ದರ್ಬೆ ನಿವಾಸಿ ಆನಂದ ಶೆಟ್ಟಿ ಬಾಳುಪೇಟೆ ನಿಧನ

0

ಪುತ್ತೂರು: ಮೂಲತಃ ಸಕಲೇಶಪುರದ ಬಾಳುಪೇಟೆ ನಿವಾಸಿಯಾಗಿದ್ದು ಕಳೆದ ಹಲವು ವರ್ಷಗಳಿಂದ ಪುತ್ತೂರಿನ ದರ್ಬೆ ಕೃಷಿ ಇಲಾಖೆ ಕಚೇರಿ ಬಳಿ ವಾಸವಿರುವ ಆನಂದ ಶೆಟ್ಟಿ (62 ವ)ವಿಧಿವಶರಾಗಿದ್ದಾರೆ. ದಿ.ನಾರಾಯಣ ಶೆಟ್ಟಿ ಸರಸ್ವತಿ ಶೆಟ್ಟಿ ದಂಪತಿಗಳ ಪುತ್ರರಾಗಿರುವ ಆನಂದ ಶೆಟ್ಟಿ ಹಾಸನದಲ್ಲಿ ಗುತ್ತಿಗೆ ವ್ಯವಹಾರ ನಡೆಸುತ್ತಿದ್ದರು. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಡಯಾಲಿಸಿಸ್‌ ಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದ ಅವರು ಇಂದು ಕೊನೆಯುಸಿರೆಳೆದಿದ್ದಾರೆ.
ಮೃತರು ಇಬ್ಬರು ಸಹೋದರರು ಇಬ್ಬರು ಸಹೋದರಿಯರು ಸೇರಿದಂತೆ ಪತ್ನಿ ಸುಜಾತ ಶೆಟ್ಟಿ ಮತ್ತು ಇಬ್ಬರು ಪುತ್ರಿಯನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here