ನೆಲ್ಯಾಡಿ: ಎಂ.ಐ ಎಂಟರ್‌ಪ್ರೈಸಸ್ ‘ ಪೈಂಟ್ಸ್ ಮಾರಾಟ ಮಳಿಗೆ’ ಶುಭಾರಂಭ

0

ನೆಲ್ಯಾಡಿ: ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯ ಬಳಿ ಪೈಂಟ್ಸ್ ಮಾರಾಟ ಮಳಿಗೆ ಎಂ.ಐ.ಎಂಟರ್‌ಪ್ರೈಸಸ್ ಜೂ.26ರಂದು ಬೆಳಿಗ್ಗೆ ಶುಭಾರಂಭಗೊಂಡಿತು.
ನೂತನ ಮಳಿಗೆಯನ್ನು ಸಂಸ್ಥೆಯ ಮಾಲಕ ಮೊಹಮ್ಮದ್ ಇಕ್ಬಾಲ್ ಅವರ ಮಾತೃಶ್ರೀ ಕುಲ್ಸು ಮೊರಂಕಳ ಅವರು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ನೆಲ್ಯಾಡಿ ಬದ್ರಿಯಾ ಜುಮ್ಮಾ ಮಸ್ಜೀದ್‌ನ ಧರ್ಮಗುರುಗಳಾದ ಶೌಕತ್ತಾಲಿ ಅಮಾನಿ ಅವರು ದು:ವಾ ನೆರವೇರಿಸಿ ಶುಭಹಾರೈಸಿದರು.

ಕೌಕ್ರಾಡಿ ಗ್ರಾ.ಪಂ.ಅಧ್ಯಕ್ಷ ಲೋಕೇಶ್ ಬಾಣಜಾಲು, ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಸಲಾಂ ಬಿಲಾಲ್, ಪಿಡಿಒ ಆನಂದ ಗೌಡ, ಲೆಕ್ಕ ಸಹಾಯಕ ಅಂಗು, ನೋಟರಿ ನ್ಯಾಯವಾದಿ ಇಸ್ಮಾಯಿಲ್ ನೆಲ್ಯಾಡಿ, ತಾ.ಪಂ.ಮಾಜಿ ಸದಸ್ಯೆ ಆಶಾ ಲಕ್ಷ್ಮಣ್, ನೆಲ್ಯಾಡಿ ವರ್ತಕ ಸಂಘದ ಅಧ್ಯಕ್ಷರಾದ ಸತೀಶ್ ಕೆ.ಎಸ್., ನೆಲ್ಯಾಡಿ ಹೊರಠಾಣೆ ಹೆಡ್‌ಕಾನ್‌ಸ್ಟೇಬಲ್ ಕುಶಾಲಪ್ಪ ನಾಯ್ಕ್, ನೆಲ್ಯಾಡಿ ಗ್ರಾ.ಪಂ.ಸದಸ್ಯರು, ಸಿಬ್ಬಂದಿಗಳು, ಕಂಪನಿಯ ಪ್ರತಿನಿಧಿಗಳು ಸೇರಿದಂತೆ ಹಲವು ಮಂದಿ ಆಗಮಿಸಿ ನೂತನ ಸಂಸ್ಥೆಗೆ ಶುಭಹಾರೈಸಿದರು.

ಎಂ.ಐ.ಎಂಟರ್‌ಪ್ರೈಸಸ್‌ನ ಮಾಲಕರು, ನೆಲ್ಯಾಡಿ ಗ್ರಾ.ಪಂ.ಸದಸ್ಯರೂ ಆದ ಮೊಹಮ್ಮದ್ ಇಕ್ಬಾಲ್‌ರವರು ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿ, ನಮ್ಮಲ್ಲಿ ಎಲ್ಲಾ ತರಹದ ಪೈಂಟ್ಸ್‌ಗಳು ಸ್ಪರ್ಧಾತ್ಮಕ ದರದಲ್ಲಿ ಲಭ್ಯವಿದೆ ಎಂದು ಹೇಳಿ ಗ್ರಾಹಕರ ಸಹಕಾರ ಕೋರಿದರು.

LEAVE A REPLY

Please enter your comment!
Please enter your name here