ಉಪ್ಪಿನಂಗಡಿ : ಮುಂಗಾರು ತೀವ್ರತೆಯನ್ನು ಪಡೆದಿದ್ದು, ಬುಧವಾರದಂದು ಭಾರೀ ಮಳೆ ಸುರಿದಿದ್ದು, ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿಯು ಮೈ ತುಂಬಿ ಹರಿಯುತ್ತಿದೆ.
ಪಶ್ಚಿಮಘಟ್ಟ ಪ್ರದೇಶದಲ್ಲಿಯೂ ಭಾರೀ ಮಳೆಯಾಗುತ್ತಿರುವುದರಿಂದ ನದಿಯ ನೀರಿನ ಮಟ್ಟದಲ್ಲಿ ಭಾರೀ ಹೆಚ್ಚಳ ಕಂಡು ಬಂದಿದೆ.
ಸಮುದ್ರ ಮಟ್ಟಕ್ಕಿಂತ 26.1 ಮೀಟರ್ ಎತ್ತರದಲ್ಲಿ ನದಿಯ ನೀರಿನ ಹರಿವು ದಾಖಲಾಗಿದ್ದು, ಒಂದೇ ದಿನದಲ್ಲಿ 2 ಮೀಟರ್ ನಷ್ಟು ನೀರು ಹೆಚ್ಚಳ ಕಂಡಿದೆ. ಬುಧವಾರದಂದು ದಿನವಿಡೀ ಯಾವುದೇ ಸಿಡಿಲಾರ್ಭಟವಿಲ್ಲದೆ ಬಿರುಸಿನ ಮಳೆಯಾಗಿದ್ದು, ಯಾವುದೇ ಹಾನಿಯ ವರದಿಯಾಗಿಲ್ಲ.