ಜು.21:’ಗಂಗಾಧರ ಬೆಳ್ಳಾರೆ ಮಾತಿನ ಬೆಳಕು’ ಒಂದು ದಿನದ ಕಾರ್ಯಗಾರ- ಲೇಖನ ಸ್ಪರ್ಧೆಗೆ ಆಹ್ವಾನ

0

ಪುತ್ತೂರು: ವರ್ತನಾ ವಿಶ್ಲೇಷಕ, ಆಪ್ತ ಸಲಹೆಗಾರ,ಸಾಹಿತಿಗಳಾಗಿದ್ದ ದಿ. ಗಂಗಾಧರ ಬೆಳ್ಳಾರೆ ಅವರನ್ನು ನೆನಪಿಸುವ ಸಲುವಾಗಿ ಜು.21ಕ್ಕೆ ನಾಡಿನ ಖ್ಯಾತ ವರ್ತನಾ ವಿಶ್ಲೇಷಕರು, ಆಪ್ತ ಸಲಹೆಗಾರರು, ಚಿಂತಕರಿಂದ ’ಗಂಗಾಧರ ಬೆಳ್ಳಾರೆ ಮಾತಿನ ಬೆಳಕು’ ಎಂಬ ಒಂದು ದಿನದ ಕಾರ್ಯಗಾರವನ್ನು ಪುತ್ತೂರಿನಲ್ಲಿ ಹಮ್ಮಿಕೊಳ್ಳಲಾಗಿದೆ.


ಈ ಒಂದು ದಿನದ ಕಾರ್ಯದಲ್ಲಿ ಗಂಗಾಧರ ಬೆಳ್ಳಾರೆ ಅವರ ಮಾತಿನ ಹಾಗೂ ಬರೆಹದ ಅಭಿಮಾನಿಗಳು, ಅವರ ಶಿಷ್ಯ ವರ್ಗ, ಅವರಿಂದ ಉಪ ಕೃತರಾದವರು ಭಾಗವಹಿಸಬಹುದಾಗಿದೆ. ಪ್ರವೇಶ ಉಚಿತ, ನೊಂದಣಿ ಕಡ್ಡಾಯವಾಗಿದೆ. ಕಾರ್ಯಗಾರದಲ್ಲಿ ಭಾಗವಹಿಸಲಿಚ್ಚಿಸುವವರು ತಮ್ಮ ಹೆಸರು ವಿಳಾಸವನ್ನು ಜು.15ರ ಒಳಗೆ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿರುವ ಪುತ್ತೂರು ಉಮೇಶ್ ನಾಯಕ್ ಅವರ ದೂರವಾಣಿ ಸಂಖ್ಯೆ 9844401295 ಗೆ ವಾಟ್ಸಪ್ ಮೂಲಕ ಕಳುಹಿಸತಕ್ಕದ್ದು.


ಲೇಖನ ಸ್ಪರ್ಧೆ:
ಈ ಕಾರ್ಯಕ್ಕೆ ಸಂಬಂಧಿಸಿ ’ನನ್ನ ಜೀವನದಲ್ಲಿ ಗಂಗಾಧರ ಬೆಳ್ಳಾರೆ ಮಾತಿನ ಪರಿಣಾಮ’ ಎಂಬ ವಿಚಾರದಲ್ಲಿ ಲೇಖನ ಸ್ಪರ್ಧೆ ಏರ್ಪಡಿಸಲಾಗಿದೆ. ಲೇಖನ 750 ಪದ ಮೀರಬಾರದು, ಲೇಖನವನ್ನು ಕನ್ನಡದಲ್ಲಿ ಟೈಪ್ ಮಾಡಿ ವಾಟ್ಸಪ್ ಮೂಲಕವೇ ಕಳಿಸತಕ್ಕದ್ದು, ಲೇಖನದ ವಸ್ತು ವಿಚಾರ ಗಂಗಾಧರ ಬೆಳ್ಳಾರೆ ಯವರ ವರ್ತನಾ ವಿಶ್ಲೇಷಣಾ ಕಾರ್ಯಗಾರದಿಂದ ತಮಗಾದ ಪರಿಣಾಮದ ಕುರಿತು, ಅವರ ಕೃತಿಯನ್ನು ಓದಿ ತಮಗಾಗಿರುವ ಪರಿಣಾಮದ ಕುರಿತು, ಅವರ ಒಡನಾಟದಿಂದ ತಮಗಾಗಿರುವ ಪರಿಣಾಮದ ಕುರಿತು, ಅವರ ವಿಚಾರವನ್ನು ಇತರಿಂದ ತಿಳಿದು ತಮಗಾದ ಪರಿಣಾಮದ ಕುರಿತು ಬರೆಯಬಹುದಾಗಿದೆ. ಲೇಖನವು ಗಂಗಾಧರ ಬೆಳ್ಳಾರೆ ಅವರ ವಿಚಾರ ಹೊರತುಪಡಿಸಿ ಅನ್ಯ ಮನೋವೈಜ್ಞಾನಿಕ ಅಥವಾ ವರ್ತನಾ ವಿಶ್ಲೇಷಣಾ ವಿಚಾರಗಳಿಗೆ ಅವಕಾಶ ಇಲ್ಲ. ಉತ್ತಮ ಲೇಖನಕ್ಕೆ ಪ್ರಥಮ, ದ್ವಿತೀಯ, ತೃತೀಯ ಹಾಗೂ ಪ್ರೋತ್ಸಾಹಕ ಪುಸ್ತಕ ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು. ಉತ್ತಮ ಲೇಖನವನ್ನು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಂತರ್ಜಾಲ ತಾಣದಲ್ಲಿ ಪ್ರಕಟಿಸಲಾಗುವುದು, ಲೇಖನವನ್ನು 9844401295 ಗೆ ವಾಟ್ಸಪ್ಪ್ ಮಾಡ ಬೇಕು, ವಿಶ್ವದ ಯಾವುದೇ ಮೂಲೆಯಲ್ಲಿರುವ ಗಂಗಾಧರ ಬೆಳ್ಳಾರೆ ಅವರ ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಬಹುದು, ಬಹುಮಾನವನ್ನು ಜು.21ರಂದು ಪುತ್ತೂರಿನಲ್ಲಿ ನಡೆಯುವ ಕಾರ್ಯಗಾರದಲ್ಲಿ ನೀಡಿ ಗೌರವಿಸಲಾಗುವುದು ಎಂದು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here