ಉಪ್ಪಿನಂಗಡಿ: ದ.ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮಠ ಪುಳಿತ್ತಡಿ ಇಲ್ಲಿನ ವಿದ್ಯಾರ್ಥಿಗಳಿಗೆ ದಾನಿಗಳು ನೀಡಿದ ಸಮವಸ್ತ್ರ ಹಾಗೂ ಕೊಡೆ ಮತ್ತು ಪುಸ್ತಕಗಳನ್ನು ವಿತರಿಸಲಾಯಿತು.
ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೊಕೇಶ್ ಎಸ್. ಆರ್. ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭ 60 ವಿದ್ಯಾರ್ಥಿಗಳಿಗೆ ಸೌಮ್ಯ ರೈ ಬೆಂಗಳೂರು ಅವರು ತನ್ನ ತಂದೆ- ತಾಯಿಯ ಸ್ಮರಣಾರ್ಥ ನೀಡಿದ ಸಮವಸ್ತ್ರ, ಉದ್ಯಮಿ ನಟೇಶ್ ಪೂಜಾರಿಯವರು ಎಲ್ಲಾ ವಿದ್ಯಾರ್ಥಿಗಳಿಗೆ ನೀಡಿದ ಕೊಡೆಗಳನ್ನು ಹಾಗೂ ಚಾರ್ವಕ ಸಿಎ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶೋಕ್ ಗೌಡ ಪುಳಿತ್ತಡಿ ಅವರು ತನ್ನ ತಂದೆಯ ಸ್ಮರಣಾರ್ಥ ನೀಡಲಾದ ಬರೆಯುವ ಪುಸ್ತಕಗಳನ್ನು ವಿತರಿಸಲಾಯಿತು.
ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಝಕಾರಿಯಾ ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉಪ್ಪಿನಂಗಡಿ ಕ್ಲಸ್ಟರ್‌ನ ಸಿಆರ್‌ಪಿ ಮುಹಮ್ಮದ್ ಅಶ್ರಫ್ ಕೆ., ಪ್ರಮುಖರಾದ ಹೊನ್ನಪ್ಪ ಪೂಜಾರಿ, ರಕ್ಷಾ ರೈ ಪುಳಿತ್ತಡಿ, ಲೀಲಾವತಿ ಪೂಜಾರಿ ಗೌಂಡತ್ತಿಗೆ, ಕಮಲಾವತಿ ಗೌಡ ಪುಳಿತ್ತಡಿ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಸದಸ್ಯರಾದ ರಾಜೇಶ್ ಕಜೆಕ್ಕಾರು, ಬಾಲಕೃಷ್ಣ ದಡ್ಡು, ಅಣ್ಣು ನೆಡ್ಚಿಲ್, ಸುಲೈಮಾನ್ ಕೊಪ್ಪಳ, ಪ್ರೇಮಲತಾ, ಮೀನಾಕ್ಷಿ, ಖೈರುನ್ನಿಸಾ, ಅಬ್ದುಲ್ ರಹಿಮಾನ್, ದೇವಪ್ಪ ಕೊಪ್ಪಳ, ಸುನೀತಾ ಪರಕ್ಕಜೆ, ಮಾಜಿ ಅಧ್ಯಕ್ಷ ಯಾದವ ಆರ್ತಿಲ ಮತ್ತಿತರರು ಉಪಸ್ಥಿತರಿದ್ದರು.
ಶಾಲಾ ಮುಖ್ಯಗುರು ಜೂಲಿಯಾನ ವಾಸ್ ಸ್ವಾಗತಿಸಿದರು. ಶಿಕ್ಷಕಿಯರಾದ ರಮಣಿ ವಂದಿಸಿದರು. ಶುಭಲತಾ ಕಾರ್ಯಕ್ರಮ ನಿರೂಪಿಸಿದರು. ಅಡುಗೆ ಸಿಬ್ಬಂದಿಗಳಾದ ಸುಗಂಧಿ,ಲಲಿತಾ ಸಹಕರಿಸಿದರು.