





ಪುತ್ತೂರು: ಪುತ್ತೂರು ತಾಲೂಕು ಮಹಿಳಾ ಒಕ್ಕೂಟಕ್ಕೆ ಸ್ವಂತ ಕಟ್ಟಡ ನೀಡುವಂತೆ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಮಹಿಳಾ ಒಕ್ಕೂಟದ ನಿಯೋಗ ಮನವಿ ಮಾಡಿದೆ.
ಜೂ.24ರಂದು ಮಹಿಳಾ ಒಕ್ಕೂಟದ ಗೌರವಾಧ್ಯಕ್ಷ ಪ್ರೇಮಲತಾ ರಾವ್, ಅಧ್ಯಕ್ಷೆ ಶಾಂತಿ ಟಿ ಹೆಗಡೆ, ಕಾರ್ಯದಶಿ ಪೂರ್ಣಿಮಾ ಶೆಟ್ಟಿ, ಉಪಾಧ್ಯಕ್ಷೆ ಉಮಾ ಡಿ ಪ್ರಸನ್ನ ಅವರು ಶಾಸಕರ ಕಚೇರಿಯಲ್ಲಿ ಮನವಿ ನೀಡಿದರು. ಈ ಸಂದರ್ಭ ಶಾಸಕರು ಸೂಕ್ತವಾದ ಜಾಗದ ಮಾಹಿತಿ ಕೊಡುವಂತೆ ತಿಳಿಸಿರುವುದಾಗಿ ಶಾಂತಿ ಟಿ ಹೆಗಡೆಯವರು ತಿಳಿಸಿದ್ದಾರೆ.





            






