಿತ್ರಕ್ಕಿದೆ. ಪ್ರೊಡಕ್ಸನ್ ಮ್ಯಾನೇಜರ್ ಆಗಿ ನಿಶಾನ್ ತೆಲ್ಲಿಸ್ ಕಾರ್ಯ ನಿರ್ವಹಿಸಿದ್ದಾರೆ.

ಪಾತ್ರವರ್ಗ: ತುಳನಾಡ ಪ್ರತಿಭೆ ಚೈತ್ರ ಶೆಟ್ಟಿ, ವಿಕ್ಕಿ ರಾವ್, ಮೋಹನ್ ಶೆಣಿ, ರೂಪಶ್ರೀ ವರ್ಕಾಡಿ, ರಾಹುಲ್ ಅಮೀನ್, ನಿರೀಕ್ಷಾ ಶೆಟ್ಟಿ, ಸದಾಶಿವ ಅಮೀನ್, ನಿರೀಕ್ಷಾ ರಾಣಿ, ರಜೀತ್ ಕದ್ರಿ, ಮೇಘನಾ ರಕ್ಷಿತಾ ಮೊದಲಾವರು ಚಿತ್ರದಲ್ಲಿ ಪಾತ್ರವಾಗಿದ್ದಾರೆ. ಇನ್ನು ಚಿತ್ರದ ಟ್ರೇಲರ್ ಇದೇ ಜೂನ್ 29 ರಂದು ಬಿಡುಗಡೆಯಾಗಲಿದೆ.

LEAVE A REPLY

Please enter your comment!
Please enter your name here