ನರಿಮೊಗರು: ಕೆಸರುಗದ್ದೆಯಲ್ಲಿ ವಿದ್ಯಾರ್ಥಿಗಳಿಗೆ ಭತ್ತ ಬೇಸಾಯದ ಪಾಠ

0

ಪುತ್ತೂರು: ಜಿಟಿ ಜಿಟಿ ಮಳೆಯ ಸಿಂಚನದ ಜೊತೆ ಸಾಂದೀಪನಿ ಕಬ್,ಬುಲ್ ಬುಲ್, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ತರಗತಿ ಪಾಠದ ಹೊರತಾಗಿ ಗದ್ದೆಯತ್ತ ಪಯಣಿಸಿ ಭತ್ತ ಬೇಸಾಯದ ಪಾಠವನ್ನು ತಿಳಿದುಕೊಂಡರು.ಆದರೆ ಅಲ್ಲಿ ಶಿಕ್ಷಕರ ಬದಲು ಪರಿಶ್ರಮಿ ರೈತರೊಬ್ಬರು ವಿದ್ಯಾರ್ಥಿಗಳಿಗೆ ಕೃಷಿ ಪಾಠ ಹೇಳಿಕೊಟ್ಟರು.


ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಗಳ ಇಲ್ಲಿನ ಸ್ಕೌಟ್ಸ್, ಗೈಡ್ಸ್, ಕಬ್,ಬುಲ್ ಬುಲ್ ವಿದ್ಯಾರ್ಥಿಗಳಿಗೆ ನರಿಮೊಗರಿನ ಜಯರಾಮ ಪ್ರಭು ಇವರ ಗದ್ದೆಯಲ್ಲಿ ಉಳುಮೆ,ನಾಟಿ ಮಾಡುವ ವಿಧಾನದ ಮಾಹಿತಿ ಕಾರ್ಯಕ್ರಮವು ನಡೆಯಿತು.ಗದ್ದೆಯಲ್ಲಿ ಉಳುಮೆ, ನಾಟಿ ಮಾಡುವ ಕುರಿತಾದ ಮಾಹಿತಿಯನ್ನು ಜಯರಾಮ ಪ್ರಭು ಇವರು ತಿಳಿಸಿಕೊಟ್ಟರು.


ವಿದ್ಯಾರ್ಥಿಗಳು ಸ್ವತಃ ತಾವೇ ಗದ್ದೆಯಲ್ಲಿ ನಾಟಿ ಮಾಡುವ ಮೂಲಕ ಹೊಸ ಜ್ಞಾನವನ್ನು ಪಡೆದುಕೊಂಡರು.
ಕಾರ್ಯಕ್ರಮಕ್ಕೆ ಸಂಸ್ಥೆಯ ಸಂಚಾಲಕ ಭಾಸ್ಕರ ಆಚಾರ್ ಹಿಂದಾರು, ಮುಖ್ಯೋಪಾಧ್ಯಾಯರಾದ ಜಯಮಾಲಾ‌.ವಿ.ಎನ್.ಇವರು ಮಾರ್ಗದರ್ಶನ ಮಾಡಿದರು.ಈ ವಿನೂತನ ಕಾರ್ಯಕ್ರಮದಲ್ಲಿ ಬುಲ್ ಬುಲ್ ಪ್ಲಾಕ್ ಲೀಡರ್ ಅನಿತಾ‌.ಕೆ , ಸ್ಕೌಟ್ಸ್ ಶಿಕ್ಷಕ ಮುರಳಿಕೃಷ್ಣ. ‌ಪಿ, ಹರೀಶ್.ಕೆ,ಗೈಡ್ಸ್ ಕ್ಯಾಪ್ಟನ್ ರೇಷ್ಮಾ, ಯೋಗ ಶಿಕ್ಷಕ ನವೀನ್ ಕುಮಾರ್, ಸಹಶಿಕ್ಷಕ ರಮೇಶ್, ಅಕ್ಷತಾ ಇವರು ಉಪಸ್ಥಿತರಿದ್ದರು. ಸಂಸ್ಥೆಯ ಶಿಕ್ಷಕ ವೃಂದ ಹಾಗೂ ಸಿಬ್ಬಂದಿವರ್ಗದವರು ಈ ಕಾರ್ಯಕ್ರಮಕ್ಕೆ ಸಹಕರಿಸಿದರು.

LEAVE A REPLY

Please enter your comment!
Please enter your name here