






ಉಪ್ಪಿನಂಗಡಿ: ಇಲ್ಲಿನ ಜ್ಞಾನ ಭಾರತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಶಾಲಾ ಸಂಚಾಲಕ ಅಬ್ದುಲ್ ರವೂಫ್ ಯು.ಟಿ. ಮಾತನಾಡಿ, ಯೋಗವು ಮಾನವನ ಆರೋಗ್ಯಕ್ಕೆ ಉತ್ತಮ ಎಂದರಲ್ಲದೆ, ಯೋಗದ ಮಹತ್ವವನ್ನು ವಿವರಿಸಿದರು. ಶಾಲಾ ಪ್ರಾಂಶುಪಾಲ ಇಬ್ರಾಹೀಂ ಕಲೀಲ್ ಹೇಂತಾರ್‌ರವರು ಮಾತನಾಡಿ ವಿದ್ಯಾರ್ಥಿಗಳು ಯೋಗಾಭ್ಯಾಸ ಮಾಡಿದರೆ ಕಲಿಕೆಯಲ್ಲಿ ಪ್ರಗತಿ ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.


ಶಾಲೆಯ ಹಿಂದಿ ಶಿಕ್ಷಕರಾದ ಉಷಾ ಬಿ. ಮತ್ತು ಸಹ ಪ್ರಾಧ್ಯಾಪಿಕೆ ಕುಸುಮಿತ ಯೋಗ ತರಬೇತಿ ನಡೆಸಿಕೊಟ್ಟರು. ಈ ಸಂದರ್ಭ ಅರುಣಾ, ತಾಹಿರಾ ಸೇರಿದಂತೆ ಶಾಲೆಯ ಎಲ್ಲಾ ಶಿಕ್ಷಕರು ಉಪಸ್ಥಿತರಿದ್ದರು.













